Advertisement

ಭಾರತದಲ್ಲಿ ಟೆಸ್ಲಾ ಔಟ್‌ಲೆಟ್‌: ಮಾತುಕತೆ

09:58 AM Sep 08, 2021 | Team Udayavani |

ಹೊಸದಿಲ್ಲಿ: ಅಮೆರಿಕದ ಟೆಸ್ಲಾ ಕಂಪೆನಿಯು ಭಾರತದಲ್ಲಿ ತನ್ನ ಮಾರಾಟ ಮಳಿಗೆ ತೆರೆದು, ವಾಹನ ಮಾರಾಟ ಮಾಡುವ ಉದ್ದೇಶ ಹೊಂದಿದ್ದು, ಅದಕ್ಕಾಗಿ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.

Advertisement

ಸಂಸ್ಥೆಯು ಬೇರೆ ಯಾವುದೇ ಕಂಪೆನಿಗೆ ಭಾರತದಲ್ಲಿನ ಮಾರುಕಟ್ಟೆಯ ಜವಾಬ್ದಾರಿ ಕೊಡದೆಯೇ, ಏಕ ಬ್ರಾಂಡ್‌ ಔಟ್‌ಲೆಟ್‌ ನಿರ್ಮಿಸಲಿದೆ. ಅದಕ್ಕಾಗಿ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಮಾರ್ಗಸೂಚಿ ಪಾಲಿಸಬೇಕಾಗುತ್ತದೆ.

ಜತೆಗೆ ವಿದೇಶದಿಂದ ಭಾರತಕ್ಕೆ ಆಮದಾಗುವ ಸರಕುಗಳ ಮೇಲೆ ಹೆಚ್ಚು ಸುಂಕ ಇರುವುದು ಸಂಸ್ಥೆಗೆ ತಡೆಯಾಗಿದೆ. ಟೆಸ್ಲಾ ಎಲೆಕ್ಟ್ರಿಕ್‌ ವಾಹನಗಳ ಆಮದಿನ ಮೇಲಿರುವ ಸುಂಕದ ಪ್ರಮಾಣ ತಗ್ಗಿಸಬೇಕೆಂದು ಈಗಾಗಲೇ ಸರಕಾರಕ್ಕೆ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next