Advertisement

“ನೀನು ಏನು ಮಾಡಿದ್ದೀಯಾ ಹೇಳು’

07:17 AM Jun 27, 2019 | Lakshmi GovindaRaj |

ಸಿರವಾರ: “ನಿನ್ನ ಅಪ್ಪ ಮಾಡಿದ ಅಭಿವೃದ್ಧಿಯನ್ನು ಬಿಟ್ಟು ನಿನ್ನ ಅಧಿಕಾರದಲ್ಲಿ ಏನು ಮಾಡಿದ್ದೀಯ ಹೇಳು’ ಎನ್ನುವ ಮೂಲಕ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ಧಾಳಿ ನಡೆಸಿದರು.

Advertisement

ಬಲ್ಲಟಗಿ ಗ್ರಾಮದಲ್ಲಿ 3ನೇ ದಿನದ ಪಾದಯಾತ್ರೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, “ರಾಜ್ಯದ ಜನ ಅಧಿಕಾರ ಕೊಟ್ಟಿದ್ದಾರೆ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಜನರಿಗೆ ಬೆದರಿಸಲು ನಮ್ಮ ಜಿಲ್ಲೆಗೆ ಬಂದಿದ್ದೀಯ ನೀನು. ಎಷ್ಟು ಮನವಿ ಸಲ್ಲಿಸಿದರೂ ಸ್ಪಂದಿಸುವುದಿಲ್ಲ.

ನಾವು ಪಾದಯಾತ್ರೆ ಮಾಡಬಾರದಾ? ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಬಿಜೆಪಿ ಶಾಸಕರು ಕೆಲಸಗಳನ್ನು ಮಾಡಿಸಿಕೊಳ್ಳಬೇಕಾ? ಈ ಸರ್ಕಾರದಲ್ಲಿ ನಮ್ಮ ಕೆಲಸಗಳನ್ನು ಕೇಳಬಾರದಾ’ ಎಂದು ಪ್ರಶ್ನಿಸಿದರು. “ರಾಜ್ಯದ ಮುಖ್ಯಮಂತ್ರಿಯಾಗಿ ಘನತೆಯನ್ನು ಇಟ್ಟುಕೊಂಡು ಮಾತನಾಡಬೇಕು. ಮುಖ್ಯಮಂತ್ರಿಯಾದವರಿಗೆ ಶಾಸಕರ ಸಮಸ್ಯೆ ಕೇಳುವ ತಾಳ್ಮೆ ಇರಬೇಕು.

ತಾಳ್ಮೆ ಇಲ್ಲದಿದ್ದರೆ ಏಕೆ ಮುಖ್ಯಮಂತ್ರಿ ಸ್ಥಾನದಲ್ಲಿರಬೇಕು. ನಮಗೆ ಡ್ರಾಮಾ ಮಾಡುವ ಅವಶ್ಯಕತೆಯಿಲ್ಲ, ನಾವು ಡ್ರಾಮಾ ಮಾಡುವುದಿದ್ದರೆ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲುತ್ತಿರಲಿಲ್ಲ. ಹಾಸನಕ್ಕೆ 25 ಕೋಟಿ ರೂ.ನೀಡಿ ಮಲ್ಕೊಳ್ಳೋಕೆ ಇಲ್ಲಿಗೆ ಬರುತ್ತಿದ್ದೀಯ’ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next