Advertisement
ಈಗಾಗಲೇ ಕೋವಿಡ್ ಹೆಮ್ಮಾರಿಯಿಂದ ತತ್ತರಿಸಿರುವ ಕಲಬುರಗಿಯಲ್ಲಿ ಮಹಾರಾಷ್ಟ್ರದ ಮುಂಬೈನಿಂದ ಬಂದ ವಲಸಿಗರಿಂದಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ರವಿವಾರ ಸೋಂಕು ಪತ್ತೆಯಾದ 10 ಜನರಲ್ಲಿ ಆರು ಜನರು ಮುಂಬೈಯಿಂದ ಬಂದವರಾಗಿದ್ದಾರೆ.
Related Articles
Advertisement
ವೃದ್ಧನಿಂದ ಮತ್ತಿಬ್ಬರಿಗೆ: ಕಂಟೈನ್ಮೆಂಟ್ ಝೋನ್ ಸಂಪರ್ಕದಿಂದ ಮೇ 11ರಂದು ಮೃತಪಟ್ಟ 60 ವರ್ಷದ ವೃದ್ಧ (ಪಿ-927) ಸಂಪರ್ಕದಿಂದಲೂ ಮತ್ತೆ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. 55 ವರ್ಣದ ಪುರುಷ (ಪಿ-1132) ಹಾಗೂ 50 ವರ್ಷದ ಮಹಿಳೆ (ಪಿ-1134)ಗೆ ಹರಡಿದೆ.
ಇನ್ನೊಂದು ಪ್ರಕರಣದಲ್ಲಿ ಕಂಟೈನ್ಮೆಂಟ್ ಝೋನ್ ಸಂಪರ್ಕಕ್ಕೆ ಬಂದ 55 ವರ್ಷದ ಪುರುಷ (ಪಿ-1130)ನಿಗೆ ಕೋವಿಡ್ ಕಾಣಿಸಿಕೊಂಡಿದೆ. ಮತ್ತೊಂದು ಪ್ರಕರಣದಲ್ಲಿ 35 ವರ್ಷದ ಪುರುಷ (ಪಿ-1129)ನಿಗೆ ಸೋಂಕು ಪತ್ತೆಯಾಗಿದ್ದು, ಈತನಿಗೆ ಹೇಗೆ ಸೋಂಕು ಹರಡಿತ್ತು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ
ಒಟ್ಟು 104 ಕೋವಿಡ್ ಸೋಂಕಿತರಲ್ಲಿ 47 ಜನರು ಗುಣಮುಖರಾಗಿದ್ದಾರೆ. 7 ಸೋಂಕಿತರು ಮಹಾಮಾರಿಗೆ ತುತ್ತಾಗಿದ್ದಾರೆ. ಉಳಿದಂತೆ 50 ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.