Advertisement

Udupi; ದೇಗುಲ ಸರಕಾರದ ನಿಯಂತ್ರಣದಲ್ಲಿರಬಾರದು: ಸಿಟಿ ರವಿ

10:52 PM Jan 23, 2024 | Team Udayavani |

ಉಡುಪಿ: ಸರಕಾರದ ಕಪಿಮುಷ್ಠಿಯಿಂದ ಹೊರ ಬಂದರೆ ದೇವಸ್ಥಾನಗಳು ಅಭಿವೃದ್ಧಿಯಾಗುತ್ತದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅರ್ಚಕ ಹಿರೇಮಗಳೂರು ಕಣ್ಣನ್‌ ಅವರಿಗೆ ಸರಕಾರ ನೀಡಿದ ನೊಟೀಸ್‌ ವಿಚಾರವಾಗಿ ಪ್ರತಿಕ್ರಿಯಿಸಿದರು. ಇವರಿಗೆ ದೇವರ ಮೇಲೆ ಭಕ್ತಿ ಇಲ್ಲ, ಹುಂಡಿಯ ಮೇಲೆ ಪ್ರೀತಿ ಇದೆ. ದೇವಾಲಯಗಳ ಮೇಲೆ ಸರಕಾರದ ನಿಯಂತ್ರಣ ತಪ್ಪು. ದೇವಸ್ಥಾನ ಸಮಾಜದ ನಿಯಂತ್ರಣದಲ್ಲಿರಬೇಕು. ದೇವಾಲಯ ಭಕ್ತರ ಸ್ವತ್ತು. ಭಕ್ತರು ಕೊಟ್ಟ ಹಣವನ್ನು ಟೆನೆಂಟ್‌ ಆ್ಯಕ್ಟ್ ಜಾರಿಗೆ ತಂದು ದೇವಾಲಯವನ್ನು ಬಡವು ಮಾಡಿದ್ದಾರೆ ಎಂದರು.

ದೇವಸ್ಥಾನಗಳಿಗೆ ತಸ್ತಿಕ್‌ನ್ನು ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ ಎಂದ ಅವರು ಹಿರೇಮಗಳೂರು ಕಣ್ಣನ್‌ ಅವರಿಂದ ಹಣ ವಾಪಸ್‌ ಕೇಳುವುದು ಅಕ್ಷಮ್ಯ. ಸರಕಾರದ ಮಾನಸಿಕತೆಯನ್ನು ಇದು ತೋರಿಸುತ್ತದೆ. ಈ ರೀತಿ ದೇಗುಲಗಳ ಮೇಲಿನ ನಿಯಂತ್ರಣ ಮಸೀದಿ -ಚರ್ಚುಗಳ ಮೇಲೆ ಇಲ್ಲ. ತಮಿಳುನಾಡಿನಂತಹ ನಾಸ್ತಿಕ ಸರಕಾರಕ್ಕೂ ದೇವರ ದುಡ್ಡು ಬೇಕು. ಸರಕಾರ ನಿಯಂತ್ರಣ ಕಡಿಮೆ ಮಾಡಲು ಧಾರ್ಮಿಕ ಪರಿಷತ್‌ ರಚನೆ ಮಾಡಿದ್ದೆವು. ದೇವಾಲಯಗಳನ್ನು ಮುಕ್ತಗೊಳಿಸುವ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ ಎಂದರು.

ರಾಮಮಂದಿರ ಮೂಲಕ ಪರಕೀಯರ ಆಕ್ರಮಣದಿಂದ ಕಳೆದುಕೊಂಡ ಸಾಂಸ್ಕೃತಿಕ ಬೀಜಾಂಕುರ ಆಗಿದೆ. ರಾಮ ಹುಟ್ಟಿದ ಜಾಗದಷ್ಟೇ ಕೃಷ್ಣನ ಮಥುರವೂ ನಮಗೆ ಪವಿತ್ರವಾಗಿದ್ದು, ಜ್ಞಾನವ್ಯಾಪಿಯ ನಂದಿ ಕಾಶಿಯ ಪುನರುತ್ಥಾನಕ್ಕೆ ಕಾಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next