Advertisement

ಉಗ್ರರ ಪರ ಗೋಡೆ ಬರಹ ಪ್ರಕರಣ: ಶಾರೀಕ್‌ ಸಂಬಂಧಿ ಸಾದತ್‌ ಬಂಧನ

01:04 AM Dec 12, 2020 | mahesh |

ಮಂಗಳೂರು: ಮಂಗಳೂರಿನ ಎರಡು ಕಡೆಗಳಲ್ಲಿ ಉಗ್ರರ ಪರ ಗೋಡೆ ಬರಹ ಬರೆದ ಪ್ರಕರಣದ ಓರ್ವ ಆರೋಪಿಗೆ ಆಶ್ರಯ, ಆರ್ಥಿಕ ನೆರವು ನೀಡಿದ್ದ ಆರೋಪದ ಮೇಲೆ ತೀರ್ಥಹಳ್ಳಿಯ ನಿವಾಸಿ ಸಾದತ್‌ (50) ನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸಾದತ್‌ ಈಗಾಗಲೇ ಬಂಧಿಸಲ್ಪ ಟ್ಟಿರುವ ಶಾರೀಕ್‌ನ ಸಂಬಂಧಿ. ಈತನನ್ನು ಶುಕ್ರವಾರ ನ್ಯಾಯಾ ಲ ಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾ ಲ ಯವು ಈತನ ಕೊರೊನಾ ಪರೀಕ್ಷೆಗಾಗಿ ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಹಿಸಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿಯವರೆಗೆ ಮೂವರನ್ನು ಬಂಧಿಸ ಲಾಗಿದ್ದು ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ.

ಬಟ್ಟೆ ವ್ಯಾಪಾರಿಯಾಗಿರುವ ಸಾದತ್‌, ಶಾಕೀರ್‌ಗೆ ಆಶ್ರಯ, ಹಣ ಕಾಸು ನೆರವು ಮತ್ತು ದುಷ್ಕೃತ್ಯ  ಗಳಿಗೆ ಪ್ರೇರಣೆ ನೀಡಿದ್ದ ಎನ್ನಲಾಗಿದ್ದು, ಪೊಲೀಸರು ಈತನಿಂದಲೂ ಶಾಕೀರ್‌ನ ಚಟುವಟಿಕೆ, ಆತ ಹೊಂದಿದ್ದ ಸಂಪರ್ಕಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಾಕೀರ್‌ ಮತ್ತು ಮಾಝ್ ಮುನೀರ್‌ಗೆ ಅಂತಾರಾಷ್ಟ್ರೀಯವಾಗಿ ಉಗ್ರರ ಸಂಪರ್ಕ ಇರಬಹುದೇ ಎನ್ನುವ ದಿಕ್ಕಿನಲ್ಲಿ ಈಗ ತನಿಖೆ ಮುಂದುವರಿದ್ದು, ಈ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದಿದೆ. ಹೀಗಾಗಿ, ಸಾದತ್‌ ನನ್ನು ಪೊಲೀಸರು ಇನ್ನಷ್ಟು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆ ಇದೆ.

ಬಿಗಿ ಭದ್ರತೆಯಲ್ಲಿ ಆರೋಪಿಗಳು
ಬಂಧಿತರನ್ನು ಪೊಲೀಸರು ಗರಿಷ್ಠ ಭದ್ರತೆ ಇರುವ ಸ್ಥಳದಲ್ಲಿರಿಸಿದ್ದು ಒಂದು ಹಂತದ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಉಳಿದ ಮಹಜರು ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ. ಓರ್ವ ಆರೋಪಿಯ ಹೆತ್ತವರು ಮಗನನ್ನು ನೋಡುವುದಕ್ಕೆಂದು ಮಂಗಳೂರಿಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಮಂಗಳೂರಿನಿಂದಲೇ ವಿದೇಶಿ ವ್ಯಕ್ತಿಗೆ ಕರೆ
ನಗರದಲ್ಲಿ ಆತಂಕ, ಸಂಚಲನ ಸೃಷ್ಟಿಸುವಂತೆ ಮಂಗಳೂರಿನ ವ್ಯಕ್ತಿಯೋರ್ವ ವಿದೇಶದಲ್ಲಿ ಇರುವವನಿಗೆ ಸೂಚಿಸಿದ್ದ. ಅದರಂತೆ ವಿದೇಶದಲ್ಲಿರುವ ವ್ಯಕ್ತಿ ಶಾಕೀರ್‌ನಿಗೆ ನಿರ್ದೇಶನ ನೀಡಿದ್ದ ಎಂಬುದು ಪೊಲೀಸ್‌ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ತಿಳಿದುಬಂದಿದೆ. ಮಂಗಳೂರಿನಿಂದ ಕರೆ ಮಾಡಿದ ವ್ಯಕ್ತಿ ಯಾರೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆರೋಪಿಗಳು ಮೂರು ತಿಂಗಳ ಹಿಂದೆಯೇ ಕೃತ್ಯಕ್ಕೆ ಮಂಗಳೂರಿನಲ್ಲೇ ಯೋಜನೆ ರೂಪಿಸಿದ್ದರು ಎಂಬ ಅಂಶವೂ ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಆಡ್ಮಿನ್‌ ಬಂಧನ ಸಾಧ್ಯತೆ
ಆರೋಪಿಗಳು ಸಕ್ರಿಯರಾಗಿ ದ್ದರೆನ್ನಲಾದ ವಾಟ್ಸ್‌ ಆ್ಯಪ್‌ ಗ್ರೂಪ್‌ನ ಪುಣೆಯ ಅಡ್ಮಿನ್‌ ನನ್ನು ಬಂಧಿಸುವ ಸಾಧ್ಯತೆ ಇದೆ. ಪ್ರಕರಣದ ತನಿಖೆಗೆ ಸಂಬಂಧಿಸಿ ಹಿರಿಯ ಪೊಲೀಸ್‌ ಅಧಿಕಾರಿಗಳು ಶುಕ್ರವಾರ ಕೂಡ ಉನ್ನತ ಮಟ್ಟದ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next