ಬೀದರ್: 12 ವರ್ಷದ ದ್ವೇಷದಿಂದ ಮತ್ತೆ ಜೈಲಿಗೆ ಕಳುಹಿಸಿದ್ದಾರೆ ಎಂದು ಹೇಳಿಕೆ ನೀಡಿದ್ದ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ತಿರುಗೇಟು ನೀಡಿದ್ದು, ಕಳ್ಳರಿಗೆ ರಕ್ಷಣೆ ಕೊಡಲಿಕ್ಕೆ ಆಗುತ್ತದಾ ಎಂದು ಪ್ರಶ್ನಿಸಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ನಾನು ಎಂದಿಗೂ ಸೇಡಿನ ರಾಜಕಾರಣ ಮಾಡಿಲ್ಲ ಎಂದರು.
ಈ ರಾಜ್ಯದಲ್ಲಿ ಎಷ್ಟೇ ಬಲಾಡ್ಯರು ಆಗಿದ್ದರೂ ತಪ್ಪಿತಸ್ಥರು ಅಂತಾದರೆ ಕಾನೂನಿನ ಅನ್ವಯ ಯಾರಿಗೂ ರಕ್ಷಣೆ ನೀಡುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಅಧಿಕಾರಿಗಳು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇವೆ ಎಂದರು.
ಕಳ್ಳತನ ಮಾಡಿದವನು ಬಂದು ನಾನು ಕದ್ದ ವಸ್ತುಗಳನ್ನು ವಾಪಾಸ್ ಕೊಡ್ತೀನಿ, ನನ್ನನ್ನು ಬಿಟ್ಟು ಬಿಡಿ ಅಂದರೆ ಬಿಡ್ಲಿಕ್ಕೆ ಆಗುತ್ತದಾ ? ಕಾನೂನಿನ ವ್ಯಾಪ್ತಿಯಲ್ಲಿ ಅದಕ್ಕೆ ಅವಕಾಶ ಇದೆಯಾ ಎಂದು ಪ್ರಶ್ನಿಸಿದರು.
ದರು.
ಆ್ಯಂಬಿಡೆಂಟ್ ಕಂಪನಿಯವಂಚನೆ ಆರೋಪ ಪ್ರಕರಣದಲ್ಲಿ ಜಾಮೀನಿನ ಮೇಲೆ ಬುಧವಾರ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಜನಾರ್ದನ ರೆಡ್ಡಿ, “ಮುಖ್ಯಮಂತ್ರಿ ಕುಮಾರಸ್ವಾಮಿಯವರು ತನ್ನ ವಿರುದ್ಧ ಹನ್ನೆರಡು ವರ್ಷಗಳ ದ್ವೇಷ ಸಾಧಿಸಿ ಜೈಲಿಗೆ ಕಳುಹಿಸುವ ಮೂಲಕ ರಾಕ್ಷಸ ಆನಂದ ಪಟ್ಟಿದ್ದಾರೆ” ಎಂದು ವಾಗ್ಧಾಳಿ ನಡೆಸಿದ್ದರು.