Advertisement

ಆತ್ಮಾಹುತಿ ದಾಳಿಗೆ 30ಸಾವಿರ ನೀಡಿದ್ದ ಪಾಕ್ ಸೇನಾ ಕರ್ನಲ್: ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಉಗ್ರ

09:09 AM Aug 25, 2022 | Team Udayavani |

ನವದೆಹಲಿ : ಭಾರದತ ಮೇಲೆ ದಾಳಿ ನಡೆಸಲು ಬಂದು ಜಮ್ಮು – ಕಾಶ್ಮೀರದಲ್ಲಿ ಭಾರತೀಯ ಸೇನೆಯ ಗುಂಡಿನ ದಾಳಿಗೆ ಸಿಲುಕಿ ಬಂಧಿತನಾಗಿದ್ದ ಲಷ್ಕರ್-ಎ-ತೋಯ್ಬಾ ಸಂಘಟನೆಯ ಭಯೋತ್ಪಾದಕ ಭಾರತೀಯ ಸೇನೆಯ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ.

Advertisement

ದಾಳಿ ನಡೆಸಲು ಬಂದು ಸೇನೆಯ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿರುವ ತಬಾರಕ್ ಹುಸೇನ್, ನಾನು ಮತ್ತು ಇತರ 4-5 ಮಂದಿ ಭಾರತೀಯ ಸೇನೆಯನ್ನು ಗುರಿಯಾಗಿಸಿ ದಾಳಿ ಮಾಡಲು ಇಲ್ಲಿಗೆ ಬಂದಿದ್ದೇವೆ. ನಮ್ಮನ್ನು ಪಾಕಿಸ್ತಾನ ಸೇನೆಯ ಕರ್ನಲ್ ಯೂನಸ್ ಕಳುಹಿಸಿದ್ದಾರೆ. ಭಾರತೀಯ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಅವರು ನಮಗೆ 30,000 ರೂ. ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

ಕಳೆದ 6 ವರ್ಷಗಳಲ್ಲಿ 2ನೇ ಬಾರಿ ಗಡಿ ನುಸುಳಲು ಯತ್ನಿಸಿದ್ದ ಹುಸೇನ್ ಆದರೆ ಭಾರತೀಯ ಸೇನೆ ಮಾನವೀಯತೆಯ ಆದರದ ಮೇಲೆ ಬಿಡುಗಡೆ ಮಾಡಿತ್ತು ಆದರೆ ಕಳೆದ ಭಾನುವಾರ ಮತ್ತೆ ನುಸುಳಲು ಯತ್ನಿಸಿದ ವೇಳೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ ಈ ವೇಳೆ ವಿಚಾರಣೆ ನಡೆಸಿದ ಸೇನಾ ಅಧಿಕಾರಿಗಳಿಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

ಆಗಸ್ಟ್ 21 ರ ಮುಂಜಾನೆ, ನೌಶೇರಾ ಪ್ರದೇಶದ ಜಂಗರ್ ಸೆಕ್ಟರ್‌ನಲ್ಲಿ ಗಡಿ ನುಸುಳಲು ಉಗ್ರರು ಯತ್ನಿಸಿದ ವೇಳೆ ಗಡಿಯಲ್ಲಿ ನಿಯೋಜಿಸಲಾದ ಸೈನಿಕರು ದಾಳಿ ನಡೆಸಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು, ಆದರೆ ಇನ್ನಿಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದರು.

ಇದನ್ನೂ ಓದಿ :ಮಂಗಳೂರಿಗೆ ಪ್ರಧಾನಿ ಭೇಟಿ: ಗೋಲ್ಡ್‌ಫಿಂಚ್‌ ಮೈದಾನದಲ್ಲಿ ಸಮಾವೇಶ, ವ್ಯಾಪಕ ಸಿದ್ಧತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next