Advertisement

ಟೆಂಪಲ್‌ ಜ್ಯುವೆಲ್ಲರಿ

06:00 AM Jul 13, 2018 | |

ದೇವಾಲಯಗಳನ್ನು ದೇವಾನುದೇವತೆಗಳನ್ನು ಅಲಂಕರಿಸಲು ಬಳಸುವ ವಿಶಿಷ್ಟ ಆಭರಣಗಳ ಪರಿಕಲ್ಪನೆಯೇ ಟೆಂಪಲ್‌ ಜ್ಯುವೆಲ್ಲರಿ!

Advertisement

ಚೋಳರ ರಾಜ್ಯಭಾರದ ಸಮಯದಲ್ಲಿ ಸರಿಸುಮಾರು ಒಂಬತ್ತನೇ ಶತಮಾನದಿಂದ ಟೆಂಪಲ್‌ ಜ್ಯುವೆಲ್ಲರಿ ಪ್ರಸಿದ್ಧಿಗೆ ಬಂತು. ಕೃಷ್ಣ ದೇವರಾಯನ ಕಾಲದಲ್ಲಿಯೂ ಪ್ರಸಿದ್ಧ ಚಿನ್ನದ ಕುಸುರಿಕಾರರು ದೇವ-ದೇವಿಯರಿಗೆ ಮಾತ್ರವಲ್ಲದೇ ರಾಜ-ರಾಣಿಯರಿಗೆ, ಆಡಳಿತದ ಮತ್ತು ಅರಮನೆಯ ಪ್ರಮುಖ ಮಂದಿಗೆ ಟೆಂಪಲ್‌ ಜ್ಯುವೆಲ್ಲರಿಯನ್ನು ತಯಾರಿಸಿ ನೀಡಿದ್ದಾರೆ. ಮೂರು ಸಾವಿರ ವರ್ಷದ ಸಾಂಪ್ರದಾಯಿಕ ಮಹತ್ವವನ್ನು ಹೊಂದಿರುವ ಟೆಂಪಲ್‌ ಜ್ಯುವೆಲ್ಲರಿ ತಮಿಳುನಾಡಿನ ಮತ್ತು ದಕ್ಷಿಣ ಭಾರತದ ದೇವಾಲಯಗಳಲ್ಲಿ ಮನೆಮನೆಗಳಲ್ಲಿ ಇಂದೂ ಪ್ರಸಿದ್ಧ.

ಕೂಚಿಪುಡಿ, ಭರತನಾಟ್ಯದಲ್ಲಿ ಬಳಸುವ ಆಭರಣಗಳು ಟೆಂಪಲ್‌ ಜ್ಯುವೆಲ್ಲರಿಯ ವಿನ್ಯಾಸ ಮತ್ತು ಕಲಾತ್ಮಕ ಕುಸುರಿಯನ್ನು ಹೊಂದಿರುತ್ತವೆ. ಈಗಿನ “ಇಮಿಟೇಷನ್‌ ಜ್ಯುವೆಲ್ಲರಿ’ಯ ಆಧುನಿಕ ಯುಗದಲ್ಲಿ ಚಿನ್ನದ ಅಥವಾ ಬೆಳ್ಳಿಯ ಲೇಪನದಿಂದ ತಯಾರಿಸಿದ, ಆ್ಯಂಟಿಕ್‌ ವೈಶಿಷ್ಟé ಹೊಂದಿರುವ ಟೆಂಪಲ್‌ ಜ್ಯುವೆಲ್ಲರಿ ಕೈಗೆಟಕುವ ದರದಲ್ಲಿ ತರಹೇವಾರಿ ವಿನ್ಯಾಸದಲ್ಲಿ ಲಭ್ಯವಿದೆ.

ಟೆಂಪಲ್‌ ಜ್ಯುವೆಲ್ಲರಿಯಲ್ಲಿ ಎರಡು ವಿಧ. ಒಂದು ಸಾಂಪ್ರದಾಯಿಕ ಟೆಂಪಲ್‌ ಜ್ಯುವೆಲ್ಲರಿ. ಇದನ್ನು ಮಹಿಳೆಯರು ಮದುವೆ-ಮುಂಜಿ-ಹಬ್ಬ ಸಮಾರಂಭ, ದೇವತಾ ಕಾರ್ಯಕ್ರಮದ ಸಮಯದಲ್ಲಿ ಬಳಸುತ್ತಾರೆ. ಇನ್ನೊಂದು ವಿಧ ವಿಶೇಷ ಸಮಾರಂಭದಲ್ಲಿ ಉದಾಹರಣೆಗೆ ಮದುವೆಯಲ್ಲಿ ಮದುಮಗಳು, ಭರತನಾಟ್ಯದಲ್ಲಿ ನೃತ್ಯಗಾತಿ ಧರಿಸುವ ಕಡಗ, ಬಾಜೂಬಂದಿ, ಸೊಂಟದ ಪಟ್ಟಿ, ಮೂಗುತಿ, ಮುಡಿಯಲ್ಲಿ (ಕೂದಲಿಗೆ) ಧರಿಸುವ ಆಭರಣಗಳು, ಜಡೆಯ ಅಲಂಕಾರದ ಆಭರಣಗಳು ಇತ್ಯಾದಿ.

ಮದುಮಗಳು ಧರಿಸುವ ಟೆಂಪಲ್‌ ಜ್ಯುವೆಲ್ಲರಿ ಇಂತಿದೆ.
ಕುಸುಮಾಲಾ (ಕಸುಲಪೆರು) ಎಂದು ಕರೆಯಲ್ಪಡುವ ಹಾರದಲ್ಲಿ ಉದ್ದ ನೆಕ್ಲೇಸ್‌ನಂತಿದ್ದು, ಎರಡು ಲೇಯರ್‌ಗಳಿದ್ದು ಲಕ್ಷ್ಮಿಯ ಚಿತ್ತಾರವುಳ್ಳ ಕುಸುರಿ ಕಲೆಯ ಪೆಂಡೆಂಟ್‌ನ ಅಂದ ಚಿತ್ತಾಕರ್ಷಕವಾಗಿದೆ. ಇದು ವಜ್ರ, ಚಿನ್ನದ ಹರಳುಗಳಿಂದ ವೈಭವೋಪೇತವಾಗಿರುತ್ತದೆ.

Advertisement

ಮಂಗಮಾಲೈ (ಮಾವಿನ ಚಿತ್ತಾರದ ಹಾರ): ಮಾವಿನ ಹಣ್ಣಿನ ಕುಸುರಿ ಕಲೆಯುಳ್ಳ ಉದ್ದ ಹಾರವೇ ಮಂಗಮಾಲೈ. ಇದು ಅಷ್ಟೊಂದು ವೈಭವದ ಆಭರಣವಲ್ಲ. ಮದುವೆಯ ಬಳಿಕ ಇತರ ಸಮಾರಂಭಗಳಲ್ಲೂ ಬಳಸಲು ಮುಖ್ಯವಾಗಿ ಕಾಂಜೀವರಂ ಸೀರೆಯ ಮೇಲೆ ಅಂದವಾಗಿ ರಾರಾಜಿಸುತ್ತದೆ.

ವಡ್ಡನಂ (ಕಮರ್‌ಬಂದ್‌): ಸೊಂಟಪಟ್ಟಿಯ ಮಧ್ಯದಲ್ಲಿ ಕಮಲದ ಹೂವಿನಲ್ಲಿ ಕುಳಿತ ಲಕ್ಷ್ಮೀ ದೇವಿಯ ಚಿತ್ತಾರವಿದ್ದು ಸುತ್ತಲೂ ವಿವಿಧ ಕುಸುರಿ ಕಲೆಯ ಸೊಬಗಿರುತ್ತದೆ.

ವಂಕಿ ಅಥವಾ ಬಾಜೂಬಂಧ: ಮದುವೆಯ ದಿನ ಸೊಂಟಪಟ್ಟಿಯಂತೆ ರಾರಾಜಿಸುವ ಇನ್ನೊಂದು ಆಭರಣವೆಂದರೆ ವಂಕಿ ಹಾಗೂ ವಿವಿಧ ಹರಳುಗಳಿರುವ ವಂಕಿ. ಇದು ಬಲು ಸುಂದರ.

ಬಳೆ: ಕಾಂಜೀವರಂ ಅಥವಾ ಸಿಲ್ಕ್ ಸೀರೆಯ ಜೊತೆಗೆ ಹೊಂದುವ ಬಣ್ಣದ ಬಳೆಗಳು ಕೈತುಂಬಾ ಝಗಮಗಿಸುತ್ತಿದ್ದರೆ, ಮದುಮಗಳ ಮದರಂಗಿಯುಕ್ತ ಕೈಯ ಸೊಬಗೇ ವಿಶಿಷ್ಟ. ಟೆಂಪಲ್‌ ಬ್ಯಾಂಗಲ್‌ಗ‌ಳು ಭಾರವಾಗಿರುವಂತಹವು!

ಝುಮಕಿ: ವಿವಿಧ ಆಕಾರಗಳ ಝುಮಕಿ ಬಲು ಚಂದ. ಟೆಂಪಲ್‌ ಜ್ಯುವೆಲ್ಲರಿಯ ಝಮಕಿಗಳಲ್ಲಿ ದೇವರ ಚಿತ್ತಾರವಿರುತ್ತದೆ.

ಮಾಂಗಟೀಕಾ (ಬೈತಲೆಯ ಆಭರಣಗಳು) (ನೇತಿ ಚುಟ್ಟಿ):
ಈ ಆಭರಣವಿಲ್ಲದೆ ಮದುಮಗಳ ಸಿಂಗಾರ ಅಪೂರ್ಣ. ದೊಡ್ಡ ದೇವಿಯ ಪೆಂಡೆಂಟ್‌ಗಳ ಜೊತೆಗೆ, ಸಣ್ಣ ಸಣ್ಣ ಪೆಂಡೆಂಟ್‌ಗಳೂ ಹಾರದಲ್ಲಿ ಪೋಣಿಸಿಕೊಂಡು ಬೈತಲೆಯನ್ನು ಅಲಂಕರಿಸುತ್ತವೆ.

ಜಡೆಬಿಲ್ಲಾ: ಜಡೆಯನ್ನು ಅಲಂಕರಿಸಲು ಹೂವಿನ ಜೊತೆ ಬಳಸುವ ಆಭರಣವೇ ಜಡೆಬಿಲ್ಲಾ.

ಟೆಂಪಲ್‌ ಜ್ಯುವೆಲ್ಲರಿ ಈಗಿನ ಹೊಸ ಟ್ರೆಂಟ್‌ ಆಗಿದೆ.

ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next