ಪಿರಿಯಾಪಟ್ಟಣ: ಹಿಂದಿನ ಕಾಲದಲ್ಲಿ ದೇವಾಲಯವು ಧಾರ್ಮಿಕ ಕಾರ್ಯ ಗಳಿಗಷ್ಟೇ ಸೀಮಿತವಾಗಿರದೆ ಶಿಕ್ಷಣ, ನ್ಯಾಯದಾನದ ಜೊತೆಗೆ ರಂಗಕಲೆಗಳನ್ನು ಪೋಷಿಸುವ ಕೇಂದ್ರಗಳಾಗಿದ್ದವು ಎಂದು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ತಾಲೂಕು ಗಳಗನಕೆರೆ ಗ್ರಾಮದಲ್ಲಿ ಗ್ರಾಮಾಂತರ ಬಸವ ಜಯಂತಿ ಮತ್ತು ವಿವಿಧ ದೇವಾಲಯಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಸಾಂಸ್ಕೃತಿ ಕಾರ್ಯಕ್ರಮಗಳು, ರಂಗಕಲೆ ಗಳನ್ನು ಪೋಷಿಸಿ ಬೆಳೆಸಿದ ಕೇಂದ್ರವಾಗಿದ್ದವು. ಇಂತಹ ದೇವಾಲಯಗಳನ್ನು ಕಟ್ಟಿ ಬೆಳೆಸುವ ಪ್ರಯತ್ನ ಮುಂದುವರೆದಿವುದು ಸಂತಸದ ಸಂಗತಿ ಎಂದರು.
12ನೇ ಶತಮಾನವನ್ನು ಧಾರ್ಮಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಅತ್ಯಂತ ಮಹತ್ವ ಪೂರ್ಣ ಯುಗವಾಗಿದೆ. ಇದು ಎಲ್ಲರಿಗೂ ಮಾರ್ಗದರ್ಶನವನ್ನು ನೀಡಿದ ಬಸವಣ್ಣನವರ ಯುಗವಾಗಿದೆ. ಮನುಷ್ಯ ಮನುಷ್ಯನಾಗಿ ಬದುಕಲು ಬೇಕಾದ ಎಲ್ಲಾ ಕಲೆಗಳನ್ನು ತಿಳಿಸಿಕೊಟ್ಟವರು ವಚನಕಾರರು. ಇಷ್ಟಲಿಂಗಕದ ಪರಿಕಲ್ಪನೆಯನ್ನು ನೀಡಿ ದೇವಾಲಯಕ್ಕೆ ಹೋಗುವ ಬದಲು ತನ್ನಲ್ಲಿ ಇರುವ ದೇವರನ್ನು ಪೂಜಿಸಿ ಎಂದು ಬಸವಣ್ಣನವರು ತಿಳಿಸಿದರು. ಹೆಣ್ಣುಮಕ್ಕಳಿಗೆ ಧಾರ್ಮಿಕ ಸ್ವಾತಂತ್ರವನ್ನು ಕೊಟ್ಟವರು ವಚನಕಾರರು ಎಂದರು.
ಮೈಸೂರು ವಸ್ತುಪ್ರದರ್ಶನದ ಪ್ರಾಧಿಕಾರಿದ ಮಾಜಿ ಅಧ್ಯಕ್ಷ ಮಹೇಂದ್ರ ಮಾತ ನಾಡಿ, ಗ್ರಾಮಸ್ಥರ ಒಗ್ಗಟ್ಟು ಮತ್ತು ಸೇವಾ ಮನೋಭಾವನೆಯಿಂದ ದೇವಾಲಯ ನಿರ್ಮಾಣವಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ಜೀವನ ನಡೆಸಬೇಕು. ರೈತರು ನಗರ ಪ್ರದೇಶವನ್ನು ಅವಲಂಬಿಸುತ್ತಿರುವುದು ಹೆಚ್ಚಾಗುತ್ತಿದ್ದು, ಇದು ನಿಲ್ಲಬೇಕು. ಆದ್ದರಿಂದ ದೇಶದ ಅಭಿವೃದ್ಧಿಗಾಗಿ ರೈತರು ಹೆಚ್ಚು ಗ್ರಾಮೀಣ ಪ್ರದೇಶದಲ್ಲಿ ಉಳಿಯಬೇಕು. ಇದಕ್ಕಾಗಿ ಗ್ರಾಮೀಣ ಭಾಗಕ್ಕೆ ಸರ್ಕಾರಗಳು ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ತಿಳಿಸಿದರು.
ಲಾಲದೇವನಹಳ್ಳಿ ಮಠದ ಜಯದೇವಿತಾಯಿ ಮಾತನಾಡಿ, ಮಾನಸಿಕ ನೆಮ್ಮದಿಗೆ ಉತ್ತಮ ಆರೋಗ್ಯಕ್ಕೆ ದೇವಾಲಯಗಳು ಅಗತ್ಯವಿದ್ದು. 12ನೇ ಶತಮನಾದಲ್ಲಿ ಅಲ್ಲಮ್ಮಪ್ರಭು ಮಾನಸಿಕ ಕೊಳೆಯನ್ನು ತೆಗೆಯಲು ಮಹತ್ವದ ಯೋಜನೆಯನ್ನು ರೂಪಿಸಿದ್ದರು. ಸಾಧುಸಂತರ ಆದರ್ಶಗಳು ಗ್ರಾಮೀಣ ಜನರಿಗೆ ಬಹಳ ಅಗತ್ಯವಿದೆ
ಎಂದು ತಿಳಿಸಿದರು.
ಇದೇ ವೇಳೆ ವೀರಭದ್ರೇಶ್ವರ, ಭದ್ರಕಾಳಮ್ಮ, ಬಸವೇಶ್ವರ ದೇವಾಲಯಗಳ ಉದ್ಘಾಟನೆ ಮಾಡಲಾಯಿತು. ಸಂಜೆ ಜಗಜ್ಯೋತಿ ಬಸವೇಶ್ವ ನಾಟಕ ಮಾಡಲಾಯಿತು.
ಬೆಟ್ಟದಪುರದ ಚನ್ನಬಸವದೇಶಿಕೇಂದ್ರ ಸ್ವಾಮಿಜಿ, ಮಾದಳ್ಳಿ ಮಠದ ಸದಾಶಿವ ಸ್ವಾಮೀಜಿ, ಗಾವಡಗೆರೆಯ ನಟರಾಜ ಸ್ವಾಮೀಜಿ, ರಾವಂದೂರಿನ ಮೋಕ್ಷಪತಿ ಸ್ವಾಮೀಜಿ, ಜೆಡಿಎಸ್ ಅಧ್ಯಕ್ಷ ಕೆ.ಮಹದೇವ್, ಅಂಕನಹಳ್ಳಿ ಮಠದ ವಿಜಯಕುಮಾರ ಸ್ವಾಮೀಜಿ, ಸರಗೂರು ಮಠದ ಮೃತ್ಯುಂಜಯ ಸ್ವಾಮೀಜಿ,
ದಿಂಡಗಾಡುಮಠದ ಅಪ್ಪಾಜಿ ಸ್ವಾಮೀಜಿ, ಹಾಡ್ಯಾದ ಬಸವರಾಜ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷ ಎಚ್.ಡಿ.ಪರಮೇಶ್, ಹೊಲದಪ್ಪ, ವೀರಶೈವ ನೌಕರರ ಸಂಘದ ಅಧ್ಯಕ್ಷ ಶಿವಯೋಗ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಿ.ಎಸ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪಾಲಾಕ್ಷ, ಕೆಪಿಸಿಸಿ ಸದಸ್ಯ ಡಿ.ಟಿ.ಸ್ವಾಮಿ, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಸೇರಿದಂತೆ ಅನೇಕರು ಹಾಜರಿದ್ದರು.