Advertisement

ಕರಾಚಿಯಲ್ಲಿ ಜೈಶ್ರೀರಾಂ ಘೋಷ

06:00 AM Aug 23, 2018 | |

ಕರಾಚಿ: ಪಾಕಿಸ್ಥಾನದಲ್ಲಿ ಹಿಂದೂಗಳ ವಿರುದ್ಧ ದೌರ್ಜನ್ಯ ನಡೆಯುತ್ತಿರುವ ವಿಚಾರ ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ. ಆದರೆ ಪಾಕಿಸ್ತಾನದ ಪ್ರಮುಖ ನಗರ ಕರಾಚಿಯ ಬಸ್ತಿ ಗುರು ಪ್ರದೇಶದಲ್ಲಿರುವ ದೇಗುಲದಲ್ಲಿ ಮುಸ್ಲಿಂ ಮಹಿಳೆ ಅನುಂ ಅಗಾ ವಿದ್ಯಾರ್ಥಿಗಳಿಗೆ ಶಿಕ್ಷಣ, ಆರೋಗ್ಯ ಮತ್ತು ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ಬಗ್ಗೆ ಅರಿವು, ಶಿಕ್ಷಣ ನೀಡುತ್ತಿದ್ದಾರೆ. ಈ ಕಾಲೋನಿಯಲ್ಲಿ 80-90 ಹಿಂದೂ ಕುಟುಂಬಗಳು ಇವೆ. ತೀರಾ ಇಕ್ಕಟ್ಟಾಗಿರುವ ಈ ಸ್ಥಳ ಭೂಗಳ್ಳರ ಕೆಂಗಣ್ಣಿಗೆ ಕೂಡ ಗುರಿಯಾಗಿದೆ. ಅನುಂ ಅಗಾ ಅವರು “ಸಲಾಂ’ ಎಂದರೆ “ಜೈ ಶ್ರೀರಾಂ’ ಎಂದು ಪ್ರತಿಕ್ರಿಯೆ ನೀಡುತ್ತಾರೆ. 

Advertisement

“ನಮ್ಮ ಶಾಲೆ ದೇಗುಲದ ಒಳಗೆ ಇದೆ ಎಂದು ಹೇಳಿದರೆ ಆಶ್ಚರ್ಯಪಡುತ್ತಾರೆ’ ಎನ್ನುತ್ತಾರೆ ಅಗಾ. ಬೇರೆ ಎಲ್ಲಿಯೂ ಸ್ಥಳದ ಅವಕಾಶ ಇಲ್ಲದೇ ಇರುವುದರಿಂದ ಅಲ್ಲಿಯೇ ತರಗತಿ ನಡೆಸುಬೇಕಾಗಿದೆ ಎಂದಿದ್ದಾರೆ. ಇನಿಶಿಯೇಟರ್‌ ಹ್ಯೂಮನ್‌ ಡೆವಲಪ್‌ಮೆಂಟ್‌ ಫೌಂಡೇಷನ್‌ ಎಂಬ ಸಂಘಟನೆಯ ನಾಯಕ ಆರೀಫ್ ಹಬೀಬ್‌ ಅನುಂ ಆಗಾರನ್ನು ದೇಗುಲದಲ್ಲಿ ತರಗತಿ ನಡೆಸಲು ನೇಮಿಸಿದ್ದರು. ಅಲ್ಲಿ ಇರುವವರಿಗೆ ತಮ್ಮ ಹಕ್ಕುಗಳ ಅರಿವು ಇಲ್ಲ ಎನ್ನುತ್ತಾರೆ ಅಗಾ. 

ದೇಗುಲದ ಆವರಣದಲ್ಲಿ ಹಿಂದೂ ದೇವ ದೇವತೆಗಳ ಕೆತ್ತನೆಗಳೂ ಇವೆ. ನಾಲ್ಕು ವರ್ಷಗಳ ಅವಧಿಯಲ್ಲಿ ಬಸ್ತು ಗುರು ಪ್ರದೇಶದಲ್ಲಿರುವ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿ ಸ್ಥಳದಿಂದ ತೆರಳುವಂತೆ ಎಚ್ಚರಿಕೆ ನೀಡಿದ ಘಟನೆಗಳೂ ನಡೆದಿವೆ ಎನ್ನುತ್ತಾರೆ ಸಮುದಾಯದ ಮುಖಂಡ ಶಿವ ಧರಣಿ.  ಅಲ್ಲಿರುವ ನಿವಾಸಿಗಳು 1960ರ ದಶಕದಲ್ಲಿ ಸಿಂಧ್‌ನಿಂದ ಕರಾಚಿಗೆ ಬಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next