Advertisement

Poonch; ಸೇನಾ ವಾಹನದ ಮೇಲೆ ಉಗ್ರರಿಂದ ಗುಂಡಿನ ದಾಳಿ: 4 ಯೋಧರು ಹುತಾತ್ಮ

12:27 AM Dec 22, 2023 | Vishnudas Patil |

ಪೂಂಚ್ :ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗುರುವಾರ ಸೇನಾ ವಾಹನದ ಮೇಲೆ ಉಗ್ರರು ಹೊಂಚುದಾಳಿ ನಡೆಸಿದ ಪರಿಣಾಮ 4 ಯೋಧರು ಹುತಾತ್ಮರಾಗಿದ್ದು, ಕನಿಷ್ಠ ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಠಾಣಮಂಡಿ-ಸುರನಕೋಟೆ ರಸ್ತೆಯ ಸಾವನಿ ಪ್ರದೇಶದಲ್ಲಿ ಬುಫ್ಲಿಯಾಜ್‌ನಿಂದ ಯೋಧರನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ದಾಳಿ ನಡೆದಿದೆ. ಬುಧವಾರದಿಂದ ಉಗ್ರರ ವಿರುದ್ಧ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳು ದೌಡಾಯಿಸಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಪೂಂಛ್ ಜಿಲ್ಲೆಯ ಸಶಸ್ತ್ರ ಪೊಲೀಸ್ ಘಟಕದ ಆವರಣದಲ್ಲಿ ಬುಧವಾರ ಸ್ಫೋಟ ಸಂಭವಿಸಿದ ನಂತರ ಈ ಘಟನೆ ನಡೆದಿದೆ.ಸುರನಕೋಟ್ ಪ್ರದೇಶದಲ್ಲಿ ಡಿ 19 ಮತ್ತು 20 ರ ಮಧ್ಯರಾತ್ರಿ ಸಂಭವಿಸಿದ ಸ್ಫೋಟದಿಂದಾಗಿ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಕೆಲವು ವಾಹನಗಳ ಗಾಜುಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೃದಯ ವಿದ್ರಾವಕ ವೀಡಿಯೋಗಳು
ದಾಳಿ ನಡೆದ ಸ್ಥಳದಲ್ಲಿ ಚೆಲ್ಲಿರುವ ರಕ್ತ,ಒಡೆದುಹೋದ ಹೆಲ್ಮೆಟ್‌ಗಳು, ಸೇನಾ ವಾಹನಗಳ ಗಾಜುಗಳು ಪುಡಿಯಾ ಗಿರುವುದು, ಇತರ ವಸ್ತುಗಳು ಚೆಲ್ಲಾಪಿಲ್ಲಿ ಯಾಗಿಬಿದ್ದಿರುವಂಥ ಮನಕಲಕುವ ಚಿತ್ರಗಳು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

Advertisement

ಶಸ್ತ್ರಾಸ್ತ್ರ ಹೊತ್ತೊಯ್ದರು
ಘಟನೆ ನಡೆದ ಸ್ಥಳದಲ್ಲಿ ಭಾರತೀಯ ಯೋಧರ ಶಸ್ತ್ರಾಸ್ತ್ರಗಳು ಕಾಣೆಯಾಗಿವೆ. ಇವುಗಳನ್ನು ಉಗ್ರರು ಹೊತ್ತೊಯ್ದಿರುವ ಶಂಕೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿ ದಿದೆ ಎಂದು ರಕ್ಷಣ ವಕ್ತಾರರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next