Advertisement

ದೇವಸ್ಥಾನ ತೆರವು: ಜನತೆ ಆಕ್ರೋಶ

04:19 PM Jan 31, 2020 | Suhan S |

ಚನ್ನಪಟ್ಟಣ: ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿರುವ ಶನಿ ದೇವರ ದೇವ ಸ್ಥಾನವನ್ನು ತೆರವು ಮಾಡಲು ಮುಂದಾದ ತಾಲೂಕು ಆಡಳಿತದ ಕ್ರಮವನ್ನು ಸಾರ್ವಜನಿಕರು ವಿರೋಧಿಸಿದ ಘಟನೆ ನಡೆದಿದೆ.

Advertisement

ಸಾರ್ವಜನಿಕ ಸ್ಥಳಗಳಲ್ಲಿನ ಮಂದಿರ, ಮಠ, ಮಸೀದಿಗಳನ್ನು ತೆರವು ಮಾಡುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿ ರುವ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಅವರು ಪಟ್ಟಣದ ಅಂಚೆ ಕಚೇರಿ ರಸ್ತೆಯಲ್ಲಿನ ಶನಿ ದೇವರ ದೇವಸ್ಥಾನವನ್ನು ತೆರವು ಮಾಡುವಂತೆ ಸೋಮವಾರ ಸಂಜೆಯೇ ಸೂಚನೆ ನೀಡಿದ್ದರು. ಈ ನಿಟ್ಟಿನಲ್ಲಿ ನಗರಸಭೆ, ಪೊಲೀಸ್‌ ನಗರಸಭೆ ಸಿಬ್ಬಂದಿ ಜೆಸಿಬಿ ಯಂತ್ರದೊಂದಿಗೆ ದೇವಸ್ಥಾನ ತೆರವು ಮಾಡಲು ಆಗುಮಿಸಿದ್ದರು. ಈ ವೇಳೆ ಬೀದಿ ಬದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಅಗಲೀಕರಣಕ್ಕೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿರು ಸಾತನೂರು ರಸ್ತೆಯ ಮುಸ್ಲಿಂ ಸಮುದಾಯದ ಸ್ಮಶಾನವನ್ನು ತೆರವು ಮಾಡಿ ಎಂದು ಒಂದು ವರ್ಷದ ಹಿಂದೆಯೇಆದೇಶವಾಗಿದೆ, ಅದನ್ನು ತೆರವು ಮಾಡಿಲ್ಲ. ಆದರೆ ಯಾರಿಗೂ ತೊಂದರೆ ಯಾಗದ ದೇವಸ್ಥಾನ ತೆರವು ಮಾಡಲು ಬಂದಿದ್ದೀರಿ ಎಂದು ತಹಶೀಲ್ದಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮೊದಲು ಪಟ್ಟಣದಲ್ಲಿ ಸಾರ್ವಜನಿಕ ಸ್ಥಳದ ಎಲ್ಲಾ ಸ್ಮಶಾನ, ದೇವಸ್ಥಾನಗಳನ್ನು ತೆರವು ಮಾಡಿ ಬಳಿಕ ಇದನ್ನು ತೆರವು ಮಾಡಿ ಎಂದು ಪಟ್ಟುಹಿಡಿದರು. ಜೊತೆಗೆ ಬೆಥನಿ ಚರ್ಚ್‌ನ ಕಾಂಪೌಂಡ್‌ ಜಾಗ ರಸ್ತೆಗೆ ಸೇರಬೇಕು. ಹಾಕಿದರು ಎಂದು ನಗರಸಭೆ ಅಧಿಕಾರಿಗಳು ಚರಂಡಿ ಕಾಮಗಾರಿಯನ್ನೇ ನಿಲ್ಲಿಸಿದ್ದಾರೆ ಎಂದು ಹರಿಹಾಯ್ದರು. ಆರೋಪಗಳಿಗೆ ಜಗ್ಗದ ತಹಸೀಲ್ದಾರ್‌ ನ್ಯಾಯಾಲಯದ ಆದೇಶ ಪಾಲಿಸುತ್ತಿದ್ದೇವೆ. ಎರಡು ದಿನಗಳಲ್ಲಿ ತೆರವುಗೊಳಿಸಿ ಎಂದು ಸೂಚಿಸಿ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next