Advertisement

ಯೂ ಟ್ಯೂಬ್ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ “ಟಕಿಲ’ ರಾಪ್ ಸಾಂಗ್

03:00 PM Jan 02, 2018 | |

ಕನ್ನಡ ರಾಪರ್ ಚಂದನ್ ಶೆಟ್ಟಿ ಹೊಸ ರಾಪ್ ಸಾಂಗ್ “ಟಕಿಲ’ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ. ಹಾಗೂ ಈ ಭಾರಿ ಹಾಡಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಅಲ್ಲದೇ ಈಗಾಗಲೇ ಯೂ ಟ್ಯೂಬ್ ನಲ್ಲಿ 70 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸದ್ಯ ಕನ್ನಡ ರಾಪರ್ ಚಂದನ್ ಶೆಟ್ಟಿ “ಬಿಗ್ ಬಾಸ್’ನಲ್ಲಿದ್ದು, ಅದೇ ವೇದಿಕೆಯಲ್ಲಿಯೇ ಈ ಹಾಡನ್ನು ಬಿಡುಗಡೆ ಮಾಡಿರುವುದು ವಿಶೇಷವಾಗಿದೆ. ಈ ಹಾಡಿಗೆ ಸಂಗೀತ ಸಾಹಿತ್ಯವನ್ನು ಚಂದನ್ ಶೆಟ್ಟಿ ಅವರೇ ನೀಡಿದ್ದಾರೆ.

ಹಾಡಿನಲ್ಲಿ ಅವರ ಜೊತೆಗೆ ಶಾಲಿನಿ ಗೌಡ ಹೆಜ್ಜೆ ಹಾಕಿದ್ದಾರೆ. ಇದು ಪಕ್ಕಾ ಕನ್ನಡ ಪಾರ್ಟಿ ಸಾಂಗ್ ಆಗಿದೆ. ಈ ಹಿಂದಿನಂತೆ ಇಲ್ಲಿಯೂ ಚಂದನ್ ಮ್ಯೂಸಿಕ್ ಮತ್ತು ಲಿರಿಕ್ಸ್ ಗಮನ ಸೆಳೆಯುತ್ತದೆ. “ಪಕ್ಕಾ ಚಾಕ್ಲೇಟ್ ಗರ್ಲ್..’ ಹಾಡಿನ ಬಳಿಕ ಚಂದನ್ “ಟಕಿಲ’ ಹಾಡನ್ನು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next