ಈಗಾಗಲೇ ಜಗತ್ತಿನ ಎಲ್ಲೆಡೆ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಎಲಾನ್ ಮಸ್ಕ್ ಅವರ ಟೆಸ್ಲಾ ಕಾರು ಭಾರತ ಪ್ರವೇಶಿಸಲು ಅಣಿಯಾಗುತ್ತಿದೆ. ಇತ್ತೀಚೆಗಷ್ಟೇ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೂ ಈ ಕುರಿತು ಸ್ಪಷ್ಟಪಡಿಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ, 2021ರ ಜೂನ್‌ನಲ್ಲಿ ಟೆಸ್ಲಾ ಕಾರು ಭಾರತ ಮಾರುಕಟ್ಟೆಗೆ ಬರಬಹುದು ಎಂಬ ನಿರೀಕ್ಷೆಗಳೂ ಇವೆ. ಸದ್ಯ ಟೆಸ್ಲಾದಲ್ಲಿ ನಾಲ್ಕು ವೆರಿಯಂಟ್ ಕಾರುಗಳಿವೆ. ಟೆಸ್ಲಾ ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಮಾಡೆಲ್ ವೈ ಕಾರುಗಳು ಮಾರುಕಟ್ಟೆಯಲ್ಲಿವೆ. ಇದರಲ್ಲಿ ಮಾಡೆಲ್ 3 ಕಾರು ಮಾತ್ರ ದರದ ವಿಚಾರದಲ್ಲೂ ಒಂದಷ್ಟು ಕಡಿಮೆ ಇದೆ. ಹೀಗಾಗಿ, ಇದೇ ಮಾಡೆಲ್ ಆರಂಭಿಕ ಹಂತದಲ್ಲಿ ಭಾರತದ ಮಾರುಕಟ್ಟೆಗೆ ಬರಬಹುದು ಎಂದು ಹೇಳಲಾಗುತ್ತಿದೆ. 2021ರ ಮೊದಲ ಭಾಗದಲ್ಲಿಯೇ ಈ ಕಾರಿನ ಬುಕ್ಕಿಂಗ್ ಕೂಡ ಆರಂಭವಾಗುವ ಸಾಧ್ಯತೆ ಇದೆ. ಇದನ್ನು 2017ರಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ಕಾರು ಅನ್ನಿಸಿಕೊಂಡಿದೆ.
ಏನಿದು ಮಾಡೆಲ್ 3 ವಿಶೇಷ? :
ಸ್ಟಾರ್ಟ್ ಮಾಡಿದ 3.1 ಸೆಕೆಂಡ್‌ಗಳಲ್ಲೇ ಗಂಟೆಗೆ 60 ಕಿ.ಮೀ. ವೇಗ ಮುಟ್ಟುವ ಸಾಮರ್ಥ್ಯ ಈ ಕಾರಿಗಿದೆ. ಹಾಗೆಯೇ ಒಮ್ಮೆ ಚಾರ್ಜ್ ಮಾಡಿದ ನಂತರ 351 ಕಿ.ಮೀ. ವರೆಗೆ ಕ್ರಮಿಸಬಹುದು. ಚಾರ್ಜ್ ಖಾಲಿಯಾದ ಮೇಲೆ ಕೇವಲ 15 ನಿಮಿಷಗಳಲ್ಲಿ ಮತ್ತೆ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆಯುಳ್ಳ ಸೂಪರ್ ಚಾರ್ಜರ್ ಇದೆ. ಇದರ ಟಾಪ್ ಸ್ಪೀಡ್ 162 ಕಿ.ಮೀ.
ಇನ್ನು ಇದರಲ್ಲಿ 360 ಡಿಗ್ರಿಗೂ ಅನ್ವಯವಾಗುವಂತೆಕ್ಯಾಮೆರಾಗಳ ವ್ಯವಸ್ಥೆಮಾಡಲಾಗಿದೆ. ಕಾರಿನ ಪ್ರತಿಭಾಗವೂ ವಿಸಿಬಲ್ ಇರುತ್ತದೆ. ಹಾಗೆಯೇ ಕಾರಿನ ಮುಂದಿನ160 ಮೀ.ವರೆಗಿನ ವಸ್ತುಗಳನ್ನುಇದು ಗುರುತಿಸಿಕೊಳ್ಳುತ್ತದೆ. 12ಅಸ್ಟ್ರಾಸಾನಿಕ್ ಸೆನ್ಸರ್‌ಗಳು ಈಕಾರಿನಲ್ಲಿವೆ. ಇದು ಕಾರಿಗೆಅತ್ಯಂತ ಹೆಚ್ಚಿನ ಸುರಕ್ಷತೆನೀಡಿದೆ. ಉಳಿದಂತೆ ಕಾರಿನಲ್ಲಿ 15 ಇಂಚಿನ ಇನ್ಫೋಟೈನ್ ಮೆಂಟ್ ಟಚ್ ಸ್ಕ್ರೀನ್ ಇದೆ. ಆಲ್ ಗ್ಲಾಸ್ ರೂಫ್ ಈ ಕಾರಿನಮತ್ತೂಂದು ವಿಶೇಷ. ಹಾಗೆಯೇಈ ಕಾರಿನಲ್ಲಿ ಎರಡು ಮೋರ್ಟಾಗಳೂ ಇವೆ. ಅಂದಹಾಗೆ, ಈಕಾರಿನ ದರ 60 ಲಕ್ಷ ರೂ.ಗಳಾಗಿರುತ್ತವೆ.
ಸೋಮಶೇಖರ ಸಿ.ಜೆ.