Advertisement
ರಾಜ್ಯದ 14,796 ಪ್ರೌಢಶಾಲೆಗಳ ಪೈಕಿ 7,328 ಶಾಲೆಗಳು ಈಗಾಗಲೇ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದು, 7,468 ಶಾಲೆಗಳು ತಾತ್ಕಾಲಿಕ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಬಾಕಿ ಇವೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಳಾ ತಿಳಿಸಿದ್ದಾರೆ. ಮಂಡಳಿಯ ಜಾಲತಾಣ //www.kseeb.kar.nic.inನಲ್ಲಿ ತಂತ್ರಾಂಶ ಲಭ್ಯವಿದೆ. ಈಗಾಗಲೇ ಮೌಲ್ಯಮಾಪನದ ಕಾರ್ಯಕ್ಕೆ ಶಿಕ್ಷಕರ ಮಾಹಿತಿ ಅಪ್ ಲೋಡ್ ಮಾಡು ತ್ತಿರುವ ತಂತ್ರಾಂಶದ ಯೂಸರ್‌ನೆಮ್ ಹಾಗೂ ಪಾಸ್‌ವರ್ಡ್ ಬಳಸಿ ತಾತ್ಕಾಲಿಕ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಯ ಹೆಸರು, ತಂದೆ, ತಾಯಿಯ ಹೆಸರು, ಜನ್ಮ ದಿನಾಂಕ, ಲಿಂಗ, ದೈಹಿಕ ಸ್ಥಿತಿ, ಧರ್ಮ, ಫೋಟೋ ಮತ್ತು ಸಹಿ ಇತ್ಯಾದಿ ಅಂಶಗಳನ್ನುಸರಿಯಾಗಿ ಪರಿ ಶೀಲಿಸಿ, ತಪ್ಪಿದ್ದಲ್ಲಿ ತಿದ್ದುಪಡಿ ಮಾಡಲು ಅವಕಾಶವಿದೆ. ಪುನರಾವರ್ತಿತ ಅಭ್ಯರ್ಥಿಗಳಿಗೆ ಫೋಟೋ ಮತ್ತು ಸಹಿಯನ್ನು ಮಾತ್ರ ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ.