ಮದ್ದೂರು: ತಾಲೂಕಿನ ಸಿಎ ಕೆರೆ ಹೋಬಳಿಯ ಭುಜವಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಈರಮ್ಮ, ಮಾಸ್ತಮ್ಮ ದೇವಾಲಯ ಲೋಕಾರ್ಪಣೆ ಹಾಗೂ ಶಿಲಾ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ.
ನ.9ರ ಮಂಗಳವಾರ ರಾತ್ರಿಯಿಂದ ಎರಡು ದಿನಗಳ ಕಾಲ ನಡೆಯುವ ದೇವಾ ಲಯದ ಲೋಕಾರ್ಪಣೆ ಕಾರ್ಯಕ್ರಮದ ವೇಳೆ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಲಿದ್ದು, ಬೆಳಗ್ಗೆಯಿಂದಲೇ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಶಿಲಾ ಪ್ರತಿಷ್ಠಾನೆ ಕಾರ್ಯಕ್ರಮ ನೆರವೇರಿತು. ಕಳಶ ಸ್ಥಾಪನೆ, ಅಭಿಷೇಕ, ಕಲಾಕರ್ಷಣೆ, ದುರ್ಗಾ ಹೋಮ, ಪಂಚ ಬ್ರಹ್ಮ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಜತೆಗೆ ಪ್ರಸಾದ ವಿತರಣೆ ನೆರವೇರಿತು.
ಬುಧವಾರ ಬೆಳಗ್ಗೆ 5 ಗಂಟೆಗೆ ಹೂ ಹೊಂಬಾಳೆ ಸಮೇತ ಈರಮ್ಮ, ಮಾಸ್ತಮ್ಮ ಕರಗ ತರುವ ಜತೆಗೆ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡು ದೇವಾಲಯಕ್ಕೆ ಕರೆತರಲಾಗುವುದು. ನೂತನ ದೇವಾಲಯವನ್ನು ತುಮ ಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿ ಹಾಗೂ ಕನಕಪುರದ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಇದನ್ನೂ ಓದಿ:- ಎಂಎಲ್‌ಸಿ ಸಮರ ತ್ರಿಕೋನ ಅಖಾಡಕ್ಕೆ ವೇದಿಕೆ
ಪ್ರತಿಷ್ಠಾಪನೆ ಹಾಗೂ ಪೂಜಾ ಕಾರ್ಯ ಕ್ರಮವನ್ನು ಭುಜವಳ್ಳಿ ಗುರುಮಠದ ಷಣ್ಮುಖಾರಾಧ್ಯ, ಅಂಚೆ ದೊಡ್ಡಿ ಗುರು ಮಠದ ನಾಗಾಭೂಷಣಾರಾಧ್ಯ, ಬಸವ ರಾಧ್ಯ, ಅರ್ಚಕ ಈರಪ್ಪ ದೇವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋ ಜಿಸಲಾಗಿದ್ದು, ಬದನಾಳು ಶಿವಕುಮಾರ ಶಾಸ್ತ್ರಿ ಮತ್ತು ತಂಡ ವಿಶೇಷ ಹರಿಕಥಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.