Advertisement
ಕಳೆದ ಮಳೆಗಾಲದಲ್ಲಿ ಆರಂಭದಲ್ಲಿ ಸಾಕಷ್ಟು ಮಳೆ ಬಂದಿದ್ದರೂ ಸೆಪ್ಟಂಬರ್ ವೇಳೆಗೆ ನದಿಯಲ್ಲಿ ನೀರಿನ ಪ್ರಮಾಣ ಗಣ ನೀಯ ಇಳಿಕೆಯಾಗಿದ್ದು, ಜನತೆ ಯನ್ನು ಆತಂಕಕ್ಕೀಡು ಮಾಡಿತ್ತು. ಬೇಸಗೆ ಯಲ್ಲಿ ಬೆಳ್ತಂಗಡಿ ಜನತೆಗೆ ನೀರು ಕೊಡುವುದಕ್ಕಾಗಿ ಆ ಸಂದರ್ಭದಲ್ಲೇ ಕಟ್ಟ ನಿರ್ಮಿಸಬೇಕೇ ಎಂಬ ಆತಂಕವೂ ಸೃಷ್ಟಿಯಾಗಿತ್ತು.
ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಒಟ್ಟು 1,415 ನೀರಿನ ಸಂಪರ್ಕಗಳಿದ್ದು, ಪ್ರತಿನಿತ್ಯ ಸುಮಾರು 1.05 ಎಂಎಲ್‌ಡಿ ನೀರಿನ ಬೇಡಿಕೆ ಇದೆ. ಸುಮಾರು 0.6 ಎಂಎಲ್‌ಡಿ ನೀರನ್ನು ನದಿಯಿಂದ ಹಾಗೂ 0.45 ಎಂಎಲ್‌ಡಿ ನೀರನ್ನು 9 ಕೊಳವೆಬಾವಿಗಳ ಮೂಲಕ ಪಡೆಯಲಾಗುತ್ತಿದೆ.
Related Articles
ನದಿಗೆ ತಾತ್ಕಾಲಿಕ ಕಟ್ಟ ನಿರ್ಮಿಸುವ ಸಂದರ್ಭದಲ್ಲಿ ಹಿಚಾಚಿ ಮೂಲಕ 1 ಮೀಟರ್‌ನಷ್ಟು ನದಿಯ ಚರಳನ್ನು ತೆಗೆದು, ಅದಕ್ಕೆ ಮರಳು ಚೀಲಗಳನ್ನು ಇಟ್ಟು ಅಡಿಪಾಯವನ್ನು ಮಾಡಲಾಗುತ್ತದೆ. ಬಳಿಕ 2 ಮೀಟರ್‌ನಷ್ಟು ಎತ್ತರಕ್ಕೆ ಮಣ್ಣು ಹಾಕಲಾಗುತ್ತದೆ.
Advertisement
ಬಳಿಕ ಗೋಣಿ ಚೀಲದಲ್ಲಿ ಮಣ್ಣನ್ನು ತುಂಬಿಸಿ ಚಾನೆಲ್ ರೀತಿ ಮಾಡಲಾಗುತ್ತದೆ. ಅಂದರೆ ಓವರ್‌ಫ್ಲೋ ಆದ ನೀರು ಇದರ ಮೂಲಕ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಒಂದು ವೇಳೆ ಮಳೆ ಬಂದು ನೀರು ಹೆಚ್ಚಾದರೂ ಇದರ ಮೂಲಕ ಹರಿದು ಹೋಗುತ್ತದೆ. ತಾತ್ಕಾ ಲಿಕ ಕಟ್ಟ ನಿರ್ಮಿಸುವ ಕಾರಣದಿಂದ ಮುಂದಿನ ವರ್ಷಕ್ಕೆ ಏನೂ ಸಿಗುವುದಿಲ್ಲ. ಮಳೆಗಾಲದಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗುತ್ತದೆ.
ಮಿತವಾಗಿ ಬಳಸಿಪ್ರಸ್ತುತ ದಿನಗಳಲ್ಲಿ ಇತರ ನಗರ ಭಾಗಗಳಲ್ಲಿ ಬೇಸಗೆಯಲ್ಲಿ ನೀರಿನ ಅಭಾವ ಕಾಡುತ್ತಿದ್ದು, ಬೆಳ್ತಂಗಡಿಯ ಜನತೆಯೂ ನೀರನ್ನು ಮಿತವಾಗಿ ಬಳಸಬೇಕು ಎಂದು ಇಲ್ಲಿನ ಪ.ಪಂ.ಮನವಿ ಮಾಡುತ್ತಿದೆ. ಅಂದರೆ ತಮ್ಮ ದಿನಗಳ ಬಳಕೆಗೆ ಅಲ್ಲದೆ ಹೂವಿನ ಗಿಡಗಳು, ಕೃಷಿಗೆ ಈ ನೀರು ಬಳಕೆ ಮಾಡಬಾರದು ಎಂದು ಮನವಿ ಮಾಡುತ್ತಿದೆ. ಮುಂದಿನ ವಾರ ನಿರ್ಮಾಣ
ಮುಂದಿನ ವಾರ ನದಿಗೆ ತಾತ್ಕಾಲಿಕ ಕಟ್ಟ ನಿರ್ಮಾಣ ಕಾರ್ಯ ನಡೆಯಲಿದ್ದು, ಸುಮಾರು 1.75 ಲಕ್ಷ ರೂ.ಗಳನ್ನು ಅದಕ್ಕಾಗಿ ಮೀಸಲಿಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಯಾವುದೇ ತೊಂದರೆ ಇಲ್ಲದಾಗಿದ್ದು, ಜನರೂ ನೀರಿನ ಮಿತ ಬಳಕೆಯ ಕುರಿತು ಹೆಚ್ಚಿನ ಗಮನಹರಿಸಬೇಕಿದೆ.
– ಮಹಾವೀರ ಅರಿಗ ಎಂಜಿನಿಯರ್,
ಪ.ಪಂ. ಬೆಳ್ತಂಗಡಿ  •ಕಿರಣ್ ಸರಪಾಡಿ