Advertisement

ಪ್ರವಾಸದ ಟೆಂಪೋ ಪಲ್ಟಿ;  ಆರು ಮಂದಿಗೆ ಗಾಯ

06:40 AM Jul 20, 2017 | Team Udayavani |

ಉಡುಪಿ: ಪ್ರವಾಸಕ್ಕೆ ತೆರಳಿದ್ದ ಟೆಂಪೋ ಟ್ರಾವೆಲರ್‌ ರಾ.ಹೆ. 66ರ ಕಲ್ಯಾಣಪುರ ಸೇತುವೆಯ ಬಳಿ ಬುಧವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

Advertisement

ಪುತ್ತೂರಿನ ಕೊಡಿಪಾಡಿ ಗ್ರಾಮದ ನಾರಾಯಣ ನಾಯ್ಕ, ವನಿತಾ, ರೇಖಾ, ಶಿವರಾಮ, ಶಶಿಕಲಾ, ಶಾರದಾ ಮತ್ತು ಗಾಯಗೊಂಡವರು. ಸಂಬಂಧಿಕರಾಗಿದ್ದ ಅವರು ಪುತ್ತೂರಿನಿಂದ ಗುಲ್ಬರ್ಗದ ಗಾಣಗಾಪುರಕ್ಕೆ ಬುಧವಾರ ಬೆಳಗ್ಗೆ ಪ್ರವಾಸಕ್ಕೆಂದು ಪ್ರಯಾಣ ಬೆಳೆಸಿದ್ದರು. ಟೆಂಪೋದಲ್ಲಿ ಒಟ್ಟು 12 ಮಂದಿ ಪ್ರಯಾಣಿಸುತ್ತಿದ್ದರು ಎಂದು ಉಡುಪಿ ಟ್ರಾಫಿಕ್‌ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next