Advertisement

ಪಾಕ್‌ ನ ಸಿಂಧ್‌ ಪ್ರಾಂತ್ಯದಲ್ಲಿ ಹಿಂದೂ ದೇವಸ್ಥಾನಗಳು, ಮನೆಗಳ ಮೇಲೆ ದಾಳಿ

09:56 AM Sep 17, 2019 | Team Udayavani |

ಇಸ್ಲಮಾಬಾದ್:‌ ಪಾಕಿಸ್ಥಾನದ ಸಿಂಧ್‌ ಪ್ರಾಂತ್ಯದ ಕೆಲವು ಹಿಂದೂ ದೇವಸ್ಥಾನಗಳು ಮತ್ತು ಹಿಂದೂ ಸಮುದಾಯದ ಮನೆಗಳ ಮೇಲೆ ದಾಳಿಯಾಗುತ್ತಿರುವ ಬಗ್ಗೆ ವರದಿಯಾಗಿದೆ.

Advertisement

ಸಿಂಧ್‌ ಪ್ರಾಂತ್ಯದ ಘೋಟ್ಕಿ ಪ್ರದೇಶದಲ್ಲಿ ಈ ಗಲಭೆಗಳಾಗುತ್ತಿದ್ದು, ಶಾಲಾ ಪ್ರಾಂಶುಪಾಲನೊಬ್ಬ ಧರ್ಮನಿಂದನೆಯ ಮಾತುಗಳನ್ನಾಡಿದ್ದು ಇದಕ್ಕೆ ಕಾರಣ ಎಂದು ವರದಿಯಾಗಿದೆ.

ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು “ಏಕಾಏಕಿ ಜನಸಮೂಹ ಹಿಂಸಾಚಾರದ ” ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪಾಕ್‌ ಪೊಲೀಸರ ಹೇಳಿಕೆಯನ್ನು ಆಧರಿಸಿ ಪಾಕಿಸ್ಥಾನದ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next