Advertisement

Test ರ್‍ಯಾಂಕಿಂಗ್‌: ಜೈಸ್ವಾಲ್‌ ಹೈಜಂಪ್‌!

11:21 PM Feb 21, 2024 | Team Udayavani |

ದುಬಾೖ: ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿಯಲ್ಲಿ ಬೆನ್ನು ಬೆನ್ನಿಗೆ ದ್ವಿಶತಕ ಬಾರಿಸಿದ ಯಶಸ್ವಿ ಜೈಸ್ವಾಲ್‌ ನೂತನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಹೈಜಂಪ್‌ ಮಾಡಿದ್ದಾರೆ. ಬರೋಬ್ಬರಿ 14 ಸ್ಥಾನ ನೆಗೆದು 15ನೇ ಸ್ಥಾನ ಅಲಂಕರಿಸಿದ್ದಾರೆ. ಇದರೊಂದಿಗೆ ಅವರು ಮೊದಲ ಸಲ ಟಾಪ್‌-20 ರ್‍ಯಾಂಕಿಂಗ್‌ ಯಾದಿಯಲ್ಲಿ ಕಾಣಿಸಿಕೊಂಡಂತಾಯಿತು.

Advertisement

22 ವರ್ಷದ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಟೆಸ್ಟ್‌ನಲ್ಲಿ ಸತತ 2 ದ್ವಿಶತಕ ಬಾರಿಸಿದ ಕೇವಲ 3ನೇ ಕ್ರಿಕೆಟಿಗ. ವಿನೋದ್‌ ಕಾಂಬ್ಳಿ ಮತ್ತು ವಿರಾಟ್‌ ಕೊಹ್ಲಿ ಬಳಿಕ ಈ ಸಾಧನೆಗೈದಿದ್ದಾರೆ. ಇವರು ದ್ವಿಶತಕ ಬಾರಿಸಿದ ಎರಡೂ ಟೆಸ್ಟ್‌ ಗಳಲ್ಲಿ ಜಯಭೇರಿ ಮೊಳಗಿಸಿದ ಭಾರತ, ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ನಾಯಕ ರೋಹಿತ್‌ ಶರ್ಮ ಅವರದು ಒಂದು ಸ್ಥಾನದ ಪ್ರಗತಿ (12). ಶುಭಮನ್‌ ಗಿಲ್‌ 3 ಸ್ಥಾನಗಳ ಭಡ್ತಿ ಪಡೆದಿದ್ದಾರೆ (35).

ರಾಜ್‌ಕೋಟ್‌ನಲ್ಲಿ ಟೆಸ್ಟ್‌ ಪದಾರ್ಪಣೆಗೈದ ಸಫìರಾಜ್‌ ಖಾನ್‌ ಮತ್ತು ಧ್ರುವ ಜುರೆಲ್‌ ಕ್ರಮವಾಗಿ 75ನೇ ಹಾಗೂ 100ನೇ ಕ್ರಮಾಂಕ ದಿಂದ ತಮ್ಮ ರ್‍ಯಾಂಕಿಂಗ್‌ ಆರಂಭಿಸಿದ್ದಾರೆ.

ಈ ಸರಣಿಯಿಂದ ಹೊರಗುಳಿದಿರುವ ವಿರಾಟ್‌ ಕೊಹ್ಲಿ ಟಾಪ್‌-10 ಯಾದಿಯಲ್ಲಿರುವ ಭಾರತದ ಏಕೈಕ ಬ್ಯಾಟರ್‌ ಆಗಿದ್ದಾರೆ. ಕಳೆದ 7 ಟೆಸ್ಟ್‌ಗಳಲ್ಲಿ 7 ಶತಕ ಬಾರಿಸಿದ ಕೇನ್‌ ವಿಲಿಯಮ್ಸನ್‌ ಅಗ್ರಸ್ಥಾನದಲ್ಲಿ ಗಟ್ಟಿಗೊಂಡಿದ್ದಾರೆ.

Advertisement

ಜಡೇಜ 7 ಸ್ಥಾನ ಜಿಗಿತ
ರಾಜ್‌ಕೋಟ್‌ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿ ಮೆರೆದ ರವೀಂದ್ರ ಜಡೇಜ ಕೂಡ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಅವರು 41ನೇ ಸ್ಥಾನದಿಂದ 34ಕ್ಕೆ ಏರಿದ್ದಾರೆ.

7 ವಿಕೆಟ್‌ ಉಡಾಯಿಸಿದ ಸಾಧನೆಯಿಂದಾಗಿ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ 3 ಸ್ಥಾನ ಮೇಲೇರಿದ್ದು, 6ನೇ ರ್‍ಯಾಂಕಿಂಗ್‌ ಪಡೆದಿದ್ದಾರೆ.

ರಾಜ್‌ಕೋಟ್‌ ಟೆಸ್ಟ್‌ನಲ್ಲಿ 500 ವಿಕೆಟ್‌ ಸಾಧನೆಗೈದ ಆರ್‌. ಅಶ್ವಿ‌ನ್‌ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಮರಳಿ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ನಂ.1 ಬೌಲರ್‌ ಆಗಿದ್ದಾರೆ.

ಆಲ್‌ರೌಂಡರ್‌ ರ್‍ಯಾಂಕಿಂಗ್‌
ಆಲ್‌ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಜಡೇಜ ಮತ್ತು ಅಶ್ವಿ‌ನ್‌ ಕ್ರಮವಾಗಿ ಒಂದನೇ ಹಾಗೂ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಜಡೇಜ ಅವರ ರೇಟಿಂಗ್‌ ಅಂಕವೀಗ 416ರಿಂದ ಜೀವನಶ್ರೇಷ್ಠ 469ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next