ವಾಷಿಂಗ್ಟನ್: ಟೆಕ್ಸಾಸ್ ನ ಪ್ರಾಥಮಿಕ ಶಾಲೆಯಲ್ಲಿ ಬಂಧೂಕಾರಿ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ 19 ಮಂದಿ ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಸೇರಿದಂತೆ 21 ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ಮಂಗಳವಾರ (ಮೇ 24) ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಒನ್ ಪ್ಲಸ್ 10 ಪ್ರೊ 5ಜಿ : ಉತ್ತಮ ಅಂಶಗಳುಳ್ಳ ಫ್ಲಾಗ್‍ಶಿಪ್ ಫೋನ್
ಘಟನೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ದೇಶದಲ್ಲಿನ ಗನ್ ಲಾಬಿಯನ್ನು ಖಂಡಿಸಿದ್ದು, ಇಂತಹ ಸಾಮೂಹಿಕ ಗುಂಡಿನ ದಾಳಿ ಘಟನೆಯನ್ನು ಕೊನೆಗಾಣಿಸುವುದಾಗಿ ಪ್ರತಿಜ್ಞೆ ಮಾಡಿರುವುದಾಗಿ ವರದಿ ವಿವರಿಸಿದೆ.
18 ವರ್ಷದ ಯುವಕನೊಬ್ಬ ಪ್ರಾಥಮಿಕ ಶಾಲೆಗೆ ನುಗ್ಗಿ ಈ ಪೈಶಾಚಿಕ ಕೃತ್ಯ ಎಸಗಿದ್ದು, ಪೊಲೀಸ್ ಅಧಿಕಾರಿಗಳ ದಾಳಿಗೆ ಗುಂಡಿನ ದಾಳಿ ನಡೆಸಿದ ಯುವಕ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. 2012ರಲ್ಲಿ ಕನೆಕ್ಟಿಕಟ್ ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಯುವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಅತೀ ಭೀಕರ ಘಟನೆ ಇದಾಗಿದೆ.
19 ಮಕ್ಕಳು ಹಾಗೂ ಇಬ್ಬರು ಶಿಕ್ಷಕರು ಸಾವನ್ನಪ್ಪಿರುವ ಘಟನೆಯಿಂದ ಅಮೆರಿಕ ಹಾಗೂ ಜಾಗತಿಕ ಮಟ್ಟದಲ್ಲಿ ಆಘಾತ ಮೂಡಿಸಿದ್ದು, ಅಮೆರಿಕದಲ್ಲಿನ ಗನ್ ಸಂಸ್ಕೃತಿಗೆ ಹೆಚ್ಚಿನ ಕಡಿವಾಣ ಹಾಕಬೇಕಾಗಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ.