Advertisement

ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿ: ರೋಹಿತ್‌ ಬದಲಿಗೆ ಈಶ್ವರನ್‌?

10:31 PM Dec 08, 2022 | Team Udayavani |

ಹೊಸದಿಲ್ಲಿ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ “ಎ’ ತಂಡ ನಾಯಕ ಅಭಿಮನ್ಯು ಈಶ್ವರನ್‌ ಅವರನ್ನು ಗಾಯಗೊಂಡಿರುವ ನಾಯಕ ರೋಹಿತ್‌ ಶರ್ಮ ಅವರ ಬದಲಿಗೆ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ ಚಟ್ಟೊಗ್ರಾಮ್‌ನಲ್ಲಿ ಡಿ. 14ರಿಂದ ಆರಂಭವಾಗಲಿದೆ.

Advertisement

ನಾಯಕ ರೋಹಿತ್‌ ಅವರು ಬುಧವಾರ ನಡೆದ ಏಕದಿನ ಸರಣಿಯ ದ್ವಿತೀಯ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಅಮೋಘವಾಗಿ ಆಡಿ ರಕ್ಷಿಸುವ ಪ್ರಯತ್ನ ನಡೆಸಿದ್ದರು. ಆದರೆ ಅಂತಿಮವಾಗಿ ತಂಡ ಸೋತು ಸರಣಿಯನ್ನು ಕಳೆದುಕೊಳ್ಳಬೇಕಾಯಿತು. ಗಾಯದಿಂದಾಗಿ ರೋಹಿತ್‌ ಟೆಸ್ಟ್‌ ಸರಣಿಯಿಂದ ಹೊರಗುಳಿಯಲಿದ್ದಾರೆ.

ಬಾಂಗ್ಲಾದಲ್ಲಿಯೇ ಸದ್ಯ ಸಾಗುತ್ತಿರುವ “ಎ’ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಈಶ್ವರನ್‌ ಬೆನ್ನು ಬೆನ್ನಿಗೆ ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ. ಸಿಲ್ಹೆಟ್‌ನಲ್ಲಿ ನಡೆಯುವ ಎರಡನೇ “ಎ’ ಟೆಸ್ಟ್‌ ಪಂದ್ಯದ ಬಳಿಕ ಈಶ್ವರನ್‌ ಚಟ್ಟೊಗ್ರಾಮ್‌ನಲ್ಲಿ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಭಾರತೀಯ ಕ್ರಿಕೆಟ್‌ ಮಂಡಳಿಯ ಮೂಲಗಳು ತಿಳಿಸಿವೆ. ಈಶ್ವರನ್‌ ತಂಡಕ್ಕೆ ಬಂದರೂ ಪ್ರಭಾರ ನಾಯಕ ಕೆಎಲ್‌ ರಾಹುಲ್‌ ಮತ್ತು ಶುಭಮನ್‌ ಗಿಲ್‌ ಅವರು ಟೆಸ್ಟ್‌ನಲ್ಲಿ ತಂಡದ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next