Advertisement

ವಿಧ್ವಂಸಕ್ಕೆ ಸಾಮೂಹಿಕ ಸಂಚು ; ಪಾಕ್‌ ಸಂಘಟನೆಗಳಿಂದ ಸಾಂಘಿಕ ಕಾರ್ಯಾಚರಣೆಗಾಗಿ ಗುಪ್ತಸಭೆ

10:06 AM Mar 15, 2020 | Team Udayavani |

ಹೊಸದಿಲ್ಲಿ: ಸ್ವಾಯತ್ತ ರಾಜ್ಯದ ಮಾನ್ಯತೆ ಕಳೆದುಕೊಂಡು, ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು- ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕೇಂದ್ರ ಸರಕಾರ ಹೆಣಗುತ್ತಿರುವ ಮಧ್ಯೆಯೇ, ಆಘಾತ ಕಾರಿ ಸುದ್ದಿ ಬೆಳಕಿಗೆ ಬಂದಿದೆ. ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ, ಉಗ್ರಗಾಮಿ ಸಂಘಟನೆಗಳಾದ ಲಷ್ಕರ್‌ ಎ ತೊಯ್ಬಾ, ಜೈಶ್‌ ಎ ಮೊಹಮ್ಮದ್‌ - ಈ ಮೂರೂ ಸೇರಿಕೊಂಡು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ನಡೆಸಲು ಮಾತುಕತೆ ನಡೆಸಿವೆಯಂತೆ. ಹೀಗೆಂದು ಗುಪ್ತಚರ ಮೂಲಗಳು ವರದಿ ಮಾಡಿವೆ.

Advertisement

ನಿಧಾನಕ್ಕೆ ಅಂತರ್ಜಾಲ ಸಂಪರ್ಕವೂ ಕಾಶ್ಮೀರದಲ್ಲಿ ಶುರುವಾಗಿದೆ. ಇಂತಹ ಹೊತ್ತಿನಲ್ಲಿ ಜಂಟಿ ಕಾರ್ಯಾ ಚರಣೆ ಮೂಲಕ, ಕಾಶ್ಮೀರಕ್ಕೆ ಉಗ್ರರನ್ನು ನುಗ್ಗಿಸಲು ಗುಪ್ತಸಭೆಯೊಂದರಲ್ಲಿ ಮಾತುಕತೆಯಾಗಿದೆ. ಒಗ್ಗೂಡಿ ತರಬೇತಿ ನೀಡಿ, ಹಿಂಸಾಚಾರ ತೀವ್ರಗೊಳಿಸುವುದು ಇಲ್ಲಿನ ಉದ್ದೇಶ.

ರಾವಲ್ಪಿಂಡಿಯಲ್ಲಿ ಸಭೆ: ಮಾ.2ರಂದು ರಾವಲ್ಪಿಂಡಿಯಲ್ಲಿ ಈ ಬಗ್ಗೆ ಸಭೆ ನಡೆದಿದೆ. ಕುಖ್ಯಾತ ಉಗ್ರ ಮಸೂದ್‌ ಅಜರ್‌, ಸಹೋದರ ಅಬ್ದುಲ್‌ ರೌಫ್ ಅಸ್ಗರ್‌ (ಐಸಿ 814 ಹೈಜಾಕ್‌ ಪ್ರಕರಣದ ಅಪರಾಧಿ) ಮತ್ತು ಐಎಸ್‌ಐ ಅಧಿಕಾರಿಗಳು ಭಾಗವಹಿಸಿದ್ದಾರೆ. ಮಾ. 20ರಿಂದ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ತೀವ್ರ ಗೊಳಿಸುವುದು ಈ ಸಂಘಟನೆಗಳ ಉದ್ದೇಶವಾಗಿದೆ!

ಲಷ್ಕರ್‌ ನೆಲೆಯಾಗಿರುವ ಖೈಬರ್‌ ಫ‌ಖ್ತುಂಕ್ವಾದಲ್ಲಿ ತರಬೇತಿ ನಡೆಸಬೇಕು ಎನ್ನುವ ಬಗ್ಗೆ ಚರ್ಚೆಯಾಗಿದೆ. ಆದರೆ ಈ ಬಗ್ಗೆ ಭಿನ್ನಾಭಿಪ್ರಾಯವಿರುವುದರಿಂದ ಅಂತಿಮ ತೀರ್ಮಾನ ಮಾಡಲಾಗಿಲ್ಲ ಎನ್ನಲಾಗಿದೆ.

ಒಳನುಸುಳಲು ಯತ್ನ: ಈ ನಡುವೆ ಕಣಿವೆ ರಾಜ್ಯದ ಆಯಕಟ್ಟಿನ ಜಾಗಗಳಲ್ಲಿ ಉಗ್ರರು ಒಳನುಸುಳಲು ಯತ್ನಿಸಿದ್ದು ವರದಿಯಾಗಿದೆ. ಮಚಿಲ್‌ ಪ್ರದೇಶದ ದುದ್ನಿಯಾಲ್‌ ಲಾಂಚ್‌ಪ್ಯಾಡ್‌ ಬಳಿ ಐವರು, ಅಥ್ಮುಕಮ್‌ನಲ್ಲಿ ಐವರು, ಟ್ರೀ ಕ್ನಾಲ್‌ ಮತ್ತು ದೆಗ್ವಾರ್‌ನಲ್ಲಿ ಇನ್ನೂ ಐವರನ್ನು ಪತ್ತೆಹಚ್ಚಲಾಗಿದೆ. ಇವರು ಭಾರತೀಯ ಸೇನೆಯ ಮೇಲೆ ಗಡಿಯಲ್ಲಿ ಆಕ್ರಮಣ ನಡೆಸಲು ಮುಂದಾದ ತಂಡದ ಸದಸ್ಯರು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next