Advertisement

ಪುಲ್ವಾಮಾ: ಮನೆಗೆ ನುಗ್ಗಿ ಪೊಲೀಸ್ ವಿಶೇಷಾಧಿಕಾರಿ ಮತ್ತು ಪತ್ನಿಯನ್ನು ಕೊಂದ ಉಗ್ರರು!

07:57 AM Jun 28, 2021 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಪೊಲೀಸ್ ವಿಶೇಷಾಧಿಕಾರಿಯೊಬ್ಬರ ಮನೆಗೆ ನುಗ್ಗಿದ ಉಗ್ರರು ಅಧಿಕಾರಿ ಮತ್ತು ಅವರ ಪತ್ನಿಯನ್ನು ಹತ್ಯೆ ಮಾಡಿದ್ದಾರೆ. ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಅವರ ಮಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ.

Advertisement

ಆವಂತಿಪೋರಾದ ಹರಿಪರಿಗಂ ನಿವಾಸಿಯಾದ ಫಯಾಜ್ ಅಹಮದ್ ಅವರ ಮನೆಗೆ ರಾತ್ರಿ ಸುಮಾರು 11 ಗಂಟೆಗೆ ನುಗ್ಗಿದ ಭಯೋತ್ಪಾದಕರು ಮನಬಂದಂತೆ  ಗುಂಡಿನ ದಾಳಿ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಫಯಾಜ್ ಅಹಮದ್ ಮತ್ತು ಅವರ ಪತ್ನಿ ರಜಾ ಬೇಗಮ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಬ್ಬರು ಅಸುನೀಗಿದರು ಎಂದು ಪೊಲೀಸರು ತಿಳಿಸಿದ್ದಾರೆ. ಫಯಾಜ್ ಅವರ ಪುತ್ರಿ ರಫಿಯಾ ಗೆ ಚಿಕಿತ್ಸೆ ನೀಡಲಾಗತ್ತಿದೆ.

ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಜಮ್ಮುವಿನ ವಾಯ ಪಡೆ ನಿಲ್ದಾಣದ ಮೇಲೆ  ದಾಳಿ ನಡೆದ ದಿನವೇ ಈ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next