Advertisement

ಭಯೋತ್ಪಾದನೆ, ಶೋಷಣೆ, ನಿರಂಕುಶವಾದ ಹೆಚ್ಚುತ್ತಿದೆ: ಮೋಹನ್ ಭಾಗವತ್

03:54 PM Oct 24, 2023 | Team Udayavani |

ನಾಗ್ಪುರ: ವಿಜಯ ದಶಮಿಯ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾಷಣ ಮಾಡಿದರು. ಭಾರತದ ಜಾಗತಿಕ ನಾಯಕತ್ವ, ಮಣಿಪುರ ಹಿಂಸಾಚಾರ, ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷ ಮತ್ತು ದೇಶದಲ್ಲಿ ಏಕತೆಯನ್ನು ಕಾಪಾಡುವ ಪ್ರಾಮುಖ್ಯತೆಯನ್ನು ಅವರು ತಮ್ಮ ಭಾಷಣದಲ್ಲಿ ಉಲ್ಲೇಖ ಮಾಡಿದರು.

Advertisement

ಪ್ರಸ್ತುತ ಜಗತ್ತು ಮತಾಂಧತೆ, ದುರಹಂಕಾರ ಮತ್ತು ಧಾರ್ಮಿಕ ಉಗ್ರವಾದ ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು. ಹಿತಾಸಕ್ತಿ ಮತ್ತು ಉಗ್ರವಾದದ ಘರ್ಷಣೆಗಳಿಂದ ಉಕ್ರೇನ್ ಮತ್ತು ಗಾಜಾ ಪಟ್ಟಿಯ ಯುದ್ಧದಂತಹ ಸಂಘರ್ಷಗಳು ಬಗೆಹರಿಯದೆ ಉಳಿದಿವೆ ಎಂದು ಅವರು ಒತ್ತಿ ಹೇಳಿದರು. ನಿಸರ್ಗದೊಂದಿಗೆ ಸಿಂಕ್ ಮಾಡದ ಜೀವನಶೈಲಿಯು ವಿವಿಧ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಭಾಗವತ್ ಹೇಳಿದರು.

ಭಯೋತ್ಪಾದನೆ, ಶೋಷಣೆ ಮತ್ತು ನಿರಂಕುಶವಾದವು ಹೆಚ್ಚುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಪಂಚದಲ್ಲಿ ಸದ್ಯ ಇರುವ ದೃಷ್ಟಿಕೋನವು ಅಸಮರ್ಪಕವಾಗಿದೆ. ಆದ್ದರಿಂದ, ಜಗತ್ತು ಭಾರತವು ಮುನ್ನಡೆಸಲು ಭರವಸೆಯ ನಿರೀಕ್ಷೆಗಳೊಂದಿಗೆ ನೋಡುತ್ತಿದೆ. ಭಾರತದ ಅನಾದಿ ಕಾಲದ ಸನಾತನ ಮೌಲ್ಯಗಳು ಮತ್ತು ಸಂಸ್ಕಾರಗಳ ಆಧಾರದ ಮೇಲೆ ಶಾಂತಿ ಮತ್ತು ಸಮೃದ್ಧಿಯ ಹೊಸ ಮಾರ್ಗವನ್ನು ಪ್ರದರ್ಶಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ಮಣಿಪುರದ ಹಿಂಸಾಚಾರದ ಬಗ್ಗೆ ಮಾತನಾಡಿದ ಭಾಗವತ್ ಅವರು, ಶಾಂತಿಯ ಕಡೆಗೆ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಾಗ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳನ್ನು ಪ್ರಶ್ನಿಸಿದರು. ಸಮುದಾಯಗಳ ನಡುವಿನ ಪರಸ್ಪರ ಅಪನಂಬಿಕೆಯನ್ನು ನಿವಾರಿಸಲು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಬಹು ಆಯಾಮದ ಪ್ರಯತ್ನಗಳು, ಬಲವಾದ ರಾಜಕೀಯ ಇಚ್ಛಾಶಕ್ತಿ ಮತ್ತು ಪ್ರಬುದ್ಧ ಸಾಮಾಜಿಕ ನಾಯಕತ್ವದ ಪಾತ್ರಕ್ಕೆ ಅವರು ಕರೆ ನೀಡಿದರು. “ಮಣಿಪುರದಲ್ಲಿ, ಸಂಘರ್ಷದ ಎರಡೂ ಕಡೆಯ ಜನರು ಶಾಂತಿಯನ್ನು ಬಯಸುತ್ತಿರುವಾಗ, ಆ ದಿಕ್ಕಿನಲ್ಲಿ ಯಾವುದೇ ಸಕಾರಾತ್ಮಕ ಹೆಜ್ಜೆಯನ್ನು ತೆಗೆದುಕೊಂಡ ತಕ್ಷಣ ಘಟನೆಯನ್ನು ಉಂಟುಮಾಡುವ ಮೂಲಕ ದ್ವೇಷ ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿರುವ ಈ ಶಕ್ತಿಗಳು ಯಾವುವು? ಬಹು ಆಯಾಮದ ಪ್ರಯತ್ನಗಳು ಈ ಘೋರ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಿದೆ, ಈ ವಿಷಾದಕರ ಸಮಸ್ಯೆಯನ್ನು ಪರಿಹರಿಸಲು ನಮಗೆ ಬಲವಾದ ರಾಜಕೀಯ ಇಚ್ಛಾಶಕ್ತಿ, ಏಕಕಾಲೀನ ಕ್ರಮಗಳು ಮತ್ತು ದಕ್ಷತೆಯ ಅಗತ್ಯವಿರುತ್ತದೆ. ಅದೇ ಸಮಯದಲ್ಲಿ, ಸಮಾಜದ ಪ್ರಬುದ್ಧ ನಾಯಕತ್ವವು ಪರಸ್ಪರ ಅಪನಂಬಿಕೆಯ ಅಂತರವನ್ನು ಕಡಿಮೆ ಮಾಡುವಲ್ಲಿ ವಿಶೇಷ ಪಾತ್ರವನ್ನು ವಹಿಸಬೇಕಾಗುತ್ತದೆ” ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next