Advertisement
ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಹೋಗುತ್ತಿದ್ದ ಕಲ್ಲು ಸಾಗಾಟದ ಟೆಂಪೊ ನ್ಯಾರ್ಮ ಇಳಿಜಾರಿನಲ್ಲಿ ಹೋಗುವಾಗ ಎದುರಿನ ವಾಹನ ಒಮ್ಮೆಲೇ ಬ್ರೇಕ್ ಹಾಕಿದ್ದು, ಎದುರಿನಿಂದ ಬಂದ ಇನ್ನೊಂದು ವಾಹನವನ್ನು ತಪ್ಪಿಸುವ ಸಲುವಾಗಿ ಟೆಂಪೋ ಚಾಲಕ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿದ ಟೆಂಪೋ ಪಲ್ಟಿಯಾಗಿದೆ. ಟೆಂಪೋದಲ್ಲಿದ್ದ ಓರ್ವನಿಗೆ ಗಾಯವಾಗಿದ್ದು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
Related Articles
Advertisement
ಅಫಘಾತ ವಲಯ
ಆತ್ರಾಡಿ-ಶಿರ್ವ-ಬಜ್ಪೆ ರಸ್ತೆ ವಿಸ್ತರಣೆ ವೇಳೆ ಶಿರ್ವ ನ್ಯಾರ್ಮ ಸೇತುವೆ ಪುನರ್‌ನಿರ್ಮಾಣಗೊಂಡಿದ್ದು, ತಿರುವಿನಿಂದ ಕೂಡಿದ ರಸ್ತೆ ಕಾಮಗಾರಿಯಿಂದಾಗಿ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಸರಿಯಾಗಿ ಕಾಣದೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಶಿರ್ವದ ನಾಗರಿಕರು ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿರುವಿನಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.