Advertisement
ಆದರೆ, “ಭಜರಂಗಿ’ಯ ಮಾಂತ್ರಿಕ ಮತ್ತು “ವಜ್ರಕಾಯ’ ಚಿತ್ರದ ಹಠಮಾರಿ ತಂದೆ ಪಾತ್ರ ನೆನಪಿಸಿಕೊಂಡವರಿಗೆ ಈ ಮಧುಗುರುಸ್ವಾಮಿ ಅವರು ಥಟ್ಟನೆ ನೆನಪಾಗುತ್ತಾರೆ. ಅದೇ ಮಧುಗುರುಸ್ವಾಮಿ ಇದೀಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟು, ಸದ್ದಿಲ್ಲದೆಯೇ ಅಲ್ಲೊಂದು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಬಂದಿದ್ದಾರೆ.
Related Articles
Advertisement
ಸಿನಿಮಾ ನೋಡುವ ಮೂಲಕ, ಮುಂದೊಂದು ದಿನ ನಾನೂ ನಟಿಸಬೇಕು ಎಂಬ ಆಸೆ ಇಟ್ಟುಕೊಮಡಿದ್ದರು. ಕಾಲೇಜು ಮುಗಿಸಿದ ಬಳಿಕ 2007 ರಲ್ಲಿ ಬೆಂಗಳೂರಿಗೆ ಬಂದ ಮಧುಗುರುಸ್ವಾಮಿ, ಹಿರಿಯ ರಂಗಭೂಮಿ ಕಲಾವಿದರಾದ ಎ.ಎಸ್.ಮೂರ್ತಿ ಅವರ ಅಭಿನಯ ತರಂಗದಲ್ಲಿ ನಟನೆ ತರಬೇತಿ ಪಡೆದು, “ಡೆಡ್ಲಿ ಸೋಮ’ ಚಿತ್ರಕ್ಕೆ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದರು.
ನಂತರ “ಡೆಡ್ಲಿ 2′ ಚಿತ್ರದ ಮೂಲಕ ನಟರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಮಧು ಗುರುಸ್ವಾಮಿ, ಅಂದಿನಿಂದ ಇಂದಿನವರೆಗೂ ಹಿಂದಿರುಗಿ ನೋಡಿಲ್ಲ. “ಚಿಂಗಾರಿ’, “ಜಾನು’,”ಭಜರಂಗಿ’, “ವಜ್ರಕಾಯ’, “ಮಾರುತಿ 800′, “ಮಫ್ತಿ’ ಹೀಗೆ ಒಂದಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಿದರು.
ಕೆಲ ಚಿತ್ರಗಳ ಪಾತ್ರಕ್ಕಾಗಿ ಅವರು ಸುಮಾರು 12 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೂ ಉಂಟು, 20 ಕೆಜಿ ಹೆಚ್ಚು ಮಾಡಿಕೊಂಡಿದ್ದೂ ಇದೆ. “ಭಜರಂಗಿ’ ಚಿತ್ರದ ಬಳಿಕ ಇವರಿಗೆ ಹುಡುಕಿ ಬಂದ ಅವಕಾಶಗಳಿಗೆ ಲೆಕ್ಕವೇ ಇಲ್ಲ. ಆಗ ಸುಮಾರು 60 ಕಥೆಗಳನ್ನು ಕೇಳಿ ಬಿಟ್ಟಿದ್ದುಂಟು.
ಕಾರಣ, ಇಷ್ಟವಾಗದ ಪಾತ್ರ. ಅದರಲ್ಲೂ ಪೂರ್ಣ ಕಥೆ ಹೇಳಿ, ಆ ಪಾತ್ರ ಭಯ ಹುಟ್ಟಿಸುವಂತಿದ್ದರೆ ಅಥವಾ, ಚಾಲೆಂಜ್ ಎನಿಸಿದರೆ ಮಾತ್ರ ಹೊಸದನ್ನು ಕಲಿಯಲು ಸಾಧ್ಯ ಅಂದುಕೊಂಡು ಇಷ್ಟದ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದೇನೆ ಇರಲಿ, ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ಘರ್ಜಿಸುವುದರ ಜೊತೆಗೆ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟು, ಅಲ್ಲೂ ಒಂದಷ್ಟು ಮೆಚ್ಚುಗೆ ಪಡೆದಿರುವುದು ಮಧುಗುರುಸ್ವಾಮಿ ಅವರ ವಿಶೇಷ.