Advertisement

US Market: ಟೆಸ್ಲಾದ “ಸೈಬರ್‌ ಟ್ರಕ್‌ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!

03:39 PM Dec 02, 2023 | Team Udayavani |

ವಾಷಿಂಗ್ಟನ್:‌ ಅಮೆರಿಕ ಮೂಲದ ವಾಹನ ತಯಾರಿಕಾ ಕಂಪನಿಯಾದ ಟೆಸ್ಲಾ “ಸೈಬರ್‌ ಟ್ರಕ್”‌ ಎಂಬ ನೂತನ ಬಗೆಯ ಎಲೆಕ್ಟ್ರಿಕ್‌ ಪಿಕ್‌ ಅಪ್‌ ಟ್ರಕ್‌ ಅನ್ನು ಬಿಡುಗಡೆಗೊಳಿಸಿದ್ದು, ವಾಹನ ಡೆಲಿವರಿ ಆರಂಭಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Mangaluru; ಸರ್ಕಾರದಿಂದಲೇ ಡಯಾಲಿಸಿಸ್ ವ್ಯವಸ್ಥೆ ನಿರ್ವಹಣೆಗೆ ಚಿಂತನೆ: ದಿನೇಶ್ ಗುಂಡೂರಾವ್

ಜಗತ್ತಿನ ನಂಬರ್‌ ವನ್‌ ಶ್ರೀಮಂತ ಎಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿ 2019ರಲ್ಲಿ ಎಲೆಕ್ಟ್ರಿಕ್‌ ಸೈಬರ್‌ ಟ್ರಕ್‌ ನ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಈ ಸಂದರ್ಭದಲ್ಲಿ ವಾಹನದ ಡಿಸೈನ್‌ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಆದರೆ ವಾಹನದ ವಿಶೇಷತೆ ಮತ್ತು ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ಪಡೆದಿತ್ತು.

ಇದೀಗ ಟೆಸ್ಲಾ ಸೈಬರ್‌ ಟ್ರಕ್‌ ಅಮೆರಿಕದ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, 50 ಗ್ರಾಹಕರಿಗೆ ಪಿಕ್‌ ಅಪ್‌ ಟ್ರಕ್‌ ಡೆಲಿವರಿ ಮಾಡಲಾಗಿದೆ. ಆದರೆ ಇದರ ಬೆಲೆ ಮಾತ್ರ ದುಬಾರಿಯಾಗಿದೆ ಎಂದು ವರದಿ ತಿಳಿಸಿದೆ.

ದುಬಾರಿ ಬೆಲೆ:

Advertisement

ಟೆಸ್ಲಾ ಸೈಬರ್‌ ಟ್ರಕ್‌ ಬೇಸ್‌ ಸ್ಪೆಕ್‌ ಬೆಲೆ ಅಂದಾಜು 60,990 ಅಮೆರಿಕನ್‌ ಡಾಲರ್‌ (50.80 ಲಕ್ಷ) ಇರಲಿದ್ದು, ಪಿಕಪ್‌ ಟ್ರಕ್‌ ಆರಂಭಿಕ ಬೆಲೆ ಅಂದಾಜು 40,000 ಡಾಲರ್‌ ಇರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಸೈಬರ್‌ ಟ್ರಕ್‌ ಬೆಲೆ ದುಬಾರಿಯಾದ ಪರಿಣಾಮ ಟೆಸ್ಲಾ ಷೇರು ದರ ಶೇ.2ರಷ್ಟು ಇಳಿಕೆ ಕಂಡಿದೆ. ಏತನ್ಮಧ್ಯೆ ಟೆಸ್ಲಾ ಸೈಬರ್‌ ಟ್ರಕ್‌ ಮುಂದಿನ ಶ್ರೇಣಿಯ ವಾಹನಕ್ಕೆ ಅಂದಾಜು 66.60 ಲಕ್ಷ ಬೆಲೆ ಇರಲಿದ್ದು, ಟಾಪ್‌ ಲೈನ್‌ ಶ್ರೇಣಿಯ ವಾಹನಕ್ಕೆ ಅಂದಾಜು 88 ಲಕ್ಷ ರೂಪಾಯಿ ಬೆಲೆ ಇರಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next