ಶಿವಮೊಗ್ಗ : ಧಾರ್ಮಿಕ ಕೇಂದ್ರಗಳ ತೆರವು ವಿಷಯದಲ್ಲಿ ಜಿಲ್ಲಾಡಳಿತ ಎಚ್ಚರಿಕೆ ಹೆಜ್ಜೆ ಇಟ್ಟಿದೆ. ಧಾರ್ಮಿಕ ಕೇಂದ್ರಗಳ ತೆರವಿಗಿಂತಲೂ ಸ್ಥಳಾಂತರ ಹಾಗೂ ಸಕ್ರಮೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ತೀರಾ ಅಗತ್ಯಬಿದ್ದಲ್ಲಿ ಮಾತ್ರ ಕೆಲವೇ ಕೆಲ ಧಾರ್ಮಿಕ ಕೇಂದ್ರಗಳ ತೆರವಿಗೆ ತೀರ್ಮಾನಿಸಿದೆ.
ಈಗಾಗಲೇ ಶಿವಮೊಗ್ಗ ಜಿಲ್ಲೆಯಾದ್ಯಂತ ಸದ್ದಿಲ್ಲದೆ ಧಾರ್ಮಿಕ ಕೇಂದ್ರಗಳ ಸಕ್ರಮೀಕರಣ ನಡೆದಿದೆ. ಇನ್ನು ಕೆಲ ಧಾರ್ಮಿಕ ಕೇಂದ್ರಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಧಾರ್ಮಿಕ ಕೇಂದ್ರಗಳ ವ್ಯವಸ್ಥಾಪನಾ ಸಮಿತಿಯ ಮನವೊಲಿಸಿ ದೇವಾಲಯಗಳ ಸ್ಥಳಾಂತರ ನಡೆಸಲಾಗುತ್ತಿದೆ.
ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮೀಕರಣ ಮಾಡಲಾಗುತ್ತಿದ್ದು, ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಶಿವಮೊಗ್ಗ ಜಿಲ್ಲಾಡಳಿತ ಎಚ್ಚರಿಕೆ ಹೆಜ್ಜೆಯನ್ನಿಟ್ಟಿದೆ.
ಧಾರ್ಮಿಕ ಕೇಂದ್ರಗಳ ತೆರವು ವಿಚಾರದಲ್ಲಿ ರಾಜ್ಯದಲ್ಲಿ ಮಾದರಿ ಕೆಲಸ ಮಾಡುವತ್ತ ಶಿವಮೊಗ್ಗ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲೆಯಲ್ಲಿರುವ ಸಣ್ಣಪುಟ್ಟ ಗುಡಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಬಳಿಕ ಗುಡಿಗಳ ಸಕ್ರಮೀಕರಣ, ಸ್ಥಳಾಂತರ ಹಾಗೂ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತದೆ.
ಶಿವಮೊಗ್ಗ ಜಿಲ್ಲೆಯ ತಾಲೂಕುವಾರು ಧಾರ್ಮಿಕ ಕೇಂದ್ರ ಗಳ ಬಗ್ಗೆ ಮಾಹಿತಿ
ಹೊಸನಗರ
ಡೆಮಾಲಿಸ್ 01 ಸ್ಥಳಾಂತರ 04 ಸಕ್ರಮೀಕರಣ 69
ಶಿವಮೊಗ್ಗ
ಡೆಮಾಲಿಸ್ 02 ಸ್ಥಳಾಂತರ 3 ಸಕ್ರಮೀಕರಣ 34
ಭದ್ರಾವತಿ
ಡೆಮಾಲಿಸ್ 4
ಸ್ಥಳಾಂತರ 33 ಸಕ್ರಮೀಕರಣ 22
ಶಿಕಾರಿಪುರ
ಡೆಮಾಲಿಸ್ 03 ಸ್ಥಳಾಂತರ 01 ಸಕ್ರಮೀಕರಣ 83
ತೀರ್ಥಹಳ್ಳಿ
ಡೆಮಾಲಿಸ್ 00
ಸ್ಥಳಾಂತರ 02 ಸಕ್ರಮೀಕರಣ 51
ಸಾಗರ
ಡೆಮಾಲಿಸ್ 08 ಸ್ಥಳಾಂತರ 02 ಸಕ್ರಮೀಕರಣ 101
ಸೊರಬ
ಡೆಮಾಲಿಸ್ 00
ಸ್ಥಳಾಂತರ 06 ಸಕ್ರಮೀಕರಣ 25