Advertisement

Tennis; ವರ್ಷದ ಬಳಿಕ ಮರಳಿದ ರಫೆಲ್‌ ನಡಾಲ್‌

11:41 PM Dec 31, 2023 | Team Udayavani |

ಬ್ರಿಸ್ಬೇನ್‌: ಟೆನಿಸ್‌ ಸ್ಟಾರ್‌, 22 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ವಿಜೇತ ರಫೆಲ್‌ ನಡಾಲ್‌ ಬರೋಬ್ಬರಿ ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಟೆನಿಸ್‌ ಅಂಕಣಕ್ಕೆ ಇಳಿದಿದ್ದಾರೆ. ವರ್ಷಾರಂಭದ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ನಲ್ಲಿ ಆಡುವ ಗುರಿ ಇರಿಸಿಕೊಂಡಿರುವ ಅವರು “ಬ್ರಿಸ್ಬೇನ್‌ ಇಂಟರ್‌ನ್ಶಾಶನಲ್‌’ ಡಬಲ್ಸ್‌ನಲ್ಲಿ ಮಾರ್ಕ್‌ ಲೋಪೆಜ್‌ ಅವರೊಂದಿಗೆ ಆಡಲಿಳಿದರು.

Advertisement

ರವಿವಾರದ ಸ್ಪರ್ಧೆಯಲ್ಲಿ ನಡಾಲ್‌-ಲೋಪೆಜ್‌ ಆಸ್ಟ್ರೇಲಿ ಯದ ಮ್ಯಾಕ್ಸ್‌ ಪರ್ಸೆಲ್‌-ಜೋರ್ಡನ್‌ ಥಾಂಪ್ಸನ್‌ ವಿರುದ್ಧ 4-6, 4-6 ನೇರ ಸೆಟ್‌ಗಳ ಸೋಲಿಗೆ ತುತ್ತಾದರು.

ಥೀಮ್‌ ವಿರುದ್ಧ ಸಿಂಗಲ್ಸ್‌
37 ವರ್ಷದ ರಫೆಲ್‌ “ಪ್ಯಾಟ್‌ ರಾಫ್ಟರ್‌ ಅರೇನಾ’ಕ್ಕೆ ಆಗಮಿಸುವಾಗ ಅಭಿಮಾನಿಗಳು ಸ್ಪೇನ್‌ ಧ್ವಜ ಹಿಡಿದು ಸಂಭ್ರಮದ ಸ್ವಾಗತ ಕೋರಿದರು. ನಡಾಲ್‌ ಮಂಗಳವಾರದ ಸಿಂಗಲ್ಸ್‌ ನಲ್ಲಿ ಡೊಮಿನಿಕ್‌ ಥೀಮ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಇವರೆದುರು ನಡಾಲ್‌ 9-6 ಗೆಲುವಿನ ದಾಖಲೆ ಹೊಂದಿದ್ದಾರೆ.

ರಫೆಲ್‌ ನಡಾಲ್‌ ಕಳೆದ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಪಂದ್ಯಾವಳಿಯ ವೇಳೆ ಸೊಂಟದ ನೋವಿಗೆ ಸಿಲುಕಿದ್ದರು. ಪರಿಣಾಮ, “ಮೆಲ್ಬರ್ನ್ ಪಾರ್ಕ್‌’ನಲ್ಲಿ ದ್ವಿತೀಯ ಸುತ್ತಿನಲ್ಲೇ ಎಡವಿದ್ದರು. ನೋವು ಗಂಭೀರವಾದ ಕಾರಣ ಜೂನ್‌ನಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next