ಕಲಬುರಗಿ: ದೇಶದಲ್ಲಿ ಉಗ್ರವಾದಕ್ಕೆ ಹಾಗೂ ಭೇದ-ಭಾವಕ್ಕೆ ಎಂದಿಗೂ ಅವಕಾಶ ನೀಡೋದಿಲ್ಲ. ಇಸ್ಲಾಂ ಧರ್ಮ ಎಲ್ಲ ಧರ್ಮಗಳನ್ನು ಗೌರವಿಸುವುದನ್ನು ಕಲಿಸಿದೆ ಎಂದು ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಕಾರ್ಯದರ್ಶಿ (ರಾಜಕೀಯ ವ್ಯವಹಾರ) ಡಾ| ಮೊಹಮ್ಮದ ಅಸಗರ್ ಚುಲಬುಲ್ ಹೇಳಿದರು.
ನಗರದ ಮೆಟ್ರೋ ಫಂಕ್ಷನ್ ಹಾಲ್‌ದಲ್ಲಿ ಜಲಸೆ-ಏರಹೆಮತುಲ್ ಆಲಾಮಿನ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪ್ರೀತಿ, ಪ್ರೇಮದಿಂದ ಬದುಕುವ ಮೂಲಕ ಎಲ್ಲರಿಗೂ ಮಾದರಿಯಾಗೋಣ ಎಂದರು. ಧರ್ಮ ವಿರೋಧಿ ಗಳು ವಿನಾಕಾರಣ ಟೀಕೆ ಮಾಡುತ್ತಾರೆ. ಟೀಕೆ ಮಾಡುವವರು ಮೊದಲು ಆಯಾ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು ಎಂದರು.
ಸುಮಾರು 850ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ, ಕುರಾನ್, ಪೆನ್, ಕಂಪಾಸ್, ಟಿನ್ ಬಾಕ್ಸ್, ನೋಟ್‌ಬುಕ್ ಇನ್ನಿತರ ಸಾಮಗ್ರಿ ವಿತರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಹೈದ್ರಾಬಾದ್‌ನ ಜಾಮಿಯಾ ವಿಶ್ವವಿದ್ಯಾಲಯದ ಮೌಲಾ, ಅಜೀಜುಲ್ಲಾ ಖಾದ್ರಿ, ಮೌಲಾನಾ ಗಯಾಸೊದ್ದಿನ್ ವಿಶೇಷ ಉಪನ್ಯಾಸ ನೀಡಿದರು.
ಮೌಲಾನಾ ಅಬ್ದುಲ್ ರಶೀದ್, ಹಜರತ್ ಹಿಸಾಮುದ್ದಿನ್ ಖಾದ್ರಿ ಸಜ್ಜಾದ ನಶೀನ್ ದರ್ಗಾ, ತೇಗಬುರಹನಾ, ಸೈಯದ್ ಶಹಾ ಹೈದರ ವಲಿ ಖಾದ್ರಿ, ಸಜ್ಜಾದ ನಶೀನ್ ನೀಲಂಗಾ, ಸೈಯದ್ ಶಹಾ ಅಹ್ಮದ ಪಾಶಾ ಖಾದ್ರಿ, ಸಜ್ಜಾದ ನಶೀನ ಕರನೂಲ್, ಸೈಯದ್ ಶಹಾ ಹಿದಾಯತುಲ್ಲಾ ಖಾದ್ರಿ, ಸಜ್ಜಾದ ನಶೀನ ಇಮಲಿ ಮೊಹಲ್ಲಾ, ಮೌಲಾನಾ ಇಸ್ಮಾಯಿಲ್ ಮುದ್ದಸೀರ್, ಮೌಲಾನಾ ಅಬ್ದುಲ್ ಹಕೀಂ ಅಶ್ರ, ಇಲಿಯಾಸ್ ಸೇಠ ಭಾಗಬಾನ, ಮೌಲಾನಾ ಹಾಜ್ ಫಕ್ರೋದ್ದಿನ್, ಮೌಲಾನಾ ಮೊಹಮ್ಮದ ಹುಸೇನ್, ಮೌಲಾನಾ ಮು ಉವೇಸ್ ಖಾದ್ರಿ, ಮೌಲಾನಾ ಗೌಸೋದ್ದಿನ್ ಖಾಸ್ಮಿ, ಮೌಲಾನಾ ಶàಕ ಅಹ್ಮದ ಖಾಸ್ಮಿ, ಸಕಿ ಸಮಸ್ತ ಮೊಹಮ್ಮದ ಅಜೀಜುದ್ದಿನ್, ಮುಸ್ತಾಕ್ ಅಹ್ಮದ್, ಮೌಲಾನಾ ಇಬ್ರಾಹಿಂ ಮತ್ತಿತರರು ಇದ್ದರು. ಅಜೀಜುಲ್ಲಾ ಸರಮಸ್ತ ನಿರೂಪಿಸಿದರು.