Advertisement

ಉಗ್ರರ ಐಇಡಿ ದಾಳಿಯಲ್ಲಿ ಗಾಯಗೊಂಡಿದ್ದ ಯೋಧರಿಬ್ಬರು ಹುತಾತ್ಮ

11:43 AM Jun 19, 2019 | Vishnu Das |

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸೋಮವಾರ ಉಗ್ರರು ನಡೆಸಿದ ಸುಧಾರಿತ ಸ್ಫೋಟಕಗಳ ದಾಳಿಯಲ್ಲಿ ಗಾಯಗೊಂಡಿದ್ದ ಯೋಧರಿಬ್ಬರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

Advertisement

ಅರಿಹಾಲ್‌-ಲಸ್ಸಿಪೋರಾ ರಸ್ತೆಯಲ್ಲಿ ಉಗ್ರರು ರಾಷ್ಟ್ರೀಯ ರೈಫ‌ಲ್ಸ್‌ ಪಡೆಗಳ ಮೊಬೈಲ್ ಗಸ್ತು ವಾಹನವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದರು. ಪರಿಣಾಮ, 9 ಯೋಧರು, ಇಬ್ಬರು ನಾಗರಿಕರು
ಗಾಯಗೊಂಡಿದ್ದರು.

ದಾಳಿಯಲ್ಲಿ ಗಾಯಗೊಂಡಿದ್ದ ವಾಹನದ ಚಾಲಕನಿಗೆ ವಿಶೇಷ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಗಾಯಾಳು ಸೈನಿಕರು ಚೇತರಿಸಿಕೊಂಡಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.

ಫೆ.14ರಂದು 40 ಸಿಆರ್‌ ಪಿಎಫ್ ಯೋಧರನ್ನು ಬಲಿತೆಗೆದು
ಕೊಂಡ ಪುಲ್ವಾಮಾದ ಜಮ್ಮು- ಶ್ರೀನಗರರಾಷ್ಟ್ರೀಯ ಹೆದ್ದಾರಿ ಯಿಂದ 27 ಕಿ.ಮೀ. ದೂರದಲ್ಲಿ ಈ ಸ್ಫೋಟ ಸಂಭವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next