Advertisement

ಪ್ರಕೃತಿ ಅಸಮತೋಲನದಿಂದ ತಾಪಮಾನ ಹೆಚ್ಚಳ

06:17 PM Apr 23, 2022 | Team Udayavani |

ಅರಸೀಕೆರೆ: ಪ್ರಕೃತಿ ಅಸಮತೋಲನ ಪರಿಣಾಮ ಭೂಮಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಭೂಮಿ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ ಎಂದು ನಗರದ ಜೆಎಂಎಫ್ಸಿ ಪ್ರಧಾನ ಸಿವಿಲ್‌ ನ್ಯಾ.ಬಿ.ಎನ್‌.ಅಮರ್‌ನಾಥ್‌ ತಿಳಿಸಿದರು.

Advertisement

ನಗರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ವಿಶ್ವ ಭೂ ಸಂರಕ್ಷಣೆ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ವಲಯ ಅರಣ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿಯು ಯಾವುದೇ ಪ್ರತಿಫ‌ಲಾಪೇಕ್ಷೆ ಇಲ್ಲದೆ ಮನುಷ್ಯನ ಬದುಕಿಗೆ ಅವಶ್ಯಕವಾದ ಗಾಳಿ, ನೀರು, ಬೆಳಕು, ಆಹಾರ ಸೇರಿದಂತೆ ಪ್ರತಿಯೊಂದನ್ನು ನೀಡುತ್ತಿದೆ. ಆದರೆ ನಾವುಗಳು ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪತ್ತುಗಳನ್ನು ನಾಶ ಮಾಡುವ ಮೂಲಕ ಪ್ರಕೃತಿ ಅಸಮತೋಲನಕ್ಕೆ ಕಾರಣಕರ್ತರಾಗಿದ್ದೇವೆ. ಇದರ ಪರಿಣಾಮ ಕಾಲಕಾಲಕ್ಕೆ ಬರಬೇಕಾದ ಮಳೆ ಬಾರದೆ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ ಜನ, ಜಾನುವಾರುಗಳು, ಪ್ರಾಣಿ, ಪಕ್ಷಿಗಳು ಪರದಾಡುವ ದುಸ್ಥಿತಿ ಕಾಣುತ್ತಿದ್ದೇವೆ.

ಜೀವ ಸಂಕುಲಕ್ಕೆ ಅಪಾಯ: ಪರಿಸರದಲ್ಲಿ ಉತ್ತಮ ಮಳೆಯಿಲ್ಲದೆ ಮರಗಿಡಗಳು ನಾಶವಾದ ಪರಿಣಾಮ ಭೂಮಿಯ ತಾಪಮಾನ ಹೆಚ್ಚಾಗಿ ಅನೇಕ ಪ್ರಾಣಿ ಪಕ್ಷಿಗಳ ಜೀವ ಸಂಕುಲ ಬದುಕಲು ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಮನುಷ್ಯನು ಕೂಡ ಭೂಮಿಯ ಮೇಲೆ ಬದುಳಿ ಉಳಿಯದ ದುಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ನಾವುಗಳು ಜಾಗೃತರಾಗಿ ಮರಗಿಡ ಬೆಳೆಸುವ ಮೂಲಕ ಪ್ರಕೃತಿ ಸಂರಕ್ಷಣೆಗೆ
ಪ್ರಾಮಾಣಿಕವಾಗಿ ಮುಂದಾಗಬೇಕಾಗಿದೆ.

ಅಂತರ್ಜಲ ವೃದ್ಧಿಗಾಗಿ ಕೆರೆ-ಕಟ್ಟೆಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯ ಕೈಗೊಳ್ಳಬೇಕಾಗಿರುವುದು ಅನಿವಾರ್ಯವಾಗಿ ಎಂದು ತಿಳಿಸಿದರು. ಕಾನೂನಿನ ಭಯವಿಲ್ಲ: ಹಿರಿಯ ವಕೀಲರಾದ ವಿಜಯಕುಮಾರ್‌ ಮಾತನಾಡಿ, ಸಮಾಜ ಜೀವಿಯಾದ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಹಾಗೂ ನೈತಿಕ ಪ್ರಜ್ಞೆ ಮಾಯಾವಾಗುತ್ತಿದೆ.

Advertisement

ಸ್ವಾರ್ಥದ ಚಿಂತನೆ ಬೆಳೆಯುತ್ತಿದ್ದು, ಯಾವುದೇ ಕಾನೂನುಗಳ ಭಯ ಇಲ್ಲದೆ ಕಾರಣ ಇಂತಹ ಘಟನೆಗಳು ನಡೆಯುತ್ತಿದೆ. ಆದ್ದರಿಂದ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕ ಪ್ರಜ್ಞೆ ಬೆಳೆಸಿದರೆ ಮಾತ್ರ ಆತನಲ್ಲಿನ ಸುಪ್ತವಾಗಿರುವ ಮನುಷ್ಯತ್ವ ಜಾಗೃತಿ ಗೊಳಿಸುವ ಕಾರ್ಯ ನಾವುಗಳು ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಶ್ರೀಲಕ್ಷ್ಮೀ, ಹಿರಿಯ ವಕೀಲ ನಟರಾಜ್‌, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಕೃತಿ ವಿನಾಶದಿಂದ ಮುಂದಿನ ಪೀಳಿಗೆಗೆ ವಿಷಮ ಕಾಲ
ಅರಣ್ಯ ವಲಯ ಅಧಿಕಾರಿಗಳಾದ ಎಚ್‌.ಕೆ. ಅಮಿತ್‌ ಮಾತನಾಡಿ, ಮನುಷ್ಯ ವೈಜ್ಞಾನಿಕವಾಗಿ ಬೆಳೆದಂತೆ ಆತನಲ್ಲಿ ಸ್ವಾರ್ಥ ಭಾವನೆಗಳು ಹೆಚ್ಚಾಗಿ ಸಾಮಾಜಿಕ ಜವಾಬ್ದಾರಿಗಳು ಮರೆಯುತ್ತಿರುವ ಕಾರಣ ನಮ್ಮ ಬದುಕಿಗೆ ಪೂರಕವಾದ ಪರಿಸರ ಬೆಳೆಸಬೇಕು ಎಂಬ ಸಾಮಾನ್ಯ ಸಂಗತಿ ತಿಳಿಯದೇ ಶಿಲಾಯುಗದ ಅನಾಗರಿಕರಂತೆ ಮನುಷ್ಯ ವರ್ತಿಸುತ್ತಿದ್ದಾನೆ. ಪರಿಣಾಮ ನಮ್ಮ ಪೀಳಿಗೆ ನಾಳೆಯ ದಿನ ಕುಡಿಯುವ ನೀರಿಗಾಗಿ, ಉಸಿರಾಡುವ ಗಾಳಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ನಾವುಗಳೇ ಸ್ವತಃ ಅನುಭವಿಸುವ ದುಸ್ಥಿತಿ ಕಾಣುವಂತಾಗುತ್ತಿದೆ.ಆದ್ದರಿಂದ ಪರಿಸರ ಸಂರಕ್ಷಣೆ, ಅರಣ್ಯ ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿಗೆ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಮುಂದಾಗ ಬೇಕಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next