Advertisement

ಆಸೀಸ್‌ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಟೆನಿಸ್‌ ತಾರೆ ಬಾರ್ಟಿ

12:28 AM Jun 27, 2019 | Team Udayavani |

ಲಂಡನ್‌: ವಿಶ್ವದ ನಂಬರ್‌ ವನ್‌ ಏಕದಿನ ತಂಡವಾದ ಇಂಗ್ಲೆಂಡನ್ನು ಬಗ್ಗುಬಡಿದ ಆಸ್ಟ್ರೇಲಿಯವನ್ನು ನೂತನವಾಗಿ ವಿಶ್ವದ ನಂಬರ್‌ ವನ್‌ ಸ್ಥಾನ ಅಲಂಕರಿಸಿದ್ದ ಟೆನಿಸ್‌ ತಾರೆ ಆ್ಯಶ್ಲೆ ಬಾರ್ಟಿ ಅಭಿನಂದಿಸಿದ್ದಾರೆ.

Advertisement

ಫ್ರೆಂಚ್‌ ಓಪನ್‌ ಗೆದ್ದು ಟೆನಿಸ್‌ ವಿಶ್ವವನ್ನು ಬೆರಗುಗೊಳಿಸಿದ್ದ ಬಾರ್ಟಿ ಪಂದ್ಯ ಮುಗಿದ ಬಳಿಕ ಆಸ್ಟ್ರೇಲಿಯ ತಂಡದ ಡ್ರೆಸ್ಸಿಂಗ್‌ ಕೊಠಡಿಗೆ ಆಗಮಿಸಿ ಅಭಿನಂದಿಸಿದ್ದು ವಿಶೇಷವಾಗಿತ್ತು.

ಮಾಜಿ ಕ್ರಿಕೆಟ್‌ ಆಟಗಾರ್ತಿ 2010ರಲ್ಲಿ ವೃತ್ತಿಪರ ಟೆನಿಸ್‌ ಆಟಗಾರ್ತಿಯಾಗಿ ಕಾಣಿಸಿ ಕೊಂಡ ಬಾರ್ಟಿ, 2014ರಲ್ಲಿ ಟೆನಿಸ್‌ನಿಂದ ಹಿಂದೆ ಸರಿದು ವೃತ್ತಿಪರ ಕ್ರಿಕೆಟ್‌ನಲ್ಲಿ ಆಡಲು ಬಯಸಿದ್ದರು. ಬ್ರಿಸ್ಬೇನ್‌ ಹೀಟ್‌ ಪರ ಸ್ವಲ್ಪ ಸಮಯ ಆಡಿ ಟೆನಿಸ್‌ ಕಣಕ್ಕೆ ಮರಳಿದ್ದರು. ಅಲ್ಲಿಂದ ದಿಗ್ವಿಜಯಗೈಯುತ್ತ ಸಾಗಿದ ಅವರು ವಿಶ್ವದ ನಂಬರ್‌ ವನ್‌ ಸ್ಥಾನ ಅಲಂಕರಿಸಿದ್ದೇ ಒಂದು ಅದ್ಭುತ.

ಮುಂದಿನ ವಾರದಿಂದ ಆರಂಭವಾಗುವ ವಿಂಬಲ್ಡನ್‌ ಟೆನಿಸ್‌ ಕೂಟದಲ್ಲಿ ಬಾರ್ಟಿ ಆಡಲಿದ್ದಾರೆ. ಗಾಯದ ಸಮಸ್ಯೆಯಿಂದ ಈ ವಾರ ನಡೆಯುವ ಈಸ್ಟ್‌ಬೋರ್ನ್ ಕೂಟದಿಂದ ಅವರು ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಆಸ್ಟ್ರೇಲಿಯ ತಂಡದ ಆಹ್ವಾನದ ಮೇರೆಗೆ ಡ್ರೆಸ್ಸಿಂಗ್‌ ಕೊಠಡಿಗೆ ಭೇಟಿ ನೀಡಿದ್ದಾರೆ. ಕ್ರಿಕೆಟ್‌ ಆಡಿದ ಅನುಭವವೂ ಇದಕ್ಕೆ ಕಾರಣವಿರಬಹುದು.

Advertisement

Udayavani is now on Telegram. Click here to join our channel and stay updated with the latest news.

Next