Advertisement

ಟ್ರಕ್ ಮತ್ತು ಟೆಂಪೋ ನಡುವೆ ಭೀಕರ ಅವಘಡ: 12 ಜನರು ದುರ್ಮರಣ

10:12 AM Feb 24, 2020 | Team Udayavani |

ಗುಜರಾತ್: ಟ್ರಕ್ ಮತ್ತು ಟೆಂಪೋ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 12 ಜನರ ಸಾವನ್ನಪ್ಪಿ, 4 ಜನರು ಗಂಭೀರ ಗಾಯಗೊಂಡ ಘಟನೆ ವಡೋದರಾ ಜಿಲ್ಲೆಯ ಮಹುವದ್ ಜಿಲ್ಲೆಯಲ್ಲಿ ನಡೆದಿದೆ.

Advertisement

ವಡೋದರಾ ಜಿಲ್ಲೆ ಪೊಲೀಸ್ ವರಿಷ್ಟಾಧಿಕಾರಿ ಸುಧೀರ್ ದೇಶಾಯಿ ಈ ಕುರಿತು ಮಾಹಿತಿ ನೀಡಿದ್ದು ಶನಿವಾರ ರಾತ್ರಿ ಟೆಂಪೋ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿ 12 ಜನರು ದುರ್ಮರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಗಾಯಗೊಂಡವರನ್ನು ವಡೋದರಾದ ಎಸ್ ಎಸ್ ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರಾದವರು ಯಾವ ನಗರದವರು, ಎಲ್ಲಿಗೆ ಪ್ರಯಾಣಿಸುತ್ತಿದ್ದರು ಎಂಬ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next