Advertisement

ಟೆಸ್ಟ್‌ ಪಂದ್ಯ: ಜಿಂಬಾಬ್ವೆ ನಾಯಕ ಇರ್ವಿನ್‌ ಶತಕದಾಟ

11:01 PM Feb 22, 2020 | Sriram |

ಢಾಕಾ: ಬಾಂಗ್ಲಾದೇಶ ವಿರುದ್ಧ ಶನಿವಾರ ಆರಂಭಗೊಂಡ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಜಿಂಬಾಬ್ವೆ 6ಕ್ಕೆ 228 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿದೆ. ನಾಯಕ ಸೀನ್‌ ಇರ್ವಿನ್‌ ಅವರ ಶತಕ ಜಿಂಬಾಬ್ವೆ ಸರದಿಯ ಆಕರ್ಷಣೆ ಆಗಿತ್ತು.

Advertisement

ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ಇರ್ವಿನ್‌ 227 ಎಸೆತ ಎದುರಿಸಿ 107 ರನ್‌ ಬಾರಿಸಿದರು (13 ಬೌಂಡರಿ). ಆರಂಭಕಾರ ಪ್ರಿನ್ಸ್‌ ಮಾಸ್ವರ್‌ 64 ರನ್‌ ಮಾಡಿದರು. ಇವರಿಬ್ಬರ ದ್ವಿತೀಯ ವಿಕೆಟ್‌ ಜತೆಯಾಟದಲ್ಲಿ 111 ರನ್‌ ಹರಿದು ಬಂತು. ಈ ಜೋಡಿ ಬೇರ್ಪಟ್ಟ ಬಳಿಕ ಬಾಂಗ್ಲಾ ಬೌಲರ್‌ಗಳು ಮೇಲುಗೈ ಸಾಧಿಸಿದರು. ನಯೀಮ್‌ ಹಸನ್‌ 68ಕ್ಕೆ 4 ವಿಕೆಟ್‌, ಅಬು ಜಾಯೇದ್‌ 51ಕ್ಕೆ 2 ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next