ಪಂದ್ಯದ 3ನೇ ದಿನವಾದ ಶನಿವಾರ ವಿಂಡೀಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 222 ರನ್ನಿಗೆ ಆಲೌಟ್ ಆಯಿತು. ಇಶಾಂತ್ 43 ರನ್ ವೆಚ್ಚದಲ್ಲಿ 5 ವಿಕೆಟ್ ಕಿತ್ತರು. ಭೋಜನ ವಿರಾಮದ ವೇಳೆ ಕೊಹ್ಲಿ ಪಡೆ ದ್ವಿತೀಯ ಸರದಿಯಲ್ಲಿ ವಿಕೆಟ್ ನಷ್ಟವಿಲ್ಲದೆ 14 ರನ್ ಮಾಡಿತ್ತು. ಅಗರ್ವಾಲ್ 8, ರಾಹುಲ್ 6 ರನ್ ಗಳಿಸಿ ಕ್ರೀಸಿನಲ್ಲಿದ್ದರು. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್ ಗಳಿಸಿತ್ತು.
Advertisement
ಒಂದೂ ಅರ್ಧ ಶತಕವಿಲ್ಲವೆಸ್ಟ್ ಇಂಡೀಸ್ ದ್ವಿತೀಯ ದಿನದಾಟದ ಅಂತ್ಯಕ್ಕೆ 189ಕ್ಕೆ 8 ವಿಕೆಟ್ ಉರುಳಿಸಿಕೊಂಡಿತ್ತು. 10 ರನ್ ಮಾಡಿ ಆಡುತ್ತಿದ್ದ ನಾಯಕ ಜಾಸನ್ ಹೋಲ್ಡರ್ 39ರ ತನಕ ಸಾಗಿದರು (65 ಎಸೆತ, 5 ಬೌಂಡರಿ). ಕಮಿನ್ಸ್ ನೆರವು ಪಡೆದ ಹೋಲ್ಡರ್ 9ನೇ ವಿಕೆಟಿಗೆ 41 ರನ್ ಒಟ್ಟುಗೂಡಿಸಿದರು. ವಿಂಡೀಸ್ ಸರದಿಯಲ್ಲಿ ಯಾರಿಂದಲೂ ಅರ್ಧ ಶತಕ ದಾಖಲಾಗಲಿಲ್ಲ. 48 ರನ್ ಮಾಡಿದ ರೋಸ್ಟನ್ ಚೇಸ್ ಅವರದೇ ಹೆಚ್ಚಿನ ಗಳಿಕೆ (74 ಎಸೆತ, 5 ಬೌಂಡರಿ, 1 ಸಿಕ್ಸರ್).
ಭಾರತ ಪ್ರಥಮ ಇನ್ನಿಂಗ್ಸ್ 297
ವೆಸ್ಟ್ ಇಂಡೀಸ್ ಪ್ರಥಮ ಇನ್ನಿಂಗ್ಸ್
ಕ್ರೆಗ್ ಬ್ರಾತ್‌ವೇಟ್ ಸಿ ಮತ್ತು ಬಿ ಇಶಾಂತ್ 14
ಜಾನ್ ಕ್ಯಾಂಬೆಲ್ ಬಿ ಶಮಿ 23
ಶಮರ್ ಬ್ರೂಕ್ಸ್ ಸಿ ರಹಾನೆ ಬಿ ಜಡೇಜ 11
ಡ್ಯಾರನ್ ಬ್ರಾವೊ ಎಲ್‌ಬಿಡಬ್ಲ್ಯು ಬುಮ್ರಾ 18
ರೋಸ್ಟನ್ ಚೇಸ್ ಸಿ ರಾಹುಲ್ ಬಿ ಇಶಾಂತ್ 48
ಶೈ ಹೋಪ್ ಸಿ ಪಂತ್ ಬಿ ಇಶಾಂತ್ 24
ಶಿಮ್ರನ್ ಹೆಟ್‌ಮೈರ್ ಸಿ ಮತ್ತು ಬಿ ಇಶಾಂತ್ 35
ಜಾಸನ್ ಹೋಲ್ಡರ್ ಸಿ ಪಂತ್ ಬಿ ಶಮಿ 39
ಕೆಮರ್ ರೋಚ್ ಸಿ ಕೊಹ್ಲಿ ಬಿ ಇಶಾಂತ್ 0
ಮಿಗ್ಯುಯೆಲ್ ಕಮಿನ್ಸ್ ಬಿ ಜಡೇಜ 0
ಶಾನನ್ ಗ್ಯಾಬ್ರಿಯಲ್ ಔಟಾಗದೆ 2
ಇತರ 8
ಒಟ್ಟು (ಆಲೌಟ್) 222
ವಿಕೆಟ್ ಪತನ: 1-36, 2-48, 3-50, 4-88, 5-130, 6-174, 7-179, 8-179, 9-220.
ಬೌಲಿಂಗ್: ಇಶಾಂತ್ ಶರ್ಮ 17-5-43-5
ಜಸ್‌ಪ್ರೀತ್ ಬುಮ್ರಾ 18-4-55-1
ಮೊಹಮ್ಮದ್ ಶಮಿ 17-3-48-2
ರವೀಂದ್ರ ಜಡೇಜ 20.2-4-64-2
ಹನುಮ ವಿಹಾರಿ 2-0-7-0