Advertisement

ಗ್ವಾದಾರ್‌ ಹೋಟೆಲ್‌ ಮೇಲೆ ಉಗ್ರರ ದಾಳಿ

12:26 AM May 12, 2019 | Team Udayavani |

ಕರಾಚಿ: ಪಾಕಿಸ್ಥಾನ ಬಂದರು ನಗರ ಗ್ವಾದಾರ್‌ನಲ್ಲಿರುವ ಪಂಚತಾರಾ ಹೋಟೆಲ್‌ ಪೀಲ್‌ ಕಾಂಟೆನೆಂಟಲ್‌ ಮೇಲೆ ಶನಿವಾರ ಮೂವರು ಸಶಸ್ತ್ರಧಾರಿ ಬಂಡುಕೋರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಜೊತೆಗೆ ಎಲ್ಲಾ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಗ್ರೆನೇಡ್‌ ಹಾಗೂ ಗನ್‌ ದಾಳಿ ನಡೆದಿದ್ದು, ಹೋಟೆಲ್‌ನಲ್ಲಿದ್ದ ಚೀನಾ ಹಾಗೂ ಪಾಕಿಸ್ಥಾನ ಹಿರಿಯ ಅಧಿ ಕಾರಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸ ಲಾಗಿದೆ. ಪ್ರತ್ಯೇಕ ಬಲೂಚಿಸ್ತಾನಕ್ಕೆ ಆಗ್ರಹಿಸಿ ಹೋರಾಟ ನಡೆಸು ತ್ತಿರುವ ಬಲೂಚ್‌ ಲಿಬರೇಶನ್‌ ಆರ್ಮಿಯ ಉಗ್ರರೇ ಈ ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next