Advertisement

Terrorist: ದುಬೈನಿಂದ ಮುಂಬೈಗೆ ನುಗ್ಗಿದ್ದಾರಾ ಪಾಕ್‌ ಉಗ್ರರು?

10:05 PM Apr 08, 2023 | Team Udayavani |

ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈಗೆ ಮೂವರು ಉಗ್ರರು ನುಗ್ಗಿದ್ದಾರೆ ಎಂದು ಮುಂಬೈ ಪೊಲೀಸ್‌ ಕಂಟ್ರೋಲ್‌ ರೂಮ್‌ಗೆ ಶನಿವಾರ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಪಾಕಿಸ್ತಾನದ ಮೂವರು ಉಗ್ರರು, ದುಬೈ ಮೂಲಕ ಮುಂಬೈ ಪ್ರವೇಶಿಸಿದ್ದಾರೆ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ಅಲ್ಲದೇ ಉಗ್ರರ ಪೈಕಿ ಒಬ್ಟಾತನ ಹೆಸರು ಮುಜೀದ್‌ ಸೈಯದ್‌ ಎಂದು ತಿಳಿಸಿದ ವ್ಯಕ್ತಿ, ಆತನ ಮೊಬೈಲ್‌ ನಂಬರ್‌ ಮತ್ತು ವಾಹನದ ನಂಬರ್‌ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾನೆ!

Advertisement

ಈ ವಿಷಯದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅನೇಕ ಬಾರಿ ಈ ರೀತಿ ನಕಲಿ ಕರೆಗಳು ಬರುತ್ತವೆ. ಇದು ಕೂಡ ಅದೇ ರೀತಿಯ ನಕಲಿ ಫೋನ್‌ ಕರೆ ಇರಬಹುದು ಎಂದು ಪೊಲೀಸ್‌ ಅಧಿಕಾರಿಗಳು ಶಂಕಿಸಿದ್ದಾರೆ. ಇದೇ ವೇಳೆ ಕರೆ ಮಾಡಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಮುಂಬೈ ಪೊಲೀಸರಿಗೆ ಈ ರೀತಿಯ ನಕಲಿ ಕರೆಗಳು ಬಂದಿರುವ ಉದಾಹರಣೆಗಳಿವೆ. ಆದಾಗ್ಯೂ, ಪೊಲೀಸರು ಮುಂಬೈ ಆದ್ಯಂತ ಅಲರ್ಟ್‌ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next