Advertisement
ದೇವಾಲಯಗಳನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು, ಅಭಿವೃದ್ಧಿಗೊಂಡಾಗ ನಮ್ಮ ಗ್ರಾಮವೂ ಅಭಿವೃದ್ಧಿಗೊಳ್ಳುತ್ತದೆ ಎನ್ನುವುದು ನಮ್ಮ ನಂಬಿಕೆಯಾಗಿದೆ. ದೇವಾಲಯದ ದುಡ್ಡು ದೇವಾಲಯಕ್ಕೆ ಸೇರಬೇಕು. “ಎ’ ಗ್ರೇಡ್ ದೇವಾಲಯದಲ್ಲಿ ಉಳಿತಾಯವಾದ ಹಣವನ್ನು ಆ ಗ್ರಾಮದಲ್ಲಿರುವ ‘ಸಿ’ ಗ್ರೇಡ್ ದೇವಾಲಯಗಳ ಅಭಿವೃದ್ಧಿಗೆ ಉಪಯೋಗಿಸುವಂತಾಗಬೇಕು ಎಂದರು.
ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಸಮಾಜವನ್ನು ಒಂದು ಮಾಡುವ ಕೆಲಸವನ್ನು ಮಾಡೋಣ. ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಬೇಡಿ. ಇಡ್ಕಿದು ಗ್ರಾಮದಲ್ಲಿ ಇದೀಗಾಗಲೇ ನಿರ್ಮಾಣವಾಗಿರುವ ಹಿಂದೂ ರುದ್ರಭೂಮಿಯನ್ನು ನೋಡಲು ಹೊರ ರಾಜ್ಯದಿಂದಲೂ ಅನೇಕ ಜನರು ಬರುತ್ತಿದ್ದಾರೆ. ಇದೇ ಗ್ರಾಮದ ಮಿತ್ತೂರು ಶಾಲೆಯ ಸುತ್ತ ಅಡಿಕೆ, ತರಕಾರಿ ಕೃಷಿಯನ್ನು ಮಾಡಲಾಗಿದ್ದು, ಅಲ್ಲಿ ಒಂದು ಸುಂದರ ವಾತಾವರಣ ನಿರ್ಮಾಣವಾಗಿದೆ ಎಂದರು. ಸುತ್ತೋಲೆ ಹೊರಡಿಸಲಾಗಿದೆ
ರಾಜ್ಯ ಧಾರ್ಮಿಕ ಪರಿಷತ್‌ನ ಸದಸ್ಯ ಜಗನ್ನಿವಾಸ ರಾವ್ ಮಾತನಾಡಿ, ದೇವಸ್ಥಾನಗಳು ಕೇವಲ ಶ್ರದ್ಧಾಕೆಂದ್ರವಾಗಿರದೆ ಎಲ್ಲ ವಿಚಾರವನ್ನು ಕಲಿಸುವ ಕೇಂದ್ರವಾಗಬೇಕು. ‘ಎ’ ಗ್ರೇಡ್ ನಲ್ಲಿರುವ ದೇವಸ್ಥಾನಗಳು ತಮ್ಮ ಸುತ್ತಮುತ್ತಲಲ್ಲಿರುವ ‘ಸಿ’ ಗ್ರೇಡ್ ದೇವಾಲಯವನ್ನು ದತ್ತು ಪಡೆದು ಅಭಿವೃದ್ಧಿ ಮಾಡಬೇಕು ಎಂದು ಈಗಾಗಲೇ ಸುತ್ತೋಲೆಗಳನ್ನು ಹೊರಡಿಸಲಾಗಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ದೇವ ಸ್ಥಾನಗಳ ಆಡಳಿತ ಉತ್ತಮ ರೀತಿಯಲ್ಲಿ ನಡೆಯಬೇಕು ಎನ್ನುವುದು ನಮ್ಮ ಆಶಯ ಎಂದರು.
Related Articles
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕ.ಶಿ. ವಿಶ್ವನಾಥ ಉರಿಮಜಲು ಪ್ರಾಸ್ತಾವಿಸಿ, ಶಾಲೆ ದೇವಸ್ಥಾನಗಳಲ್ಲಿ ರಾಜಕೀಯ ತರಬೇಡಿ ಅದು ಒಳಿತಲ್ಲ. ಅಪಪ್ರಚಾರಗಳಿಗೆ ಯಾರೂ ಕಿವಿಕೊಡಬೇಡಿ, ಅಭಿವೃದ್ಧಿ ಒಂದೇ ನಮ್ಮ ಗುರಿಯಾಗಿದೆ ಎಂದು ಹೇಳಿದರು.
Advertisement
ದೇವಾಲಯದ ಒಳಾಂಗಣದ ಮೇಲ್ಛಾವಣಿಯ ಕೆಲಸ ನಿರ್ವಹಿಸಿದ ರಮೇಶ್ ಆಚಾರ್ಯ, ಬಳಗದವರನ್ನು ಸಚಿವರು ಹಾಗೂ ಶಾಸಕರು ಶಾಲು ಹೊದೆಸಿ ಗೌರವಿಸಿದರು. ಅಂಕಿತಾ ಮಿತ್ತೂರು ಪ್ರಾರ್ಥಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಕೆ.ಎಸ್. ಪ್ರಕಾಶ್ ಉರಿಮಜಲು ಸ್ವಾಗತಿಸಿ.ವ್ಯವಾಸ್ಥಾಪನ ಸಮಿತಿ ಸದಸ್ಯೆ ಶ್ಯಾಮಲಾ ಮಿತ್ತೂರು ವಂದಿಸಿದರು. ಕೇಶವ ಮುಂಡ್ರುಬೈಲ್ ಕಾರ್ಯಕ್ರಮ ನಿರೂಪಿಸಿದರು.
10 ಲಕ್ಷ ರೂ. ವೆಚ್ಚದ ಮೇಲ್ಛಾವಣಿಕೋಲ್ಪೆ ಶ್ರೀಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಒಳಾಂಗಣದ ಮೇಲ್ಛಾವಣಿ ಸುಮಾರು ಹತ್ತು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಕಳೆದ ಚಂಪಾಷಷ್ಠಿಯ ದಿನ ಮೇಲ್ಛಾವಣಿ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. ಅದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು 3 ಲಕ್ಷ ರೂಪಾಯಿ ಅನುದಾನ ಒದಗಿಸಿದ್ದು, ಉಳಿದ ಮೊತ್ತವನ್ನು ಊರ ಪರವೂರ ಭಕ್ತರಲ್ಲಿ ಸಂಗ್ರಹಿಸಲು ಮನವಿ ಮಾಡಲಾಗಿದೆ ಎಂದು ಕೆ.ಎಸ್. ಪ್ರಕಾಶ್ ಉರಿಮಜಲು ಹೇಳಿದರು.