Advertisement

ಪರೀಕ್ಷಾ ಕಾಲ

03:50 AM Mar 24, 2017 | Team Udayavani |

ಈಗ ಎಲ್ಲ ಕಡೆ ಪರೀಕ್ಷೆಯ ಭರಾಟೆ. ಈ ಬಾರಿ ತುಂಬಾ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆಯಂತೆ. ಸಿಸಿ ಟಿವಿ ಕಣ್ಗಾವಲು ಇರುತ್ತದಂತೆ. ಕೆಲವು ನಿರ್ದಿಷ್ಟ ಕಾಲೇಜುಗಳನ್ನು ಹೊರತುಪಡಿಸಿ ಆಯಾ ಕಾಲೇಜಿನ ವಿದ್ಯಾರ್ಥಿಗಳು ಅವರದೇ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲವಂತೆ. ನಕಲು ಮಾಡುವಾಗ ಸಿಕ್ಕಿಬಿದ್ದರೆ ಮುಂದಿನ ಮೂರು ವರುಷ ಪರೀಕ್ಷೆ ಬರೆಯಲು ಸಾಧ್ಯವಿಲ್ಲವಂತೆ. ಹಾಗಂತೆ, ಹೀಗಂತೆ ಎಂದು ವಿದ್ಯಾರ್ಥಿಗಳು ಅವರಿವರು ಹೇಳಿದ್ದನ್ನು ಕೇಳಿದ್ದನ್ನು ಕಂಡದ್ದನ್ನೆಲ್ಲ ತಲೆಗೆ ಹಾಕಿಕೊಂಡು ಆತಂಕ ಪಡುವ ಅಗತ್ಯ ಖಂಡಿತ ಇಲ್ಲ. ಯಾಕೆ ಎನ್ನುತ್ತೀರಾ? 

Advertisement

ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯೋ ವಿದ್ಯಾರ್ಥಿಗೆ ಯಾವ ನಿಯಮಗಳು ಇದ್ದರೆಷ್ಟು ಬಿಟ್ಟರೆಷ್ಟು? ಅದನ್ನು ಕಟ್ಟಿಕೊಂಡು ನಿಮಗೇನಾಗಬೇಕು? ಅಲ್ಲವೆ? ಮೇಲೆ ಹೇಳಿದ್ದೆಲ್ಲಾ ಸತ್ಯವೇ. ಆದರೆ, ಅವೆಲ್ಲ ವಿದ್ಯಾರ್ಥಿಗಳಾದ ನಮಗೆ ಖಂಡಿತ ಆವಶ್ಯಕವಿಲ್ಲ. ಹಾಗಂತ ಕನಿಷ್ಠ ತಿಳುವಳಿಕೆ ಆ ಬಗೆಗೆ ಹೊಂದಿರಬೇಕಾದದ್ದು ನಮ್ಮ ಕರ್ತವ್ಯ ಕೂಡ. 

ಅದೇನೇ ಇರಲಿ. ಯಾರೇನೇ ಅಂದರೂ ಪರೀಕ್ಷೆ ಎನ್ನುವುದು ನಿಮ್ಮ ಭವಿಷ್ಯವನ್ನು ನಿರ್ಧರಿಸಬಲ್ಲ ತಾಕತ್ತಿರುವುದು ಅನ್ನೋದು ನಿಮ್ಮ ಗಮನದಲ್ಲಿರಲಿ. ಪರೀಕ್ಷೆಯನ್ನು ಎಂದಿಗೂ ಹಗುರವಾಗಿ ತೆಗೆದುಕೊಳ್ಳದಿರಿ. ನಿಮ್ಮ ತಂದೆತಾಯಿಗಳು ನಿಮ್ಮ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿಟ್ಟು ನಿಮ್ಮನ್ನು ಪರೀಕ್ಷೆಗೆ ಸೇರಿಸಿರುವುದನ್ನು ಮರೆಯಬೇಡಿ. ನಿಮ್ಮ ಉತ್ತಮ ಫ‌ಲಿತಾಂಶ ಎನ್ನುವುದು ನಿಮ್ಮ ಹೆತ್ತವರಿಗೆ ಬಹಳ ಸಂತೋಷವನ್ನು ನೀಡುತ್ತದೆ ಎನ್ನುವಾಗ ಆ ಸಂತೋಷದಿಂದ ಅವರನ್ನು ವಂಚಿತರನ್ನಾಗಿ ಮಾಡಬೇಡಿ. 

ಪ‌ರೀಕ್ಷೆ ಎಂದರೆ ಭಯಪಡಲು ಅದೇನು ಸಾವು-ಬದುಕಿನ ಪ್ರಶ್ನೆ ಅಲ್ಲ. ಆದರೆ ತೇರ್ಗಡೆಯಾಗುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ , ಪರೀಕ್ಷೆಗೆ ಮಹತ್ವ  ನೀಡುವುದಿಲ್ಲ ಎಂದರೆ ಅದು ನಿಮ್ಮ ಹೆತ್ತವರಿಗೆ, ಗುರುಗಳಿಗೆ ಮತ್ತು ನಿಮಗೆ ನೀವೇ ಮಾಡಿಕೊಳ್ಳುವ ದ್ರೋಹವಲ್ಲದೇ ಬೇರೆನೂ ಅಲ್ಲ. ಹಾಗಾಗಿ ನಿಮ್ಮ ಪ್ರಾಮಾಣಿಕ ಪರಿಶ್ರಮ ಹಾಕಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆಯುವತ್ತ ಪ್ರಯತ್ನಿಸಿ. 

ಅಂದ ಹಾಗೆ  ಓರ್ವ ವಿದ್ಯಾರ್ಥಿಯಾಗಿ ನೀವು ಪರೀಕ್ಷೆಗೆ ಹೋಗುವ ಮೊದಲು ಮತ್ತು ಪರೀಕ್ಷಾ ಕೇಂದ್ರದಲ್ಲೂ ಅನುಸರಿಸಲು ಯೋಗ್ಯವಾದ ಈ ಕೆಳಗಿನ ಅಂಶಗಳು ನಿಮಗೆ ಸಹಾಯವಾಗಬಲ್ಲವು. ಒಮ್ಮೆ ಓದಿಕೊಂಡುಬಿಡಿ.

Advertisement

1 ಕನಿಷ್ಠ ಅರ್ಧ ಗಂಟೆ ಮೊದಲು ನೀವು ನಿಮ್ಮ ಪರೀಕ್ಷೆ ಕೇಂದ್ರದಲ್ಲಿರುವುದು ಒಳ್ಳೆಯದು. ಅಲ್ಲಿ ನಿಮ್ಮ ಕೊಠಡಿಗಳನ್ನು ಹುಡುಕಿಕೊಂಡು ಅಲೆಯಬೇಡಿ. ನಿಮಗೆ ತಿಳಿದಿಲ್ಲವಾದರೆ ಅಲ್ಲಿನ ಸಿಬ್ಬಂದಿಗಳು ಅಥವಾ ಅಲ್ಲಿನ ಅಧ್ಯಾಪಕರನ್ನು  ಕೇಳಿ ತಿಳಿದುಕೊಂಡು ಬಿಡಿ.

2ಮನೆಯಿಂದ ಹೊರಡುವ ಮೊದಲು ನಿಮ್ಮ ಬಳಿ ಪ್ರವೇಶಪತ್ರ. (ಹಾಲ್‌ ಟಿಕೇಟ್‌), ಶಾಲಾ ಗುರುತುಚೀಟಿ ಇರುವುದನ್ನ ಖಾತ್ರಿಪಡಿಸಿಕೊಳ್ಳಿ.

3ಬಾಲ್‌ ಪಾಯಿಂಟ್‌ ಪೆನ್‌(ಎರಡು ಮತ್ತು ನೀಲಿ ಬಣ್ಣ¨ªಾದರೆ ಒಳ್ಳೆಯದು), ಪೆನ್ಸಿಲ್‌, ರಬ್ಬರ್‌, ಶಾರ್ಪನರ್‌, ಸ್ಕೇಲ್‌ ಇನ್ನಿತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬಿಡಿ. ಪೆನ್ನಿನ ಶಾಯಿ ತೀರಾ ಢಾಳಾಗಿ ಅಥವಾ ಪೇಲವವಾಗಿ ಇರದಂತೆ ನೋಡಿಕೊಳ್ಳಿ.

4ಕ್ಯಾಲ್ಕುಲೇಟರ್‌ ಅಗತ್ಯವಾದರೆ ತೆಗೆದುಕೊಂಡು ಬಿಡಿ. ನೆನಪಿರಲಿ, ಸ್ಟ್ಯಾಟಿಸ್ಟಿಕ್ಸ್‌ ಪರೀಕ್ಷೆಯೊಂದನ್ನು ಹೊರತುಪಡಿಸಿ ಉಳಿದ ಪರೀಕ್ಷೆಗಳಿಗೆ ಸೈಂಟಿಫಿಕ್‌ ಕ್ಯಾಲ್ಕುಲೇಟರ್‌ಗಳನ್ನು ತೆಗೆದುಕೊಂಡು ಹೋಗಲು ಅವಕಾಶ ಇಲ್ಲ.

5ನಿಮ್ಮ ಜೇಬುಗಳಲ್ಲಿ, ಪೌಚ್‌ಗಳಲ್ಲಿ ಅನಗತ್ಯವಾದ ಕಾಗದದ ತುಣುಕುಗಳಿದ್ದರೆ ತೆಗೆದುಹಾಕಿಬಿಡಿ.

6ಉತ್ತರ ಪತ್ರಿಕೆ ನೀಡಿದ ತಕ್ಷಣ ಅದರಲ್ಲಿ ಎಲ್ಲಾ  (ಮಾಮೂಲಿಯಾಗಿ ಹದಿನಾರು) ಪುಟಗಳು ಸರಿಯಾಗಿದೆಯೇ ಎಂದು ನೋಡಿ. ಏನಾದರೂ ಸಮಸ್ಯೆಯಿದ್ದಲ್ಲಿ ಎದ್ದುನಿಂತು ಪರೀಕ್ಷಕರ ಗಮನಕ್ಕೆ ತನ್ನಿ.

7ಪ್ರಶ್ನೆಪತ್ರಿಕೆಗಳನ್ನು ನಿಮಗೆ ನೀಡಿದಾಗ ಅದರಲ್ಲಿ ನಿಮ್ಮ ರಿಜಿಸ್ಟರ್‌ ನಂಬರ್‌ ಬರೆದು ಹತ್ತು ನಿಮಿಷ ಪ್ರಶ್ನೆ ಪತ್ರಿಕೆಯನ್ನು ಪೂರ್ತಿಯಾಗಿ ಓದಿಕೊಳ್ಳಿ. ಸಾಧ್ಯವಾದರೆ ಆಯ್ಕೆ ಇರುವ ಪ್ರಶ್ನೆಗಳಲ್ಲಿ ನಿಮ್ಮ ಆಯ್ಕೆಯನ್ನು ನಿರ್ಧರಿಸಿಕೊಂಡು ಬಿಡಿ.

8ಅಪ್ಪಿತಪ್ಪಿಯೂ ಪ್ರಶ್ನೆಪತ್ರಿಕೆಯ ಮೇಲೆ ಏನನ್ನೂ ಬರೆಯಬೇಡಿ.

9ಉತ್ತರ ಪತ್ರಿಕೆಗಳನ್ನು ನೀಡಿದ ಬಳಿಕ ಅದರಲ್ಲಿ ನಿಮ್ಮ ರಿಜಿಸ್ಟರ್‌ ನಂಬರನ್ನು , ಸಬೆjಕ್ಟ್ ಮತ್ತು ಸಬೆjಕ್ಟ್ ಕೋಡನ್ನು ಸರಿಯಾಗಿ ನಮೂದಿಸಿರಿ.

10ಉತ್ತರಪತ್ರಿಕೆಯ ಎರಡನೇ ಪುಟದಲ್ಲಿ ಮುದ್ರಣದ ಅಚ್ಚುಗಳೇನಾದರೂ ಇದ್ದು ಬರೆಯಲು ಸಹ್ಯವಲ್ಲ ಎನ್ನಿಸಿದರೆ ಮೂರನೇ ಪುಟದಿಂದ ನಿಮ್ಮ ಉತ್ತರವನ್ನು ಆರಂಭಿಸಿ.

11ಉತ್ತರಿಸುವಾಗ ಆಯಾಯ ಪ್ರಶ್ನೆಯ ಎದುರಿಗಿರುವ ಕ್ರಮಸಂಖ್ಯೆಯನ್ನೇ ಬರೆಯಿರಿ. ಉತ್ತರಕ್ಕೆ ನಿಮ್ಮದೇ ಪ್ರಶ್ನೆ  ಸಂಖ್ಯೆಯನ್ನು ದಯವಿಟ್ಟು ಕೊಡಲು ಹೋಗಬೇಡಿ.

12ಒತ್ತೂತ್ತಾಗಿ ಉತ್ತರಗಳನ್ನು ಬರೆಯದಿರಿ. ಪ್ರತಿಯೊಂದು ವಿಭಾಗಗಳನ್ನು ನಮೂದಿಸುವುದು ಒಳ್ಳೆಯದು.

13ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಿದ ಬಳಿಕ ಒಂದು ಗೆರೆ ಬಿಟ್ಟು  ಮುಂದಿನ ಪ್ರಶ್ನೆಗೆ ಉತ್ತರಿಸಿರಿ.

14ನೆನಪಿರಲಿ ನಿಮಗೆ ಅಗತ್ಯವಿರುವಷ್ಟು ಹೆಚ್ಚುವರಿ ಹಾಳೆಗಳನ್ನು ಒದಗಿಸಲಾಗುತ್ತದೆ.

15ಪ್ರತೀ ಹೆಚ್ಚುವರಿ ಹಾಳೆಗಳನ್ನು ತೆಗೆದುಕೊಂಡಾಗ ಅದರ ಮೇಲೆ ನಿಮ್ಮ ರಿಜಿಸ್ಟರ್‌ ನಂಬರನ್ನು ಬರೆದುಬಿಡಿ. ಜೊತೆಯÇÉೇ ಹೆಚ್ಚುವರಿ ಹಾಳೆಯ ಕ್ರಮಸಂಖ್ಯೆಯನ್ನು ನಿಮ್ಮ ಉತ್ತರಪತ್ರಿಕೆಯ ಮೊದಲ ಪುಟದಲ್ಲಿ ಇರುವ ಕಾಲಂನಲ್ಲಿ ಬರೆದುಬಿಡಿ.

16ಎಲ್ಲವನ್ನೂ ಉತ್ತರಿಸಿದ ಬಳಿಕ ನೀವು ಒಟ್ಟು ಎಷ್ಟು ಪುಟಗಳನ್ನು ಉಪಯೋಗಿಸಿದ್ದೀರಿ ಎನ್ನುವುದನ್ನು ನಿಮ್ಮ ಉತ್ತರ ಪತ್ರಿಕೆಯ ಮೊದಲ ಪುಟದಲ್ಲಿ ಇರುವ ಕಾಲಂನಲ್ಲಿ ಬರೆದುಬಿಡಿ.

17ಉತ್ತರ ಪತ್ರಿಕೆಗಳನ್ನು ಸರಿಯಾಗಿ ನೂಲಿನಿಂದ ಬಿಗಿದು ಕಟ್ಟಿಬಿಡಿ.

18ಪರೀಕ್ಷೆಯ ಮಧ್ಯದಲ್ಲಿ ಕುಡಿಯಲು ನೀರು ಬೇಕೆನಿಸಿದಲ್ಲಿ ನೇರವಾಗಿ ಎದ್ದುನಿಂತು ಪರೀಕ್ಷಕರ ಬಳಿ ಕೇಳಿಬಿಡಿ. ಈ ವಿಷಯದಲ್ಲಿ ಸಂಕೋಚ ಬೇಡ.

19ಪರೀಕ್ಷಾ  ಕೇಂದ್ರದಲ್ಲಿ ಇತರರು ಏನು ಮಾಡುತ್ತಿ¨ªಾರೆ ಎನ್ನುವ ಕೆಟ್ಟ ಕುತೂಹಲ ನಿಮಗೆ ಖಂಡಿತಾ ಬೇಡ. ಸ್ನೇಹಿತರನ್ನು ನೋಡಿ ಅನವಶ್ಯಕ ನಗುವ ಅಭ್ಯಾಸ  ಬೇಡ.

20ಪರೀಕ್ಷಾ ಕೇಂದ್ರದಲ್ಲಿ ನಿಮಗೆ ಏನೇ ಸಮಸ್ಯೆಗಳಿದ್ದರೂ ಅಥವಾ ಏನಾದರೂ  ನೆರವು (ಉತ್ತರಕ್ಕಲ್ಲ) ಬೇಕೆನಿಸಿದಲ್ಲಿ, ಹೆಚ್ಚುವರಿ ಹಾಳೆ ಬೇಕೆನಿಸಿದಲ್ಲಿ ಎದ್ದುನಿಂತು ಪರೀಕ್ಷಕರ ಬಳಿ  ಕೇಳುವ ಅಥವಾ ಹೇಳುವ ಗೌರವದ ನಡೆ ಇರಲಿ.

21ಅಸ್ತವ್ಯಸ್ತವಾಗಿ ಕುಳಿತುಕೊಳ್ಳುವುದು, ಉತ್ತರ ಪತ್ರಿಕೆಯನ್ನು ಹಿಂದಿನವರಿಗೆ ಕಾಣಿಸುವಂತೆ ಕೈಯಲ್ಲಿ ಎತ್ತಿ ಹಿಡಿಯುವುದು, ಕಾಪಿ ಹೊಡೆಯುವುದು, ಇನ್ನೊಬ್ಬರಿಗೆ ಹೇಳಿಕೊಡುವುದು, ಅನವಶ್ಯಕ ಶಬ್ದಗಳನ್ನು ಮಾಡುವುದು ಇತ್ಯಾದಿಗಳನ್ನು ಮಾಡಲೇಬೇಡಿ.

22ಶೀತವಾಗಿದ್ದರೆ ದಯವಿಟ್ಟು ಒಂದು ಕಚೀìಫ‌ನ್ನು ಜೊತೆಯಲ್ಲಿರಿಸಿಕೊಳ್ಳಿ. ಮೂಗಿನಲ್ಲಿ ಉಸಿರು ಕಟ್ಟಸಿಕೊಂಡು ಕುಳಿತುಕೊಳ್ಳಬೇಡಿ. ಸರಾಗವಾಗಿ ಉಸಿರಾಡಲು ಆಗಾಗ ಮೂಗನ್ನು ಎಳೆದುಕೊಳ್ಳಬೇಕೆನಿಸಿದರೆ ಹಾಗೆ ಮಾಡಿ. ಅಕ್ಕಪಕ್ಕದವರಿಗೆ ಕಿರಿಕಿರಿ ಅನ್ನಿಸಿದರೂ ಪರವಾಗಿಲ್ಲ ನಮ್ಮ ಮತ್ತು ಅವರ ಬರವಣಿಗೆಗೂ  ತೊಂದರೆ ಆಗಬಾರದು. ಹಾಗೆಂದು ಸಭ್ಯತೆ ಮರೆಯಬೇಡಿ.

23ಅಗತ್ಯದ ಯಾವುದೇ ಪ್ರಶ್ನೆಯನ್ನು ಉತ್ತರಿಸದೆ ಹಾಗೆ ಬಿಡಬೇಡಿ. ನಿಮಗೆ ಗೊತ್ತಿರುವಷ್ಟನ್ನಾದರೂ ಬರೆಯುವ ಪ್ರಯತ್ನ ಮಾಡಿ.

24ಥಿಯರಿ ವಿಷಯಗಳಲ್ಲಿ ಹತ್ತು ಅಂಕಗಳ ವಿವರಣಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ಪ್ರಾಕ್ಟಿಕಲ್‌ ಓರಿಯಂಟೆಡ್‌ ಪ್ರಶ್ನೆಗಳನ್ನು ಉತ್ತರಿಸಿ ಮುಗಿಸುವುದು ಒಳ್ಳೆಯದು.

25ಒಂದು ಉತ್ತಮ ಕೈ ಗಡಿಯಾರ ನಿಮ್ಮ ಜೊತೆಯಲ್ಲಿರಲಿ. ಮತ್ತು ಅದು ಪರೀಕ್ಷಾ ಕೇಂದ್ರದ ಸಮಯಕ್ಕೆ ಅನುಗುಣವಾಗಿ ಸಮಯ ತೋರಿಸುತ್ತಿದೆ ಎನ್ನುವುದನ್ನು ಮೊದಲ ದಿನವೇ ಖಚಿತಪಡಿಸಿಕೊಳ್ಳಿ.

26ಉತ್ತರ ಪತ್ರಿಕೆಯಲ್ಲೆ ಅಲ್ಲಲ್ಲಿ ಪಾಯಿಂಟುಗಳನ್ನು ಅಥವಾ ಲೆಕ್ಕಾಚಾರಗಳನ್ನು ನೆನಪು ಮಾಡಿಕೊಳ್ಳಲೋಸುಗ ಪೆನ್ಸಿಲಿನಲ್ಲಿ ಬರೆದು ಅದನ್ನು ರಬ್ಬರಿನಲ್ಲಿ ಒರೆಸುತ್ತಾ ಸಮಯ ಹಾಳು ಮಾಡಬೇಡಿ. ತೀರಾ ಅಗತ್ಯವೆನಿಸಿದಲ್ಲಿ ಉತ್ತರ ಪತ್ರಿಕೆಯಲ್ಲೆ ಒಂದು ಹಾಳೆಯನ್ನು ಸಂಪೂರ್ಣವಾಗಿ ರಫ್ ವರ್ಕ್‌ ಮಾಡಲಿಕ್ಕೆ ಮೀಸಲಿಡಿ. ಕೊನೆಯಲ್ಲಿ ಅದನ್ನು ರಫ್ ಎಂದು ನಮೂದಿಸಿ ಅಡ್ಡಗೆರೆಯನ್ನು  ಎಳೆದುಬಿಡಿ.

27ಪರೀಕ್ಷೆ ಮುಗಿಸಿ ಹೊರಬಂದ ಮೇಲೆ ಆ ಪರೀಕ್ಷೆಯ ಕುರಿತಂತೆ ನಿಮ್ಮ ಸ್ನೇಹಿತರ ಬಳಿ ದಯವಿಟ್ಟು ಯಾವುದೇ ರೀತಿಯ ಚರ್ಚೆ ನಡೆಸಲು ಹೋಗಬೇಡಿ. ಕೆಲವೊಮ್ಮೆ ನಿಮ್ಮ ತಪ್ಪಾದ ಉತ್ತರಗಳು ನಿಮಗೆ ಆಗ ತಿಳಿದು ಅನವಶ್ಯಕವಾದ ಟೆನನ್‌ ನಿಮ್ಮದಾಗಬಹುದು ಮತ್ತು ಅದು ನಿಮ್ಮ ಉಳಿದ ಪರೀಕ್ಷೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಡಿಸ್ಕಸ್‌ ಮಾಡದೇ ಇರೋದು  ಒಳ್ಳೆಯದು.

28ಅನಾರೋಗ್ಯ ಅಥವಾ ಮತ್ತೇನೇ ಕಾರಣವಿದ್ದಾಗ ತೀರಾ ಅನಿವಾರ್ಯವೆನ್ನಿಸಿದಲ್ಲಿ ಪ್ರಕೃತಿ ಕರೆಗೆ ಸ್ಪಂದಿಸಬೇಕೆನ್ನಿಸಿದಲ್ಲಿ ನೀವು ಕೊಠಡಿ ಮೇಲ್ವಿಚಾರಕರ ಬಳಿ ಮನವಿ ಮಾಡಿಕೊಳ್ಳಬಹುದು. 

29ಬೆಳಿಗ್ಗೆ ಸರಿಯಾಗಿ ಉಪಹಾರವನ್ನು ಸೇವಿಸಿ ದೈನಂದಿನ ಕಾರ್ಯಗಳನ್ನು ಮುಗಿಸಿಬಿಡಿ. ತೀರಾ ಬಹಳ ಹೊತ್ತು ನಿದ್ರೆ ಬಿಟ್ಟು ಓದುವಂತಹ ಅಭ್ಯಾಸ ನಿಮ್ಮನ್ನು ಮರುದಿನದ ಪರೀಕ್ಷೆಯಲ್ಲಿ ಲವಲವಿಕೆಯಿಂದ ಇರಲು ಸ್ವಲ್ಪ ಅಡ್ಡಿ ಮಾಡುತ್ತದೆ. ಹಾಗಾಗಿ ಅಂತಹ ಅಭ್ಯಾಸ ಒಳ್ಳೆಯದಲ್ಲ. 
ಶುಭವಾಗಲಿ. 

ನರೇಂದ್ರ ಗಂಗೊಳ್ಳಿ

 

Advertisement

Udayavani is now on Telegram. Click here to join our channel and stay updated with the latest news.

Next