Advertisement

Road Mishap ಬಂಟ್ವಾಳ: ಟೆಂಪೋ-ಬೈಕ್‌ ಢಿಕ್ಕಿ: ಸವಾರರಿಗೆ ಗಾಯ

11:17 PM Dec 01, 2023 | Team Udayavani |

ಬಂಟ್ವಾಳ: ನೀರಿನ ಬಾಟಲ್‌ ಸಾಗಾಟ ಮಾಡುವ ಟೆಂಪೋವೊಂದು ಬೈಕಿಗೆ ಢಿಕ್ಕಿ ಹೊಡೆದು ಸವಾರರಿಬ್ಬರು ಗಾಯಗೊಂಡ ಘಟನೆ ನ. 30ರಂದು ಸಜೀಪಮೂಡ ಗ್ರಾಮದ ಕಂದೂರಿನಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಬೈಕ್‌ ಸವಾರ ದಿವಾಕರ ಹಾಗೂ ಸಹಸವಾರೆ ಮೋಹಿನಿ ಅವರು ಬೈಕ್‌ ಸಹಿತ ಡಾಂಬರು ರಸ್ತೆಗೆ ಬಿದ್ದು, ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಟೆಂಪೋದಲ್ಲಿದ್ದ ಸಹಾಯಕ ಪೃಥ್ವಿರಾಜ್‌ ಅವರು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಚಾಲಕ ಆಕಾಶ್‌ ಅವರು ಗುಂಡಿ ತಪ್ಪಿಸುವ ಭರದಲ್ಲಿ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಬೈಕಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next