ನಿಶಾ ಜೇಮ್ಸ್ ತನಿಖೆಗೆ ಸೂಚಿಸಿ ದರು. ಹಿರಿಯ ಅ ಧಿಕಾರಿಗಳು, ಎಎನ್‌ಎಫ್ ಧಾವಿಸಿ ಬಂದರು.
Advertisement
ತಲೆಗೊಂದು ಮಾತುಟೆಂಟ್ ನಕ್ಸಲರದಿರಬಹುದೇ, ಕೊಲ್ಲೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಉಗ್ರರು ಬೀಡುಬಿಟ್ಟಿರ ಬಹುದೇ ಎಂಬೆಲ್ಲ ವದಂತಿ ಹಬ್ಬತೊಡಗಿದವು. ರಾಷ್ಟ್ರೀಯ ತನಿಖಾ ದಳಕ್ಕೂ ಮಾಹಿತಿ ಹೋಯಿತು.
ಸ್ಥಳೀಯರಿಂದ ಮಾಹಿತಿ ಸಂಗ್ರ ಹಿಸಿದಾಗ ಈ ಟೆಂಟ್ ಸ್ಥಳೀಯರೊಬ್ಬರಿಗೆ ಸೇರಿದ್ದು ಎಂಬುದು ಬಯಲಾಯಿತು. ಅವರು ಸನ್ಯಾಸಿಯಂತೆ ಬದುಕುತ್ತಿದ್ದು, ಆಗಾಗ ಈ ಟೆಂಟಿನಲ್ಲಿ ವಾಸ್ತವ್ಯ ಹೂಡಿ ಜಪ, ತಪ ನಡೆಸುತ್ತಾರೆ. ಊಟವನ್ನೂ ಅಲ್ಲೇ ಮಾಡಿ ದಿನಗಳೆಯುತ್ತಾರೆ. ಪೂಜೆಗೆ ಉಪಯೋಗಿಸಿದ ಅಗರಬತ್ತಿ ಇತ್ಯಾದಿ ವಸ್ತುಗಳೂ ದೊರೆತಿವೆ. ಆತಂಕ ಪಡುವ ವಿಚಾರ ಇಲ್ಲ ಎಂದು ಕುಂದಾ ಪುರ ಉಪವಿಭಾಗದ ಎಎಸ್‌ಪಿ ಹರಿರಾಮ್ ಶಂಕರ್ ಅವರು ತಿಳಿಸಿದ್ದಾರೆ.