Advertisement

ಮಕ್ಕಳಿಗೆ ಸಾವಿತ್ರಿಬಾಯಿ ಸಾಧನೆ ತಿಳಿಸಿ

05:31 PM Mar 08, 2021 | Team Udayavani |

ಹಿರೇಕೆರೂರ: ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರಿಗೂನಾಯಕತ್ವದ ಗುಣವಿದೆ ಎಂಬುದನ್ನು ತೋರಿಸಿಕೊಟ್ಟು, ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನತೆ ಹಕ್ಕು ದೊರಕಿಸಿಕೊಡಲು ಹೋರಾಡಿದವರು ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಡಾ|ಲತಾ ಎಸ್‌. ಮುಳ್ಳೂರ ಹೇಳಿದರು.

Advertisement

ಪಟ್ಟಣದ ಗುರು ಭವನದಲ್ಲಿ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕ ಉದ್ಘಾಟನೆ, ಪದಾಧಿ ಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭಉದ್ಘಾಟಿಸಿ ಅವರು ಮಾತನಾಡಿದರು.  ಅಂದು ಅನಿಷ್ಠ ಪದ್ಧತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ ವಿರುದ್ಧ ಹೋರಾಟ ಮಾಡಿಮಹಿಳೆಯರಿಗಾಗಿ ಪ್ರಥಮವಾಗಿ ಶಾಲೆ, ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿಗೆ ಸಾವಿತ್ರಿಬಾಯಿಗೆ ಸಲ್ಲುತ್ತದೆ. ಶಿಕ್ಷಕಿಯರು ಸಾವಿತ್ರಿಬಾಯಿ ಪುಲೆ ಅವರ ಸಾಧನೆ ಮತ್ತು ಸಾಮಾಜಿಕ ಕಾಳಜಿಯನ್ನು ಮಕ್ಕಳಿಗೆ ತಿಳಿಸಬೇಕು. ಶಿಕ್ಷಕಿಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂಘಟಿತರಾಗಬೇಕು ಎಂದು ಹೇಳಿದರು.

ಪ್ರಥಮ ದರ್ಜೆ ಗುತ್ತಿಗೆದಾರ ಜಿ.ಪಿ.ಪ್ರಕಾಶಗೌಡ ಅವರು ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರಮತ್ತು ಗೌರವ ಧನ ನೀಡಿ ಮಾತನಾಡಿ, ಉತ್ತಮ ಶಿಕ್ಷಣ ದೊರೆತರೆ ತಮ್ಮ ಜೀವನರೂಪಿಸಿಕೊಳ್ಳುವ ಜತೆಗೆ ಕುಟುಂಬದಲ್ಲಿನೆಮ್ಮದಿ ಕಾಣಲು ಸಾಧ್ಯ ಎಂದರು.

ಸಂಘದ ತಾಲೂಕು ಘಟಕದ ಅಧ್ಯಕ್ಷೆ ಚಂದ್ರಲೇಖ ನಂದೆಣ್ಣನವರ ಅಧ್ಯಕ್ಷತೆವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ, ತಾಲೂಕು ಪಂಚಾಯಿತಿ ಅಧ್ಯಕ್ಷ ರಾಜು ಬಣಕಾರ,ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್‌.  ಎಂ.ಈಟೇರ, ಸುಮಿತ್ರಾ ಪಾಟೀಲ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುಧಾಚಿಂದಿ, ಸದಸ್ಯ ಮಹೇಂದ್ರ ಬಡಳ್ಳಿ, ಕೆಸಿಸಿ ಬ್ಯಾಂಕ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ,ಕ್ಷೇತ್ರ ಶಿಕ್ಷಣಾಧಿ ಕಾರಿ ಎಲ್‌.ಸಿದ್ದಲಿಂಗಪ್ಪ, ಪಿ.ಬಿ.ನಿಂಗನಗೌಡ್ರ,ಜಗದೀಶ ಬಳಿಗಾರ, ಮಾರುತೆಪ್ಪ ಕೆ.ಎಚ್‌., ಎಂ.ಬಿ.ಮಕಾನದಾರ, ಜ್ಯೋತಿ ಎಚ್‌., ಶಮಾ ಪಾಟೀಲ, ಸಂಧ್ಯಾರಾಣಿ ದೇಶಪಾಂಡೆ, ರಾಜಶ್ರೀ ಸಜ್ಜೆಶ್ವರ, ಎಸ್‌.ವಿ.ಅತ್ತಿಕಟ್ಟಿ, ಜ್ಯೋತಿ ಹೊಸಗೌಡ್ರ, ಕುಮಾರ ನಾಯ್ಕರ, ಕುಮಾರ ಮಡಿವಾಳರ ಸೇರಿದಂತೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ತಾಲೂಕು ಘಟಕ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next