ಯಾಕುಸ್ಕ್/ಹೊಸದಿಲ್ಲಿ: ರಷ್ಯಾದ ರಾಜಧಾನಿ ಮಾಸ್ಕೋದಿಂದ 5 ಸಾವಿರ ಕಿ.ಮೀ. ದೂರದಲ್ಲಿರುವ ಈ ಊರಲ್ಲಿ ಚಳಿ ಎಷ್ಟಿರ ಬಹುದೆಂದು ಊಹಿಸಿದರೇ ನಿಮ್ಮ ಮೈಯ್ಯ ಲ್ಲೇ “ನಡುಕ’ ಆರಂಭವಾಗುತ್ತದೆ!
ಹೌದು, ಇಲ್ಲಿನ ಜನ ಮೈನಸ್ 50 ಡಿ.ಸೆ. ತಾಪಮಾನದಲ್ಲಿ ದಿನ ದೂಡುತ್ತಿದ್ದಾರೆ. ಇಲ್ಲಿ ಬದುಕು ಸಾಗಿಸುವುದೇ ದೊಡ್ಡ ಸವಾಲು. ಒಂದೋ ಕೊರೆಯುವ ಚಳಿಯನ್ನು ತಾಳಿ ಕೊಳ್ಳುವಂಥ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಅಥವಾ “ಕ್ಯಾಬೇಜ್’ ರೀತಿ ಹಲವು ಪದರಗಳ ಉಡುಪು ಧರಿಸಿಕೊಳ್ಳಬೇಕು.
ಇಲ್ಲಿನ ಜನ ಎರಡೆರಡು ಗ್ಲೌಸ್‌ಗಳು, ಹಲವು ಹ್ಯಾಟ್‌ಗಳು, ಹೂಡಿಗಳು ಮತ್ತು ಶಾಲುಗಳನ್ನು ಧರಿಸಿಕೊಂಡು “ನಡೆದಾಡುವ ಕ್ಯಾಬೇಜ್’ಗಳಂತೆಯೇ ಕಾಣುತ್ತಾರೆ. ಇಲ್ಲಿ ಚಳಿ ಎಷ್ಟು ತೀವ್ರವಾಗಿದೆ ಎಂದರೆ ಮೀನು ಮಾರಾಟಗಾರರು ಮೀನುಗಳನ್ನು ಫ್ರಿಜ್‌ನಲ್ಲಿ ಅಥವಾ ಐಸ್‌ನಲ್ಲಿ ಹಾಕಿಡುತ್ತಿಲ್ಲ. ಮಾರಾಟ ದಲ್ಲಿ ತರಕಾರಿ ಮಾರಿದಂತೆ ಮೀನುಗಳನ್ನೂ ಬಯಲಲ್ಲಿಟ್ಟು ಮಾರುತ್ತಿದ್ದಾರೆ.
ದಿಲ್ಲಿಯಲ್ಲಿ 1.4 ಡಿ.ಸೆ.
ಉತ್ತರ ಭಾರತದಲ್ಲಿ ಶೀತ ಮಾರುತದ ಅಬ್ಬರ ಮುಂದುವರಿದಿದ್ದು, ಜ.19ರವರೆಗೆ ಇದೇ ಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ದಿಲ್ಲಿಯಲ್ಲಿ ಕನಿಷ್ಠ ತಾಪಮಾನ 1.4 ಡಿ.ಸೆ.ಗೆ ತಲುಪಿದೆ. ಜ.18ರವರೆಗೂ ದಿಲ್ಲಿಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
Related Articles