Advertisement
ಅಸ್ಸಾಂನ ಕಚಾರ್ ಜಿಲ್ಲೆಯ ತೆಲಿತಿಕಾರ್ ಗ್ರಾಮದ ಅಖ್ತರ್ 2 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ತಿಲಕನಗರದ ಬಿಟಿಬಿ ಲೇಔಟ್‌ನ 3ನೇ ಕ್ರಾಸ್‌ನ ಫನಿ ಮಸೀದಿ ಸಮೀಪದ ಬಾಡಿಗೆ ಮನೆಯಲ್ಲಿ ಮೂವರು ಸ್ನೇಹಿತರ ಜತೆ ವಾಸವಾಗಿದ್ದ. ಹಗಲು ವೇಳೆ ಹೆಚ್ಚು ಓಡಾಡದೆ, ಸಂಜೆ 4ರ ಅನಂತರ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸ್ಥಳೀಯರೊಂದಿಗೆ ಹೆಚ್ಚು ಮಾತನಾಡದ ಈತ ಟೀ, ಬೇಕರಿ ಮತ್ತು ಕೆಲವು ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ದಿಷ್ಟ ಸಮುದಾಯದ ಯುವಕರ ಜತೆ ಹೆಚ್ಚು ಕಾಲ ಕಳೆಯುತ್ತಿದ್ದ. ಅವರೊಂದಿಗೆ “ಜೆಹಾದಿ’ಯ ಬಗ್ಗೆ ಪ್ರತಿಪಾತಿಸುತ್ತಿದ್ದ. ಈತನ ಪ್ರಚೋದನೆಗೆ ಒಳಗಾಗಿ ಕೆಲವು ಯುವಕರು ಈತನ ಉಗ್ರ ಚಟುವಟಿಕೆಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕಾರ ನೀಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಮತ್ತು ಟೆಲಿಗ್ರಾಂಗಳಲ್ಲಿ ಸಕ್ರಿಯವಾಗಿದ್ದ ಶಂಕಿತ, ಟೆಲಿಗ್ರಾಂನಲ್ಲಿ “ದಿ ಈಗಲ್ ಆಫ್ ಖೊರಾಸಾನ್ ಆ್ಯಂಡ್ ಹಿಂಡರ್- ಈಗಲ್’ ಎಂಬ ಗ್ರೂಪ್ ರಚಿಸಿಕೊಂಡಿದ್ದ. ಅದಚ ಅಸ್ಸಾಂ ಮತ್ತು ಬೆಂಗಳೂರಿನ ಕೆಲವರನ್ನು ಸೇರಿಸಿಕೊಂಡು ಉಗ್ರ ಪ್ರೇರಿತ ಪೋಸ್ಟ್‌ಗಳನ್ನು ಮಾಡುತ್ತ ಯುವಕರನ್ನು “ಮೂಲಭೂತವಾದಿ’ಗಳಾಗಿ ಪರಿವರ್ತಿಸುತ್ತಿದ್ದ. ಈತನ ಪ್ರಚೋದನಕಾರಿ ಪೋಸ್ಟ್‌ಗಳ ಬಗ್ಗೆ ಆಸಕ್ತಿ ಹೊಂದಿದ್ದ ಯುವಕರನ್ನು ಕಾಶ್ಮೀರ ಮತ್ತು ಅಫ್ಘಾನಿಸ್ಥಾನದ ಖೊರಾಸಾನ್ ಪ್ರಾಂತ್ಯಕ್ಕೆ ಕಳುಹಿಸಿ, ಭಯೋತ್ಪಾದನ ತರಬೇತಿ ನೀಡಲು ಸಂಚು ರೂಪಿಸಿದ್ದ ಎಂದು ಮೂಲಗಳು ತಿಳಿಸಿವೆ. ಧರ್ಮಯುದ್ಧಕ್ಕೆ ಪ್ರಚೋದನೆ
ಅಖ್ತರ್ಹುಸೇನ್ ಲಷ್ಕರ್ ಯುವಕರ ಮೂಲಕ ಧರ್ಮಯುದ್ಧ (ಹೋಲಿ ವಾರ್)ಗಳನ್ನು ಮಾಡಿಸಲು ಪ್ರಚೋದನೆ ನೀಡಿದ್ದಾನೆ. ಬೆಂಗಳೂರು ಮತ್ತು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಯತ್ನಿಸಿದ್ದಾನೆ ಎಂಬುದು ಗೊತ್ತಾಗಿದೆ. ಈತನಿಗೆ ಸೌದಿ ಅರೇಬಿಯಾ ಮತ್ತು ಅಫ್ಘಾನ್‌ಗಳಲ್ಲಿ ಉಗ್ರವಾದಕ್ಕೆ ಪ್ರಚೋದನೆ ನೀಡುವ ವ್ಯಕ್ತಿಗಳ ಸಂಪರ್ಕವೂ ಇತ್ತು. ಅವರ ಮೂಲಕ ಕೆಲವು ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಎಂದು ಹೇಳಲಾಗಿದೆ.
Related Articles
ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ತಮ್ಮ ಸಮುದಾಯದವರ ಮೇಲೆ ಭಾರತೀಯ ರಕ್ಷಣ ಪಡೆಗಳು ದೌರ್ಜನ್ಯ ನಡೆಸುತ್ತಿದೆ ಎಂದು ಹೇಳಿ ಯುವಕರನ್ನು ಪ್ರಚೋದಿಸಿ, ಉಗ್ರ ಸಂಘಟನೆಯ ಕಡೆಗೆ ಸೆಳೆದು, ಕೋಮು ಗಲಭೆ ಮತ್ತು ದೇಶದ್ರೋಹಿ ಕೆಲಸಕ್ಕೆ ಈತ ಸಿದ್ಧತೆ ನಡೆಸಿದ್ದ ಎಂದು ಮೂಲಗಳು ತಿಳಿಸಿವೆ.
Advertisement
ಕೆಲವು ದಿನಗಳಲ್ಲಿ ಕಾಶ್ಮೀರಕ್ಕೆ ಪಲಾಯನಫೇಸ್ಬುಕ್, ಟೆಲಿಗ್ರಾಂ ಮೂಲಕ ಅಲ್‌ಕಾಯಿದಾ ಸದಸ್ಯರ ಜತೆ ನಿರಂತರ ಸಂಪರ್ಕದಲ್ಲಿದ್ದ ಅಖಾ¤ರ್, ಉಗ್ರ ಸಂಘಟನೆ ಸದಸ್ಯರ ಸೂಚನೆಯ ಮೇರೆಗೆ ಕೆಲವು ದಿನಗಳಲ್ಲಿಯೇ ಬೆಂಗಳೂರಿನಿಂದ ಕಾಶ್ಮೀರಕ್ಕೆ ಪಲಾಯನ ಮಾಡಲು ಸಿದ್ಧತೆ ನಡೆಸಿದ್ದ. ಸದ್ಯ ಈತನ ವಿರುದ್ಧ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಂಗ್ಲಾ ಉಗ್ರ ಸಂಘಟನೆ ಜತೆ ಸಂಪರ್ಕ
ಅಖ್ತರ್ ಅಲ್‌ಕಾಯಿದಾ ಮಾತ್ರವಲ್ಲದೆ ಬಾಂಗ್ಲಾದೇಶದ ಅಸ್ಸಾರುಲ್ಲಾ ಬಾಂಗ್ಲಾ ಟೀಂ(ಎಬಿಟಿ) ಸಂಘಟನೆಯ ಸದಸ್ಯನಾಗಿದ್ದಾನೆ. ಇದರ ಪ್ರೇರಣೆಯಿಂದಲೇ ಯುವಕರನ್ನು ಸೆಳೆದು ನೇರವಾಗಿ ಉಗ್ರ ಸಂಘಟನೆಗೆ ನೇಮಕ ಮಾಡುತ್ತಿದ್ದ. ಅಖಾ¤ರ್ ಬಂಧನದ ವೇಳೆ ಆತನ ಮನೆಯಲ್ಲಿದ್ದ ಮೊಬೈಲ್, ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ಪ್ರೇರಣೆಯಿಂದಲೇ ಜುಬಾನ್ ಕೂಡ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಹೇಳಲಾಗಿದೆ. ಮೂವರ ವಿಚಾರಣೆ: ಶಂಕಿತನ ಜತೆ ವಾಸವಾಗಿದ್ದ ಅಸ್ಸಾಂ ಮೂಲದ ಇತರ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಮೂವರಿಗೆ ಅಖ್ತರ್ ನ ಉಗ್ರ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ. ಆದರೂ ಅವರ ಮೊಬೈಲ್‌ಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.