ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಪೊಲೀಸ್ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿ 6 ಮಂದಿ ಪೊಲೀಸರನ್ನು ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ. ಮೃತರಲ್ಲಿ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಫಿರೋಜ್ ದರ್ ಕೂಡ ಒಬ್ಬರು ಎಂದು ಪೊಲೀಸರು ತಿಳಿಸಿದ್ದಾರೆ.
ಲಷ್ಕರ್ ಕಮಾಂಡರ್ ಜುನೈದ್ ಹತ್ಯೆ
ಕುಲ್ಗಾಂ ಜಿಲ್ಲೆ ಯಲ್ಲಿ ಮೂರು ಮಂದಿ ಲಷ್ಕರ್ ಉಗ್ರರು ಅವಿತುಕೊಂಡಿದ್ದು ಮನೆ ಯನ್ನು ಭದ್ರತಾ ಪಡೆಗಳು ಸುತ್ತು ವರಿದು, ಭಾರೀ ಗುಂಡಿನ ಚಕಮಕಿ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಲಷ್ಕರ್ ಕಮಾಂಡರ್ ಜುನೈದ್ ಮಟ್ಟು ಸಹಿತ ಇಬ್ಬರು ಉಗ್ರರನ್ನು ಸದೆ ಬಡಿಯುವಲ್ಲಿ ಯೋಧರು ಯಶಸ್ವಿ ಯಾಗಿದ್ದರು. ಇದೇ ಸಂದರ್ಭ ಕಲ್ಲು ತೂರಾಟ ಮಾಡುವ ಮೂಲಕ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಪ್ರತಿ ಭಟನಕಾರರ ಮೇಲೆ ಭದ್ರತಾ ಪಡೆ ಗಳು ಗುಂಡು ಹಾರಿಸಿದ ಪರಿಣಾಮ, ಇಬ್ಬರು ನಾಗರಿಕರು ಮೃತಪಟ್ಟಿದ್ದರು.
ಹೊಣೆ ಹೊತ್ತ ಲಷ್ಕರ್
ದಾಳಿಯ ಹೊಣೆಯನ್ನು ಲಷ್ಕರ್-ಎ-ತಯ್ಯಬಾ ಉಗ್ರ ಸಂಘಟನೆ ಹೊತ್ತುಕೊಂಡಿದೆ.
ಪಾಕ್‌ನಿಂದ ದಾಳಿ: ರಜೌರಿಯಲ್ಲಿನ ಸೇನಾ ಮುಂಚೂಣಿ ನೆಲೆಯನ್ನು ಗುರಿ ಯಾಗಿಸಿಕೊಂಡು ಪಾಕ್ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರ ತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿತ್ತು.
ಶ್ರೀನಗರದಲ್ಲಿ ಕರ್‌ಫ್ಯೂ
ಮಟ್ಟು ಹತ್ಯೆಯ ಬಳಿ ಹಿಂಸಾಚಾರ ಭುಗಿಲೆದ್ದಿದ್ದು, ಶ್ರೀನಗರ ವ್ಯಾಪ್ತಿಯ 6 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ, ಕುಲ್‌ಗಾಂ ಪ್ರದೇಶದಲ್ಲಿ ಕರ್‌ಫ್ಯೂ ಜಾರಿಗೊಳಿಸಲಾಗಿದೆ.