Advertisement
ಸಂಪೂರ್ಣ ಹದಗೆಟ್ಟಿದ್ದ ಈ ರಸ್ತೆ ಗ್ರಾಮಸ್ಥರ ಸತತ ಪ್ರಯತ್ನದ ಫಲವಾಗಿ ಕಳೆದ ಸಾಲಿನಲ್ಲಿ ಅಭಿವೃದ್ಧಿಗೊಂಡಿತ್ತು. ಆದರೆ ಈಗ ರಸ್ತೆ ಅಗೆಯುತ್ತಿರುವ ಪರಿಣಾಮ ಡಾಮರು ಕಿತ್ತಿಹೋಗುತ್ತಿದೆ. ಅಲ್ಲದೆ ಮಳೆಗಾಲವಾದ್ದರಿಂದ ಕೆಸರು ನೀರು ರಸ್ತೆಗೆ ಹರಿದು ವಾಹನ ಸಂಚಾರ ಕಷ್ಟಕರವಾಗಿದೆ. ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದು, ಅದರ ಲೆಗ್ ರಸ್ತೆಗಳಿಗೆ ತಾಗಿ ಅಲ್ಲಲ್ಲಿ ಹೊಂಡಗಳಾಗಿವೆ. ಈ ಹೊಂಡಗಳು ಮಳೆಗಾಲದಲ್ಲಿ ಮತ್ತಷ್ಟು ದೊಡ್ಡದಾಗಿ ರಸ್ತೆಗೆ ಹಾನಿ ಯಾಗುತ್ತದೆ ಎಂಬುದು ಸ್ಥಳೀಯರ ದೂರು.
ಕಾಮಗಾರಿ ಅನುಮತಿ ಪಡೆದೆ ಮಾಡುತ್ತಿದ್ದಾರೆ. ರಸ್ತೆಯ ಬದಿಯಿಂದ ಕೇಬಲ್ ಲೈನ್‌ಗಳು ಹೋಗುತ್ತಿದ್ದು ಕೆಲವೊಂದು ಕಡೆ ಮಾತ್ರ ರಸ್ತೆಗೆ ಹಾನಿ ಯಾಗಿದ್ದು ಅದನ್ನು ಅವರೇ ಸರಿ ಪಡಿಸುತ್ತಾರೆ. ಉಳಿದಂತೆ ರಸ್ತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.