ತೇರದಾಳ: ಸುಮಾರು 45ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಭದ್ರಕಾಳಿ ನೂತನ ದೇವಸ್ಥಾನ ನಿರ್ಮಿಸುವ ಮೂಲಕ ಕಾಲತಿಪ್ಪಿ ಗ್ರಾಮಸ್ಥರು ಮಾದರಿಯಾಗಿದ್ದಾರೆ.
Advertisement
ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನವೇ ಇರಲಿಲ್ಲ. ಗ್ರಾಮದ ಲಟ್ಟಿ ಮನೆತನದ 25 ಕುಟುಂಬದವರು ನಾವೇಕೆ ಗ್ರಾಮದಲ್ಲಿ ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಬಾರದೆಂದು ನಿರ್ಧರಿಸಿ, ಶ್ರೀಶೈಲ ಜಗದ್ಗುರು ಡಾ|ಚನ್ನಸಿದ್ಧರಾಮ ಪಂಡಿತಾರಾಧ್ಯಶಿವಾಚಾರ್ಯ ಭಗವತ್ಪಾದರೊಂದಿಗೆ ಚರ್ಚಿಸಿ 2019 ಅ.30ರಂದು ಜಗದ್ಗುರುಗಳಿಂದಲೇ ಭೂಮಿಪೂಜೆ ನೆರವೇರಿಸಿದ್ದಾರೆ. ಲಟ್ಟಿ ಬಂಧುಗಳು ದೇವಸ್ಥಾನ ನಿರ್ಮಿಸುತ್ತಿರುವುದನ್ನು ಕಂಡ ಗ್ರಾಮಸ್ಥರು ನಾವೂ ದೇಣಿಗೆ ನೀಡುತ್ತೇವೆಂದು ಮುಂದೆ ಬಂದಿದ್ದಾರೆ. ಕಾಲತಿಪ್ಪಿ ಗ್ರಾಮಸ್ಥರಷ್ಟೇ ಅಲ್ಲ ಬೇರೆ ಊರುಗಳ ಭಕ್ತರು, ತೇರದಾಳ ಶಾಸಕ ಸಿದ್ದು ಸವದಿ ಸಹಾಯ ಮಾಡಿದ್ದಾರೆ.
Related Articles
Advertisement
ಕಾಲತಿಪ್ಪಿ ಗ್ರಾಮ ಹಾಗೂ ವಿವಿಧ ಊರಿನ ಭಕ್ತರ ಸಹಕಾರದಿಂದ ವೀರಭದ್ರೇಶ್ವರ, ಭದ್ರಕಾಳಿ ದೇವಸ್ಥಾನ ನಿರ್ಮಿಸಲಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ದೇವಸ್ಥಾನಗಳ ಲೋಕಾರ್ಪಣೆ, ನೂತನ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಶ್ರಮಿಸಲು ಕೋರುತ್ತೇವೆ.*ದೇವಸ್ಥಾನ ಕಮೀಟಿ, ಕಾಲತಿಪ್ಪಿ