Advertisement

3 ಸಾವಿರ ಗುತ್ತಿಗೆ ನೌಕರರಿಗೆ ತಾತ್ಕಾಲಿಕ ರಜೆ !

12:25 AM Apr 22, 2019 | sudhir |

ಬೆಳ್ತಂಗಡಿ: ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಹಾಸ್ಟೆಲ್‌ಗ‌ಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ಮೂರು ಸಾವಿರಕ್ಕೂ ಹೆಚ್ಚು ನೌಕರರನ್ನು ಏಕಾಏಕಿ ತಾತ್ಕಾಲಿಕ ರಜೆ ಮೇಲೆ ಕಳುಹಿಸಿದೆ.

Advertisement

3,312 ಮಂದಿ ಅಡುಗೆ ಕೆಲಸ ನಿರ್ವಹಿಸುತ್ತಿದ್ದರು. ಎ. 10 ರಿಂದ ಇವರನ್ನು ತಾತ್ಕಾಲಿಕ ರಜೆ ಮೇಲೆ ಕಳುಹಿಸಿರುವ ಪರಿಣಾಮ ನಾಲ್ಕು ತಿಂಗಳ ಕೆಲಸದ ವೇತನವೂ ಇಲ್ಲದೇ ಮತ್ತು ಕೆಲಸವೂ ಇಲ್ಲದೇ ಕುಟುಂಬಗಳು ದಾರಿಗೆ ಬಿದ್ದಿವೆ.

ಈ ಹಿಂದೆ ಸರಕಾರದ ನಿರ್ದೇಶನದಂತೆ ಜನವರಿ 2019ರಿಂದ 2 ತಿಂಗಳ ರಜೆ ಹೊರತು ಪಡಿಸಿ 6 ತಿಂಗಳು ಸೇವಾವಧಿ ವಿಸ್ತರಿಸಲಾಗಿತ್ತು. ಸದ್ಯ ಜೂನ್‌ ಬಳಿಕ ಕೆಲಸಕ್ಕೆ ನಿಯೋ ಜಿಸಿಕೊಳ್ಳಲಾಗುವುದೆಂದು ಅಧಿಕಾ ರಿಗಳು ಭರವಸೆ ನೀಡಿದರೂ, ಅದು ಖಾತ್ರಿಯಲ್ಲ ಎಂದು ಕೆಲವು ನೌಕರರು ಅಭಿಪ್ರಾಯ ಪಡುತ್ತಿದ್ದಾರೆ.

ರಾಜ್ಯದಲ್ಲಿ ಇನ್ನಷ್ಟೇ ಪದವಿ ಪರೀಕ್ಷೆ ಆರಂಭವಾಗಬೇಕಿದ್ದು, ಅನೇಕ ಹಾಸ್ಟೆಲ್‌ಗ‌ಳಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೂ ತಾತ್ಕಾಲಿಕ ರಜೆ ನೀಡಿರುವುದು ಈ ಅನುಮಾನಕ್ಕೆ ಕಾರಣವಾಗಿದೆ.ಇಲಾಖೆಯು ಕಳೆದ ವರ್ಷ ನೇರ ನೇಮಕಾತಿ ಮೂಲಕ ರಾಜ್ಯದ 2438 ಬಿಸಿಎಂ ಹಾಸ್ಟೆಲ್‌ಗ‌ಳಿಗೆ ಸುಮಾರು 4500 ಅಡುಗೆ ಮತ್ತು ಅಡುಗೆ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಿತ್ತು. ಆಗ ಹೊರಗುತ್ತಿಗೆಯಲ್ಲಿದ್ದ ಸಿಬಂದಿಯನ್ನು ಸೇವೆ ಯಿಂದ ಬಿಡುಗಡೆಗೊಳಿಸಲು ಸೂಚಿಸಿತ್ತು. ಸರಕಾರದ ಈ ನಿರ್ಧಾರ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

ಹೊಂದಾಣಿಕೆ ಇಲ್ಲ
ಸರಕಾರದಿಂದ ಹೊಸದಾಗಿ ನೇಮಕಗೊಂಡ ಅರ್ಧ ದಷ್ಟು ಸಿಬಂದಿಗೆ ಅಡುಗೆ ಮಾಡಲು ಬರು ವುದಿಲ್ಲ. ಈಗಿರುವ ಗುತ್ತಿಗೆ ನೌಕರರು ಪಡೆಯುವ ಸಂಬಳಕ್ಕಿಂತ 2 ಪಟ್ಟು ಹೆಚ್ಚು ವೇತನ ಪಡೆದರೂ ಸಮಯಕ್ಕೆ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ವಿದ್ಯಾರ್ಥಿಗಳ ಜತೆ ಹೊಂದಾಣಿಕೆಯೂ ಇಲ್ಲ. ಪರೀಕ್ಷೆ ಅವಧಿಯಲ್ಲಿ ತಿಂಡಿ, ಊಟಕ್ಕೆ ಸಮಸ್ಯೆ ಎದುರಾಗುತ್ತಿದೆ. ಹೊರಗುತ್ತಿಗೆ ನೌಕ ರರನ್ನೇ ಮುಂದುವರಿಸಿ ಎಂಬ ಕೂಗು ವಿದ್ಯಾ ರ್ಥಿಗಳಿಂದಲೂ ಕೇಳಿಬರುತ್ತಿದೆ.

Advertisement

ಸಿಎಂ ಸ್ಪಂದಿಸಲಿ
ರಾಜ್ಯದ ಹಾಸ್ಟೆಲ್‌ಗ‌ಳಲ್ಲಿನ ಅಡುಗೆ ಮತ್ತು ಅಡುಗೆ ಸಹಾಯಕರಿಗೆ ಉದ್ಯೋಗ ಭದ್ರತೆ ನೀಡುವಲ್ಲಿ ಸರಕಾರ ಎಡವುತ್ತಿದೆ ಎಂಬ ಅಭಿಪ್ರಾ ಯವಿದ್ದು, ಮುಖ್ಯಮಂತ್ರಿಯವರು ಇದರತ್ತ ಗಮನಹರಿಸಬೇಕಿದೆ ಎಂಬ ಆಗ್ರಹ ಗುತ್ತಿಗೆ ನೌಕರರದ್ದು. ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಪುಟ್ಟರಂಗ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಬಳಿ ನೌಕರರು ಚರ್ಚೆ ನಡೆಸಿದ್ದು, ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನಡೆಸುವ ಸಭೆಯ ದಿನಾಂಕದ ನಿರೀಕ್ಷೆಯಲ್ಲಿದ್ದಾರೆ.

ಸರಕಾರದ ಆದೇಶದಂತೆ ಹಾಸ್ಟೆಲ್‌ ಹೊರಗುತ್ತಿಗೆ ಅಡುಗೆ ನೌಕರರಿಗೆ ಈಗಾ ಗಲೇ ಜನವರಿಯಿಂದ 6 ತಿಂಗಳು ಸೇವಾವಧಿ ಮುಂದೂಡಲಾಗಿದೆ. ಬಳಿಕವೂ ಮುಂದು ವರಿಸುವ ನಿರ್ಧಾರ ಸರಕಾರಕ್ಕೆ ಸಂಬಂಧಿಸಿದ್ದು.
-ಎಚ್‌.ಜಿ.ಪ್ರಭಾಕರ್‌ ಜಂಟಿ ನಿರ್ದೇಶಕರು, ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಜಿಲ್ಲೆಯ 73 ಹಾಸ್ಟೆಲ್‌ಗ‌ಳಲ್ಲಿ ಹೊರಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿರುವವರನ್ನು ಮಕ್ಕಳ ಸಂಖ್ಯೆ ಪರಿಗಣಿಸಿ ತಾತ್ಕಾಲಿಕ ರಜೆ ನೀಡಲಾಗಿದೆ. ಮೇಲಧಿಕಾರಿಗಳ ಆದೇಶದಂತೆ ಜೂನ್‌ ಮೊದಲ ವಾರದಲ್ಲಿ ಸೇವೆಗೆ ಹಾಜರಾಗುವಂತೆ ಸೂಚಿಸಲಾಗುತ್ತದೆ.
-ಮೊಹಮದ್‌ ಸಿಯಾರ್‌, ಜಿಲ್ಲಾ ಅಧಿಕಾರಿ, ದ.ಕ.ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next